ನಮ್ಮ ಬದುಕಿನ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರ ಹೇಗೆ ಅಲ್ಲ ಎನ್ನುವುದನ್ನು ಈ ಚಿಕ್ಕ ಮತ್ತು ಬಲವಾದ ಸಂದೇಶಉಳ್ಳ ಕಥೆಯು ನಮಗೆ ತಿಳಿಸುತ್ತದೆ.
ನಾವು ಬದುಕಿನಲ್ಲಿ ಕೆಲವು ಸಲ ಅಸಾಧ್ಯವಾಗಿರುವದನ್ನು ಸಾಧಿಸಲು ಹೋಗಿ ಎಡವಟ್ಟು ಮಾಡಿಕೊಂಡು ನಿರಾಶೆಯನ್ನು ಹೊಂದುತ್ತೇವೆ ಮತ್ತು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತೇವೆ. ಪ್ರತಿ ಸೋಲು ನಮ್ಮ ಜಾಗೃತೆಯ ಭಾವದ ಕೊರತೆಯಿಂದ ಸಂಭವಿಸುತ್ತಿರುತ್ತವೆ. ನಾವು ಯಾವುದೇ ಕ್ಷೇತ್ರದಲ್ಲಿ ಹೆಸರು, ಸಾಧನೆ ಮಾಡಲು ಹೋಗಲಿ ಮೊದಲಿಗೆ ನಾವು ಅಲ್ಲಿ ಗೆಲುವಿನ ಮಾನದಂಡದ ಸೂತ್ರವನ್ನು ಕೈ ಹಿಡಿಯುವದಿಲ್ಲ.
ನಮ್ಮ ಜೀವನದ ಸಫಲತೆಯ, ಯಶಸ್ವಿಗೆ ಬೇಕಾದ ಶೃದ್ದಾವಂತ ದುಡಿಮೆ, ಪ್ರಾಮಾಣಿಕ ಪ್ರಯತ್ನವನ್ನು ನಾವು ಎಂದಿಗೂ ಮಾಡುವುದಿಲ್ಲ. ಹಾಗಾಗಿ ನಮ್ಮ ಬದುಕಿನ ಎಲ್ಲ ವೈಫಲ್ಯಗಳಿಗೆ ಸಾವೇ ಅಂತಿಮ ಕಾರಣವೆಂದು ನೆಪ ಹೇಳಿ ಆತ್ಮಹತ್ಯೆಯಂತಹ ಪಾಪದ ಕೆಲಸಕ್ಕೆ ಕೈ ಹಾಕುತ್ತೇವೆ.
ಒಮ್ಮೆ ಒಂದು ಊರಿನಲ್ಲಿ ಒಬ್ಬ ವ್ಯಕ್ತಿ ಜೀವನದ ಸೋಲುಗಳಿಂದ ಕೆಂಗೆಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಸಾಗುತ್ತಿದ್ದನು. ಆತನಿಗೆ ಒಬ್ಬ ಫಕೀರ ಸಿಕ್ಕು, ಆತನ ವೃತ್ತಾಂತ ಕೇಳಿ
ಫಕೀರ ಆತನನ್ನು ಒಬ್ಬ ಅನುಭಾವಿ ಧನಿಕ ವ್ಯಕ್ತಿಯ ಹತ್ತಿರ ಕರೆದುಕೊಂಡು ಬಂದನು. ಆಗ ಧನಿಕ, ಫಕೀರನಿಗೆ ಕೇಳಿದನು, ಈ ಯುವಕನನ್ನು ಇಲ್ಲಿಗೇಕೆ ಕರೆದುಕೊಂಡು ಬಂದಿರುವೆ.? ಎಂದನು.
ಫಕೀರ ಇದಕ್ಕೆ ಪ್ರತ್ಯುತ್ತರವಾಗಿ,ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ವ್ಯಕ್ತಿಯ ವಿಷಯವನ್ನು ಧನಿಕನಿಗೆ ತಿಳಿಸುತ್ತಾನೆ.
ನೀನು ಈಗ ಸಾಯುವುದಿಲ್ಲವೇ ?
ಆಗ ಫಕೀರನ ಮಾತಿನ ಒಳಮರ್ಮ ಧನಿಕನಿಗೆ ತಿಳಿಯುತ್ತದೆ. ಧನಿಕ ಆ ವ್ಯಕ್ತಿಗೆ ಕೇಳುತ್ತಾನೆ ‘ನಿನ್ನ ಒಂದು ಕಣ್ಣು ನನಗೀಗ ತುರ್ತು ಬೇಕಾಗಿದೆ, ನಾನು ನಿನ್ನ ಒಂದೇ ಒಂದು ಕಣ್ಣಿಗೆ ಐವತ್ತು ಲಕ್ಷ ರೂಪಾಯಿ ಬೆಲೆ ಕೊಡುತ್ತೇನೆ’ ನಿನ್ನ ಒಂದು ಕಣ್ಣು ನನಗೆ ಕೊಡುವೆಯಾ.? ಎಂದನು ಆಗ ಆ ವ್ಯಕ್ತಿ ಧನಿಕನ ಮಾತು ಕೇಳಿ ಆಶ್ಚರ್ಯಚಕಿತನಾಗಿ ನಿಂತನು. ಆತ ಜೀವನದಲ್ಲಿ ಮೊದಲ ಬಾರಿಗೆ ತನ್ನ ಒಂದೇ ಒಂದು ಕಣ್ಣಿಗೆ ಐವತ್ತು ಲಕ್ಷ ರೂಪಾಯಿ ಬೆಲೆ ಬಾಳುವದಾಗಿದೆ ಎಂಬುವದನ್ನು ಕೇಳಿ ಆ ವ್ಯಕ್ತಿ ಬೆರಗಾಗಿ ನಿಂತನು. ಧನಿಕ ಮಾತು ಮುಂದುವರಿಸಿ ‘ಚಿಂತಿಸಬೇಡ ನಿನ್ನ ಒಂದು ಕಣ್ಣಿನ ಜೊತೆಗೆ ನನಗೆ ನಿನ್ನ ಇನ್ನೊಂದು ಕಣ್ಣು ಸೇರಿ ಎರಡು ಕಣ್ಣು ಕೊಟ್ಟರೆ, ಎರಡು ಕಣ್ಣು ಸೇರಿಸಿ,
ನಾನು ಒಂದು ಕೋಟಿ ರೂಪಾಯಿ ಪೂರ್ತಿ ಹಣ ಕೊಡುತ್ತೇನೆ’ ಎಂದನು. ಧನಿಕನ ಮಾತು ಕೇಳಿದ ವ್ಯಕ್ತಿಗೆ ಈಗ ಬಲು ದಿಗಿಲು ಹಿಡಿಯಿತು. ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ವ್ಯಕ್ತಿ ಧನಿಕನು ಕೊಡುವ ಹಣದ ಮಾತು ಕೇಳಿ ಜ್ಞಾನೋದಯವಾಗಿ ಆ ವ್ಯಕ್ತಿ ಧನಿಕನಿಗೆ ಹೇಳಿದನಂತೆ ‘ನೀನು ನನಗೆ ನನ್ನ ಎರಡು ಕಣ್ಣಿಗಳಿಗಾಗಿ ಒಂದಲ್ಲ, ಎರಡು ಕೋಟಿ ರೂಪಾಯಿ ಕೊಟ್ಟರು ನಾನು ನಿನಗೆ ನನ್ನ ಒಂದೇ ಒಂದು ಕಣ್ಣನ್ನು ಸಹ ಕೊಡುವದಿಲ್ಲ’ ಎಂದನು.
ಆಗ ಪಕ್ಕದಲ್ಲಿದ್ದ ಫಕೀರ ಆ ವ್ಯಕ್ತಿಗೆ ಕೇಳಿದನು ನೀನೇ ಅಲ್ಲವೇ?. ಈ ಹಿಂದೆ ಸಾಯಬೇಕು ಎಂದು ಹೇಳಿದವನು, ಅರೇ ನಿನಗೆ ಇದೇನಾಯಿತು?. ನೀನು ಈಗ ಸಾಯುವದಿಲ್ಲವೆ? ಎಂದು ಕೇಳಿದನು. ಆಗ ಆ ವ್ಯಕ್ತಿ ಹೇಳಿದ’ ನನ್ನ ಹತ್ತಿರ ಕೆಲವೇ ಕ್ಷಣಗಳಲ್ಲಿ ಏನೇನು ಇಲ್ಲ ಎಂಬುವದು ನಿಜವಿತ್ತು’
‘ಈಗ ನನ್ನ ಮೌಲ್ಯವನ್ನು ನೀನು ನಿಜವಾಗಿಯೂ ತೋರಿಸಿಕೊಟ್ಟು, ನನಗೆ ಬದುಕಲು ಪ್ರೇರಣೆ ನೀಡಿದೆ’. ‘ನಾನು ಸತ್ತು ಹೋಗುವ ಮುನ್ನ ಮೊಟ್ಟಮೊದಲು ಬಾರಿಗೆ ನನ್ನ ಕಣ್ತೆರಿಸಿದೆ’ ‘ಬದುಕಿನಲ್ಲಿ ನನಗಿಂದು ಬರೀ ನನ್ನ ಕಣ್ಣುಗಳು ಬೆಲೆ ಕೇಳಿ ನನಗೆ ತುಂಬಾ ಆಶ್ಚರ್ಯವಾಯಿತು’. ‘ನನ್ನ ಜೀವಮಾನದಲ್ಲಿ ನಾನು ತೆಗೆದುಕೊಂಡ ಆತ್ಮಹತ್ಯೆಯ ನಿರ್ಧಾರ ನಿಜಕ್ಕೂ ನನಗೆ ಇಂದು ನಾಚಿಕೆ ಎನಿಸಿತು’. ‘ಮೇಲಿರುವ ಆ ಭಗವಂತ ಈ ಧನಿಕನ ಮಾತಿನ ಮೂಲಕ ನನಗೆ ನನ್ನ ಜೀವನದ ಮೌಲ್ಯವನ್ನು ನನಗೆ ತಿಳಿಸಿಕೊಟ್ಟನು’. ‘ಬರೀ ನನ್ನ ಕಣ್ಣುಗಳ ಬೆಲೆ ಇಷ್ಟೊಂದು ಬೆಲೆ ಬಾಳುವದಾಗಿದೆ ಎಂದರೆ, ಇನ್ನೂ ನನ್ನ ನಿಜವಾಗಿಯೂ ನನ್ನ ಮೌಲ್ಯ ಬಹು ದೊಡ್ಡದಾಗಿದೆ ಎಂಬುವದನ್ನು ತಿಳಿಸಿದೆ.!’. ನನ್ನ ಅಂತರಂಗದಲ್ಲಿ ಆತ್ಮಜ್ಞಾನ ಮೂಡಿಸಿದ ಬಡ ಫಕೀರನೇ ನಿನಗೆ ಅನಂತ ವಂದನೆಗಳು’ ಎಂದು ಹೇಳಿ ಫಕೀರನ ಕಾಲಿಗೇರಗಿದನು.
ಇಂದು ನಿಜಕ್ಕೂ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವರ ಸಂಖ್ಯೆ ಕೇಳಿದರೆ ಬಲು ಗಾಬರಿಯಾಗುವದು. ಪ್ರತಿಯೊಬ್ಬರ ಬದುಕಿನಲ್ಲಿ ಮುಂದೆ ಏನಾಗುವದು ಎಂದು ಬಲ್ಲವರಾರು.?
ಪ್ರತಿ ಮನುಷ್ಯನ ವಿಫಲತೆಗೆ ನಮ್ಮ ನಿರಾಶೆಗಳಿಗೆ ಕಾರಣಗಳು ನಮ್ಮ ಅಕ್ಕಪಕ್ಕದಲ್ಲಿವೆ.
ಅವುಗಳನ್ನು ನಾವು ಹುಡಕಬೇಕು, ಪರಿಹರಿಸಿಕೊಳ್ಳಬೇಕು.
ಕೊನೆಯದಾಗಿ ಹೇಳುವದಾದರೆ ನಮ್ಮ ಬದುಕಿನ ಪ್ರತಿ ಸಮಸ್ಯೆಗೆ ಸಾವೇ ಅಂತಿಮವಲ್ಲ.!
✍🏻 ದಶರಥ ಕೋರಿ ಶಿಕ್ಷಕರು ಇಂಡಿ