ಕನ್ನಡ ನುಡಿಮುತ್ತುಗಳು – ನುಡಿಮುತ್ತುಗಳು ವ್ಯಕ್ತಿಯ ಭಾವನೆಗಳನ್ನು ಸಾಮಾಜಿಕವಾಗಿ ಹಂಚಿಕೊಳ್ಳುಲು ಮತ್ತು ಸಂಬಂಧಗಳನ್ನು ಸ್ಥಿರಗೊಳಿಸುವ ಶಕ್ತಿಯನ್ನು ಹೊಂದಿವೆ. ನುಡಿಮುತ್ತುಗಳ ಸರಳತೆ, ನಿಖರತೆ ಮತ್ತು ಅದ್ದುತ ಅರ್ಥಗಳು ಸಮರ್ಥವಾದ ಸಂಬಂಧಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತವೆ. ಓದುವ ವ್ಯಕ್ತಿಯ ವ್ಯೆಕ್ತಿತ್ವವನ್ನು ಹೆಚ್ಚಿಸಿ ಸಮಾಜದ ಕ್ಷೇಮವನ್ನು ಬೆಳೆಸುತ್ತವೆ. ಅಂತಹ ಕೆಲವು ನುಡಿಮುತ್ತುಗಳು ನಿಮಗಾಗಿ ಇಲ್ಲಿವೆ.
ನನ್ನ ದೃಷ್ಟಿಯಲ್ಲಿ ಹೆಣ್ಣು ಕೇವಲ ಮಾನುಷಿಯಲ್ಲ, ಅಬಲೆಯೂ ಅಲ್ಲ. ಅವಳೊಂದು ಮಹಾಶಕ್ತಿ.
– ಕುವೆಂಪು
ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ.
– ಕುವೆಂಪು
ಮತ ನಮಗೊಂದು ದೊಡ್ಡ ಬಂಧನವಾಗಿದೆ. ನಾಡಿನ ಏಳ್ಗೆಯ ಕುತ್ತಿಗೆಗೆ ಉರುಳಾಗಿದೆ.
– ಕುವೆಂಪು
ನನಗೆ ಯಾವ ಜಾತಿಯೂ ಇಲ್ಲ. ಆದ್ದರಿಂದ ಜಾತಿ ದ್ವೇಷವೂ ಇಲ್ಲ.
– ಕುವೆಂಪು
ಹಸಿದವರಿಗೆ ಬೇಕಾದುದು ಅನ್ನ; ಮತ, ತತ್ವ ಮತ್ತು ಕಲೆಗಳ ಕನಸಿನುಣಿಸಲ್ಲ.
– ಕುವೆಂಪು
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜಮತಕೆ
ಓ, ಬನ್ನಿ, ಸೋದರರೆ, ವಿಶ್ವಪಥಕೆ!
– ಕುವೆಂಪು
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
– ಕುವೆಂಪು
ದೇವರ ವಿಷಯ ಎತ್ತಿದಾಗ ಬುದ್ದನ ವಕ್ತ್ರದಿಂದ ಒಂದು ಮಾತೂ ಬರುವುದಿಲ್ಲ. ಇಲ್ಲವೆನ್ನಲೂ ಇಲ್ಲ. ಪರಮಸಿದ್ದಿಯನ್ನು ಪಡೆದಾತನ ಲಕ್ಷಣವದು.
– ಕುವೆಂಪು
ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ
– ಕುವೆಂಪು
ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ
ಕೊಚ್ಚಿ ಹೋಗಲಿ, ಬರಲಿ ವಿಜ್ಞಾನ ಬುದ್ಧಿ
ವೇದಪ್ರಮಾಣದ ಮರುಮರೀಚಿಕೆಯಲ್ಲಿ
ನೀರರಸಿ ಕೆಡದಿರಲಿ ಸ್ವಾತಂತ್ರ್ಯಸಿದ್ಧಿ
ತರುಣರಿರ, ಎದ್ದೇಳಿ! ಎಚ್ಚರಗೊಳ್ಳಿ! ಬಾಳಿ
– ಕುವೆಂಪು
ಕೋತಿಗೆ ಗುಣವಿಲ್ಲ
ಮಾತಿಗೆ ಕೊನೆಯಿಲ್ಲ
ಸೋತು ಹೋದವನಿಗೆ ಜಗವಿಲ್ಲ
ಅರಿತವನಿಗೆ ಜಾತಿಯೇ ಇಲ್ಲ
ಸರ್ವಜ್ಞ
ಕೊಟ್ಟು ಕೆಟ್ಟವರಿಲ್ಲ
ತಿಂದು ಬದುಕಿದವರಿಲ್ಲ
ಕೊಟ್ಟು ಕದಿಯಲು ಬೇಡ
ಕೊಟ್ಟು ಆಡಿಕೊಳ್ಳಬೇಡ
ಸರ್ವಜ್ಞ
ಕವಿಗೆ ಗಾನವು ಲೇಸು
ಕಿವಿಗೆ ನವರಸ ಲೇಸು
ಭವ ಭಂದ ಕಳೆವ ಗುರು ಲೇಸು
ಮುಕ್ತಿಗೆ ಶಿವ ಮಂತ್ರ ಲೇಸು
ಸರ್ವಜ್ಞ
ಪುಸ್ತಕದ ಕೊನೆಯ ಪುಟವನ್ನು ತಿರುವಿದಾಗ
ಒಬ್ಬ ಸ್ನೇಹಿತನನ್ನು ಕಳೆದುಕೊಂಡ ಭಾವ ನಿಮಗೆ ಬಂದರೆ
ಆಗ ನೀವು ಒಂದು ಒಳ್ಳೆಯ ಪುಸ್ತಕವನ್ನು ಓದಿದ್ದೀರಿ ಎಂದರ್ಥ
ಪಾಲ್ ಸ್ವೀನಿ
ಮಾಡುವ ಕೆಲಸ ಯಾವುದಾದರೇನು,
ಅದು ನಮಗೆ ಒಂದು ತುತ್ತು ಅನ್ನ,
ಮಾನ ಮುಚ್ಚಲು ಬಟ್ಟೆ ಕೊಡುತ್ತಿದ್ದರೆ..
ಅದರ ಮೇಲೆ ಗೌರವ ಇರಲಿ.
ಆಗುವುದೆಲ್ಲವೂ ಒಳ್ಳೆಯದೇ ಆಗಲಿದೆ ಎಂಬ ಸಕಾರಾತ್ಮಕ ಭಾವನೆ ಇದ್ದರೆ, ಕೆಟ್ಟ ಪರಿಸ್ಥಿತಿಗಳು ಸಹ ಪರಿವರ್ತನೆಗೊಳ್ಳಬಹುದು.
ಕೊಂಕು ಸೃಷ್ಟಿಯಲ್ಲಿ ಇಲ್ಲ, ನೋಡುವವರ ದೃಷ್ಟಿಯಲ್ಲಿದೆ.
ಶಾಂತಿಯಿಂದ ಸಾಧಿಸಲು ಆಗದೆ ಇರುವುದು ಯಾವುದೂ ಇಲ್ಲ.
ನಾವು ಸರಿಯಾದ ದೃಷ್ಟಿಕೋನದಲ್ಲಿ ನೋಡಿದಾಗ ಎಲ್ಲವೂ ಸುಂದರವಾಗಿ ಕಾಣಿಸುತ್ತದೆ.
ಸಂತೋಷವಾಗಿರಲು ೩ ಸೂತ್ರಗಳು
ಆಗಿ ಹೋದದ್ದನ್ನು ಬಿಟ್ಟುಬಿಡಿ
ಉಳಿದಿರುವುದಕ್ಕೆ ಕೃತಜ್ಞರಾಗಿರಿ
ಮುಂದೆ ಆಗುವುದನ್ನು ಎದುರುನೋಡಿರಿ
ಜೀವನದಲ್ಲಿ ಬೆಳೆಯಬೇಕಾದರೆ ಹಣವನ್ನು ಮಿತವಾಗಿ ಬಳಸಬೇಕು,
ಸಮಾಜದಲ್ಲಿ ಬೆಳೆಯಬೇಕಾದರೆ ಪದಗಳನ್ನು ಮಿತವಾಗಿ ಬಳಸಬೇಕು.
ಮೋಸದ ಅರಿವಾದಾಗ ಮೂರ್ಖನಾದೆ ಎಂದು ಬೇಜಾರಾಗಬೇಡಿ, ಸತ್ಯದ ಅರಿವಾಯಿತು ಎಂದು ಖುಷಿಪಡಿ.
ನೀರಿಲ್ಲದ ನದಿ..
ಅತಿಥಿಯಿಲ್ಲದ ಮನೆ..
ಫಲವಿಲ್ಲದ ವೃಕ್ಷ.. ಹೇಗೆ ವ್ಯರ್ಥವೋ
ಹಾಗೆಯೇ “ಗುರಿ ಮತ್ತು ಗುರಿ” ಇಲ್ಲದಿದ್ದರೆ ಬದುಕು ಕೂಡ ವ್ಯರ್ಥ.
ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಶ್ರೇಷ್ಠ.
ಕೆಲವರ ಜೀವನದಲ್ಲಿ ಬಂದ ಬಿರುಗಾಳಿ ಬದುಕು ಹಾಳು ಮಾಡುತ್ತದೆ, ಆದರೆ ಇನ್ನು ಕೆಲವರಿಗೆ ದಾರಿ ಸ್ವಚ್ಛಗೊಳಿಸುತ್ತದೆ.
ತನ್ನ ಬಳಿ ಎಷ್ಟು ಇದೆಯೋ ಅಷ್ಟಕ್ಕೆ ತೃಪ್ತಿಪಟ್ಟವನೇ ಅತೀ ದೊಡ್ಡ ಶ್ರೀಮಂತ.
ನಮ್ಮ ನಮ್ಮ ಬಗ್ಗೆ ಮಾತನಾಡಿಕೊಳ್ಳುವ ಬದಲಿಗೆ, ನಾವು ಪರಸ್ಪರ ಮಾತನಾಡಿದ್ದರೆ ಪ್ರಪಂಚದ ಎಷ್ಟೋ ಸಮಸ್ಯೆಗಳು ಕಣ್ಮರೆಯಾಗುತಿದ್ದವು.
ನಿಮ್ಮ ಕೆಟ್ಟ ಪರಿಸ್ಥಿತಿಯಿಂದ ನೀವು ಆಯಾಸಗೊಂಡಿದ್ದರೂ ಭರವಸೆ ಕಳೆದುಕೊಳ್ಳಬೇಡಿ, ಏಕೆಂದರೆ ಅದು ಶಾಶ್ವತವಲ್ಲ.
ಜೀವನದಲ್ಲಿ ಬರುವ ಸಣ್ಣ ಸಣ್ಣ ವಿಷಯಗಳನ್ನು ಆನಂದಿಸಿ ಏಕೆಂದರೆ ಅವುಗಳು ಬರುವುದು ಒಮ್ಮೆ ಮಾತ್ರ
ಆ ದಾರಿ ಹೀಗಿದೆ?..ಎಂದು ತಿಳಿಯಬೇಕಾದರೆ, ಆ ದಾರಿಯಲ್ಲಿ ನಡೆದು ನೋಡಲೇಬೇಕು
ನನ್ನ ಜೀವನ
ನನ್ನ ಆಯ್ಕೆಗಳು
ನನ್ನ ತಪ್ಪುಗಳು
ನೀವು ಚಿಂತಿಸಬೇಡಿ
ನನ್ನ ಬಗ್ಗೆ ಮಾತನಾಡುವ ಮೊದಲು
ನಿಮ್ಮ ಸ್ವಂತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ,
ಮಾತನಾಡಲು ಅದು ನಿಮ್ಮ ಕಥೆಯಲ್ಲ.
ಸಾವಿರ ಸ್ನೇಹಿತರನ್ನು
ಮಾಡಿಕೊಳ್ಳುವುದು ಸ್ನೇಹವಲ್ಲ,
ನಂಬಿಕೆ ಇಟ್ಟು ಮಾಡಿದ
ಒಂದು ಸ್ನೇಹವನ್ನು
ಸಾಯುವವರೆಗೂ ಕಾಪಾಡಿಕೊಳ್ಳುವುದೇ
ನಿಜವಾದ ಸ್ನೇಹ..
ನಿಮ್ಮ ಹಿರಿಯರೊಂದಿಗೆ ಸಮಯ ಕಳೆಯಿರಿ.
ಏಕೆಂದರೆ ಎಲ್ಲವನ್ನೂ ಗೂಗಲ್ ಹುಡುಕಿಕೊಡುವುದಿಲ್ಲ.
ಬದಲಾವಣೆ ಇಲ್ಲದೆ
ಪ್ರಗತಿ ಅಸಾಧ್ಯ
ಮತ್ತು ಯಾರಿಗೆ ತಮ್ಮ
ಮನಸ್ಸನ್ನು ಬದಲಾಯಿಸಲು
ಸಾಧ್ಯವಿಲ್ಲವೋ ..
ಅವರು ಏನನ್ನೂ
ಬದಲಾಯಿಸಲು ಸಾಧ್ಯವಿಲ್ಲ
ಮೂರನೇ ವ್ಯಕ್ತಿಯ ಬಗ್ಗೆ
ಮಾತನಾಡುವ ಗುಂಪಿನ
ಸದಸ್ಯರಾಗಬೇಡಿ, ಏಕೆಂದರೆ
ನೀವು ಎದ್ದು ಬಂದ ಮೇಲೆ,
ಮೂರನೇ ವ್ಯಕ್ತಿ ನೀವೇ ಆಗಿರುತ್ತೀರಿ
ಸಮಯ ಮತ್ತು ಒಳ್ಳೆಯ ಸ್ನೇಹಿತರು
ನಮ್ಮ ವಯಸ್ಸಾದಂತೆ
ಹೆಚ್ಚು ಬೆಲೆ ಪಡೆಯುತ್ತಾರೆ
ಹಿಂದೆ ಆಗಿ ಹೋಗಿರೋದನ್ನು ಪಾಠ ಅನ್ಕೊಂಡು
ಗುರಿಯ ಮೇಲೆ ಗಮನವಹಿಸಿ
ಸೇಡು ಇಟ್ಟುಕೊಳ್ಳುವುದರಿಂದ
ನೀನೇನು ಬಲಶಾಲಿ ಆಗುವುದಿಲ್ಲ, ಅದು ನಿನ್ನ ಮನಸ್ಸನ್ನು ಕಲ್ಮಶ ಮಾಡುತ್ತದೆ.
ಕ್ಷಮಿಸುದರಿಂದ ನೀನೇನು ಬಲಹೀನ ಆಗುವುದಿಲ್ಲ ಅದು ನಿನ್ನ ಮನಸ್ಸನ್ನ ಹಗುರ ಮಾಡುತ್ತದೆ..
ಪ್ರತಿಫಲ ಅಪೇಕ್ಷಿಸದೆ ಮಾಡಿದ ಸಹಾಯ ಸುಮ್ಮನೆ ವ್ಯರ್ಥವಾಗುವುದಿಲ್ಲ. ಬದಲಿಗೆ ಭವಿಷ್ಯದಲ್ಲಿ ನಿರೀಕ್ಷೆಗೂ ಮೀರಿದ ಫಲ ಕೊಡುತ್ತದೆ..
ನಿಮ್ಮ ಸಂತೋಷವನ್ನು ಇತರರಲ್ಲಿ ಎಂದಿಗೂ ಹುಡುಕಬೇಡಿ,
ಅದು ನಿಮ್ಮನ್ನು ಏಕಾಂಗಿಯನ್ನಾಗಿ ಮಾಡುತ್ತದೆ,
ನಿಮ್ಮಲ್ಲಿಯೇ ಹುಡುಕಿ : ನೀವು ಏಕಾಂಗಿಯಾಗಿರುವಾಗಲೂ ಸಂತೋಷವಾಗಿರುತ್ತಿರಿ..
ಹಿಂದಿನ ಕಾಲದಲ್ಲಿ ಮನುಷ್ಯನ ಮನಸ್ಸು ಬಂಗಾರವಾಗಿತ್ತು ಗುಡಿಯ ಮೂರ್ತಿಗಳು ಕಲ್ಲಾಗಿದ್ದವು ಆದರೆ ಈಗ ಗುಡಿಯ ಮೂರ್ತಿ ಬಂಗಾರವಾಗಿವೆ ಮನುಷ್ಯನ ಮನಸ್ಸು ಕಲ್ಲಾಗಿವೆ..
ಸಮಸ್ಯೆಗಳಿಂದ ತಪ್ಪಿಸಿಕೊಂಡು ಬದುಕುವುದು ಜೀವನವಲ್ಲ. ಸಮಸ್ಯೆಗಳೊಂದಿಗೆ ಬೆಳೆಯುವುದು ನಿಜವಾದ ಜೀವನ..
ಪ್ರಯತ್ನಗಳಲ್ಲಿ ಸೋಲಾದರೆ ಪರವಾಗಿಲ್ಲ
ಆದರೆ…
ಪ್ರಯತ್ನಗಳನ್ನೆ ಮಾಡದಿರುವುದು ಜೀವನದಲ್ಲಿನ ದೊಡ್ಡ ಸೋಲು ನಡೆದಷ್ಟು ದಾರಿ ಇದೆ ಪಡೆದಷ್ಟು ಭಾಗ್ಯವಿದೆ..
ಪಡೆದು ಕೊಳ್ಳುವುದಕ್ಕಿಂತ…
ಉಳಿಸಿ ಕೊಳ್ಳುವುದು ಮುಖ್ಯ.
ಹುಡುಕುವುದುಕ್ಕಿಂತ ಸಿಕ್ಕಿರುವುದನ್ನು ಕಳೆದು ಹೋಗದಂತೆ ಕಾಪಾಡಿಕೊಳ್ಳುವುದು ಮುಖ್ಯ…
ಪರಮಾತ್ಮಗಿಂತ, ಹೆಚ್ಚಾಗಿ ಕರ್ಮಗಳಿಗೆ ಹೆದರಬೇಕು. ಏಕೆಂದರೆ.. ಪರಮಾತ್ಮ ಕ್ಷಮಿಸಬಹುದು, ಆದರೆ, ಕರ್ಮ ಎಂದೂ ಕ್ಷಮಿಸುವುದಿಲ್ಲ…