ಸಾಗರ ಪುತ್ರ, ಸಾರಿನ ಮಿತ್ರ. | ಉಪ್ಪು |
ಗಿರಿಗಿರ ತಿರುಗುತ್ತದೆ ಸುಸ್ತಾಗಿ ಬರುತ್ತದೆ. | ಬುಗರಿ |
ಹಸಿರು ಗಿಡದ ಮೇಲೆ ಮೊಸರು ಚಲ್ಲಿದೆ. | ಮಲ್ಲಿಗೆ ಗಿಡ |
ಬೆಳ್ಳಿ ಸಮುದ್ರದ ಮೇಲೆ ಕಪ್ಪು ಸೂರ್ಯ. | ಕಣ್ಣು |
ಅಂಗಡಿಯಿಂದ ತಂದು ಮುಂದಿಟ್ಟುಕೂಂಡು ಅಳೋದು. | ಈರುಳ್ಳಿ |
ಅಗಲವಾದ ಮಾಳಿಗೆಗೆ ಒಂದೆ ಕಂಬ. | ಛತ್ರಿ |
ಎರಡು ಬಾವಿಗೆ ನಡುವೆ ಒಂದೆ ಕಣ್ಣು. | ಮೂಗು |
ಅಪ್ಪನ ದುಡ್ಡು ಎಣಿಸೂಕಾಗಲ್ಲ ಅಮ್ಮನ ಹಾಸಿಗೆ ಮೂಡಿಸೋಕಾಗಲ್ಲ. | ಆಕಾಶ |
ನೀಲಿ ಸಾಗರದಲ್ಲಿ ಬೆಳ್ಳಿಯ ಮೀನುಗಳು. | ತಾರೆಗಳು |
ಲಟಪಟ ಲೇಡಿ ಒಂದೆ ಕಣ್ಣು. | ಸೂಜಿ |
ಕಣ್ಣಿಗೆ ಕಾಣಲಿಲ್ಲ ಕೈಗೆ ಸಿಗೂದಲ್ಲ. | ಗಾಳಿ |
ಮುಳ್ಳುಗಳಿವೆ ಅಪಾಯವಿಲ್ಲ, ಸಂಖ್ಯೆಗಳಿವೆ ಲೆಕ್ಕದ ಪುಸ್ತಕವಲ್ಲ, ಗಂಟೆ ಹೊಡೆಯುತ್ತದೆ ದೇವಾಲಯವಲ್ಲ. | ಗಡಿಯಾರ |
ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿ ನುಂಗಣ್ಣ. | ಬಾಳೆಹಣ್ಣು |
ಬಿಳಿ ಸರದಾರನಿಗೆ ಕರಿ ಟೋಪಿ. | ಬೆಂಕಿಕಡ್ಡಿ |