ನನ್ನಮ್ಮ
ಪ್ರೀತಿ ದಿನಾನೂ ಹುಟ್ಟೋಕಾಗಲ್ಲ…
ಎಷ್ಟೇ ದುಡ್ಡ್ ಇದ್ರೂ ಏನ್ ಅಂತೇ
ಅವಳ ಪ್ರೀತಿಗೆ ಬೆಲೆ ಕಟ್ಟೋಕಾಗಲ್ಲ…
ತಪ್ಪ ಮಾಡಿದ್ರು ಒಳ್ಳೇದೇ ಬಯಸ್ತಾಳೆ..
ಯಾವ ದೇವರನೂ ಅವಳನ್ನು ಮಿರ್ಸೋಕಾಗಲ್ಲ..
ಇನ್ ಎಷ್ಟ ಹೇಳಿ ನನ್ನ ಅಮ್ಮ ಬಗ್ಗೆ !!
ಈ ಜನ್ಮದಲ್ಲಿ ಅವಳ ಋಣ ತೀರಿಸೋಕ್ಕ್ ಆಗಲ್ಲ…
ಲವ್ ಯು ಮಾ ❤❤
🙏ಒಂಬತ್ತು ತಿಂಗಳು ಗರ್ಭದಲ್ಲಿ ಇರಿಸಿ,
ಹಲವಾರು ಸಂಕಟಗಳನ್ನು ಅನುಭವಿಸಿ,
ಹಾರೈಕೆ ಮಾಡಿ, ಜನ್ಮ ಕೊಟ್ಟಳು ಏನಗೆ ನನ್ನಮ್ಮ.❤❤
ಅವಳ ಮಡಿಲೆ ಸ್ವರ್ಗವು ನನಗೆ ಇನ್ನೇನು ಬೇಡಮ್ಮ.
ಅತ್ತಾಗ ಲಾಲಿಸಿ ಪಾಲಿಸಿ ಮುದ್ದಾಡಿದಳು ನನ್ನನ್ನ,
ನಾನು ನಕ್ಕಾಗ ತನ್ನೆಲ್ಲಾ ನೋವನ್ನು ಮರೆತು
ಮಗುವಲ್ಲಿ ಮಗುವಾಗುವಳು ನನ್ನಮ್ಮ.
ಅಕ್ಕರೆಯ ತುತ್ತ ನಿಟ್ಟು, ಜೋಪಾನವಾಗಿ ನೋಡಿಕೊಂಡು…
ನನ್ನಯ ಮೊದಲ ಗುರು ಆಗಿಹಳು ನನ್ನಮ್ಮ.❤❤
ಸಾವಿರ ಜನ್ಮ ಹುಟ್ಟಿ ಬಂದರು ತೀರಿಸಲಾಗದು ಅವಳ ಋಣವನ್ನ.
ನನ್ನಯ ಜೀವನದಲ್ಲಿ ಕಾಣುವ ದೇವರು
ಒಬ್ಬರೇ ಆಗಿಹರು ಅದುವೇ ನನ್ನಮ್ಮ. 🙏
🙏 ಅಮ್ಮನ ಮಡಿಲು 🙏
🙏 ಹುಟ್ಟಿದೆ ಅಮ್ಮನ ಗರ್ಭದಿಂದ,
ಬೆಳೆಯುತ್ತಾ ಬಂದೆ ಅಮ್ಮನ ಮಡಿಲಿನಿಂದ,
ತುತ್ತಿಟ್ಟು ಉಣಿಸುತ್ತಾ ಬೆಳೆಸಿದಳು ಪ್ರೀತಿಯಿಂದ,
ನಾ ನಕ್ಕಾಗ ನಕ್ಕಳು, ನಾ ಅತ್ತಾಗ ಅತ್ತಳು,
ಪ್ರತಿ ಕ್ಷಣಾನು ನನಗಾಗಿ ಜೀವಿಸುತ್ತಾ ಬಂದಳು ನನ್ನವ್ವ,
ತೀರಿಸಲಾಗದು ಅವಳ ಋಣವ,
ಏಳೇಳು ಜನ್ಮಕ್ಕೂ ಇವಳ ಮಡಿಲೆ ನನಗೆ ಸಿಗಲವ್ವ.🙏
☔ ಮಳೆಯಲ್ಲಿ ಕೊಡೆಯಾಗಿ
😶🌫ಚಳಿಯಲ್ಲಿ ಹೊದಿಕೆಗಾಗಿ
🌞ಬಿಸಿಲಲ್ಲಿ ನೆರಳಾಗಿ
👁ಕಾಪಾಡಿದೆ ಕಣ್ಣ ರೆಪ್ಪೆಯಾಗಿ
ನೀ ಕೊಟ್ಟ ಜೀವವಿದು 👼
❤ಇಡುವೆ ನಿನ್ನ ಮುಡಿಪಾಗಿ❤
💐ಚಿಂತೆ💐
ಅವ್ವ ಮನೆಗಾಗಿ ಯಾಕ ಮಾಡತಿ ಚಿಂತೆ
ಜಗದಾಗ ಎಲ್ಲರಿಗೂ ಒಂದಲ್ಲ ಒಂದು ಕಂತೆ
ಮನೆ ಗಂಡ ಮಕ್ಕಳಿಗಾಗಿ ನೀ ಮಾಡತಿ ಭಾಳ ಚಿಂತಿ
ದೇವರು ಅವರ ಹಣೆಲಿ ಹೀಗೆ ಬರೆದಿರುವನು ಸಂತಿ llಹಲವಾರು ದೇವರಿಗೆ ಹರಕೆಯನಿತ್ತೆ ನಿನ್ನ ಚಿಂತೆ
ದೇವರು ನೋಡುತ್ತಿಲ್ಲ ಸಮಯಕ್ಕಾಗಿ ಕಾಯುವಂತೆ
ಕಷ್ಟಗಳು ನೀಡುವನು ನೀ ಹೇಗೆ ಸಹಿಸಿಕೊಳ್ಳುತಿಯಂತೆ
ನಿನ್ನ ಸಹನೆಗೆ ತೋರುವನು ಒಮ್ಮೆ ಅಭಯ ಹಸ್ತವಂತೆ llನಿನ್ನ ನಂಬಿಕೆ ಹುಸಿಗೊಳಿಸದೆ ನಿವಾರಿಸುವ ದಿನ ಬಂತೆ
ಆಗ ನೀ ಮರೆಯದಿರು ಆ ದೇವರ ಪಾದ ಕಮಲವಂತೆ
ಮನುಜರನ್ನು ನಂಬಿ ಕೆಟ್ಟವರು ಈ ಜಗದಲ್ಲಿರುವಂತೆ
ದೇವರನ್ನು ನಂಬಿ ಕೆಟ್ಟವರಿಲ್ಲ ಈ ಬಾಳ ಸಂತೆಯಲ್ಲಂತೆ ll