ಜೀವನದ ಅರ್ಥ ತಿಳಿಯದೆ ಇದ್ದಾಗ ಆಟದ ಓದು ಸಿಹಿ ನೆನಪು ಕಾಡಿದರೆ …
ಈಗ ಜೀವನವನ್ನೇ ಆಟ ಆಡಿಸುತ್ತಿದೆ ಒಂದು ಕಹಿ ನೆನೆಪು …
ಮನದಿ ಆಸೆಗಳು ನೂರಾರು, ಆದರೆ ಅವಗಳ ಆಸರೆ ಯಾರು ?
ಕಣ್ಣಿನಲಿ ಕನಸುಗಳು ಸಾವಿರಾರು, ಆದರೆ ಅವುಗಳಿಗೆ
ಸ್ಫೂರ್ತಿ ತುಂಬಿ ಪ್ರೋತ್ಸಾಹಿಸುವ ಪ್ರೇಮಿ ಯಾರು ?
ಇಷ್ಟ ಇಲ್ಲದವರ ಪ್ರೀತಿ
ಬೊಗಸೆಯಲ್ಲಿ ಹಿಡಿದ ನೀರಿನಂತೆ
ನಾವು ಎಷ್ಟೇ ಜೋಪಾನವಾಗಿ ಹಿಡಿದ್ರು ಜಾರಿಹೋಗುತ್ತೆ
ಕಾಲಾಂತರದಲ್ಲಿ ಕಾದಿದ್ದೇ ಕಾಯುವಿಕೆಯ ಅಲಿಸದೆ
ಕಾಲ ಕಸ ಮಾಡಿ ಜಾಡಿಸಿ ಒದ್ದು ಹೋದವಳ ಪ್ರೀತಿಗಾಗಿ
ಕಮರಿದ ಕನಸ ಕಟ್ಟುವ ಕೆಲಸದಲ್ಲಿ ನಾ ಅಂದು
ದಿನಗೂಲಿಯ ಆಳು
ದಿನ ದಿನ ಸಮಯ ಅಳತೆಯಿಲ್ಲದೆ ದುಡಿಸಿಕೊಂಡ
ಸಾಹುಕಾರತಿ ಅವಳು
ಪಡೆಯಲು ಇಳಿದ ನನಗೆ ಆಳದ ಅರಿವೆ ಅರಿಯದೆ ಅಲ್ಪ ನಾನು

ಪ್ರೀತಿ ಎಂಬ ಸಾಗರದಲ್ಲಿ ಪುಟ್ಟ ಮೀನುಗಳು ನಾವಿಬ್ಬರು,
ನನಗೆ ನೀನು, ನಿನಗೆ ನಾನು, ಸಾಕಲ್ವಾ….
ಪ್ರತಿ ಹೆಜ್ಜೆಯಲು ನಿನ್ನಯ ನೆರಳಾಗಿ ಜೊತೆಯಾಗಿರುವೆ,
ಹೀಗೆಲ್ಲಾ…. ಅದೆಷ್ಟೊ ಹುಚ್ಚು ಕನಸುಗಳನ್ನು ಕಂಡು
ಇನ್ನೂ ನಿನ್ನಯ ನೆನಪಲ್ಲೆ…..
ಜೀವಿಸುತ್ತಿರುವ ಹುಚ್ಚು ಪ್ರೇಮಿ ನಾನು.
– ಹೆಚ್ ಸಂಗಯ್ಯ

ಜೀವನದುದ್ದಕ್ಕೂ ಸಾಗುತಿದೆ ಪಯಣ
ನಗುವೆಂಬ ಮುಖವಾಡ ಧರಿಸಿ ಈ ಧರೆಯಲಿ,
ಅತ್ತರು ಕರಗದ ಮನಸ್ಸಿಲ್ಲ ಇಲ್ಲಿ ಯಾರಲಿ,
ಅದಕ್ಕೆಂದೇ… ನಗುತಾ ಸಾಗುತಿರುವೆ…..
ಈ ನಾಟಕೀಯ ಜೀವನದಲಿ…
– ಹೆಚ್ ಸಂಗಯ್ಯ

ಶ್ರೀ ಕೃಷ್ಣ ರಾಧೆಯನ್ನು ಎಷ್ಟು ಪ್ರೀತಿಸಿದನೋ …
ನಾನು ಅವರಷ್ಟು ಪ್ರೀತಿನ ಮಾಡದೆ ಇರಬಹುದು.
ಆದರೆ ಒಂದು ತಿಳ್ಕೊ ಬಂಗಾರ..
ನೀ ನನ್ನನ್ನು ಆಗಲಿದ ಘಳಿಗೆಇಂದ ಇವರೆಗೂ..
ರಾಧೇ ಕೃಷನನ್ನು ದೂರವಾದಾಗ..
ಕೃಷ್ಣ ಎಷ್ಟು ಸಂಕಟ ಪಟ್ಟನೋ..
ಅಷ್ಟೇ ಸರಿ ಸಮ ನಾನು ಸಂಕಟ ಪಡುತ್ತಾ ಇದ್ದೀನಿ..
ಏಕೆಂದರೆ ಕೃಷ್ಣ ರಾಧೇಯ ಮೇಲೆ ಇಟ್ಟಿರೋ ಪ್ರೀತಿ
ಎಷ್ಟು ಪವಿತ್ರವೋ ನನ್ನ ಪ್ರೀತಿ ಕೂಡ ಅಷ್ಟೇ ಪವಿತ್ರ…
– ಹೆಚ್ ಸಂಗಯ್ಯ

ನಗುವ ಪರಿಸ್ಥಿತಿ ದೂರವಾಗಿ
ನಗುವ ನಾಟಕ ಜೀವನ ನನ್ನದಾಗಿದೆ ಇಂದು.
ಕಾರಣಗಳು ಅನೇಕ..
ಆದರೆ ಹೇಳಿಕೊಳ್ಳಕೆ ಮನಸ್ಸಿಲ್ಲ.
ಹಾಗೆಯೇ ಕೇಳುವ ತಾಳ್ಮೆ ಇಲ್ಲಿ ಯಾರಿಗೂ ಇಲ್ಲ.
ಯಾಕಂದರೆ ಇಲ್ಲಿ ಯಾರಿಗೂ ಯಾರು ಆಗಲ್ಲ.
– ಹೆಚ್ ಸಂಗಯ್ಯ