ಗಾದೆ ಮಾತುಗಳು | Kannada Proverbs

ಗಾದೆ ಮಾತುಗಳು
  1. ಓದು ಒಕ್ಕಾಲು ಬುದ್ಧಿ ಮುಕ್ಕಾಲು.
  2. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು.
  3. ಜಾಣನಿಗೆ ಮಾತಿನ ಪೆಟ್ಟು ಕತ್ತೆಗೆ ಲತ್ತೆಯ ಪೆಟ್ಟು.
  4. ಚಿಂತೆಯಿಲ್ಲದವನಿಗೆ ಸಂತೆಯಲ್ಲಿ ನಿದ್ದೆ ಬಂತು.
  5. ನೀರಿದ್ದರೆ ಊರು ನಾರಿಯಿದ್ದರೆ ಮನೆ.
  6. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು.
  7. ಬಳ್ಳಿಗೆ ಕಾಯಿ ಭಾರವೆ?.
  8. ಖೀರು ಕುಡಿದವ ಓಡಿ ಹೋದ ನೀರು ಕುಡಿದವ ಸಿಕ್ಕಿಬಿದ್ದ.
  9. ಹಣ್ಣು ಕೆಟ್ರೆ ಪುಟ್ಟಿ ಹಾಳು ಹೆಣ್ಣು ಕೆಟ್ರ ಹಟ್ಟಿ ಹಾಳು.
  10. ಅಪ್ಪ ತೋಡಿದ ಬಾವಿ ಅಂತ, ಉಪ್ಪು ನೀರು ಕುಡಿಬ್ಯಾಡ.
  11. ಎಲ್ರೂ ರಾಜರಾದ್ರೆ ಪಲ್ಲಕ್ಕಿ ಹೋರೋರ್ಯಾರು.
  12. ಉರಿಯೋ ಬೆಂಕಿಗೆ ತುಪ್ಪ ಹಾಕಿದಂಗ.
  13. ಊರು ಉಪಕಾರವರಿಯದು ಹೆಣ ಸಿಂಗಾರ ಅರಿಯದು.
  14. ಆಪತ್ಕಾಲದಾಗ ಆದವನೆ ನೆಂಟ.
  15. ಅಪ್ಪ ತೋಡಿದ ಬಾವಿ ಅಂತ ಉಪ್ಪು ನೀರು ಕುಡಿಯ ಬೇಡ
  16. ಮಾತು ಮನೆ ಕೆಡಿಸ್ತು ತೂತು ಒಲೆ ಕೆಡಸ್ತು.
  17. ಬಡತನ ಬಂದಾಗ ನೆಂಟರ ಬಾಗಿಲು ಸೇರಬಾರದು.
  18. ಇಲಿಯಾಗಿ ನೂರು ವರ್ಷ ಬಾಳುವದಕ್ಕಿಂತ ಹುಲಿಯಾಗಿ ಮೂರು ವರ್ಷ ಬಾಳುವುದು ಮೇಲು.
  19. ಹೊತ್ತು ಬಂದಂತೆ ಕೊಡೆ ಹಿಡಿ.
  20. ಪಾಲಿಗೆ ಬಂದದ್ದು ಪಂಚಾಮೃತ.
  21. ಎಲ್ಲಾರ ಮನೆ ದೊಸೇನು ತೂತೇ.
  22. ಮಳಿ ಬಂದ್ರ ಕೇಡಲ್ಲ ಮಗ ಉಂಡ್ರ ಕೆಡಲ್ಲ.
  23. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
  24. ಸುಂಕದವನ ಮುಂದೆ ಸುಖ ದುಃಖ ಹೇಳಿಕೊಂಡಂತೆ.
  25. ನೂಲಿನಂತೆ ಸೀರೆ ತಾಯಿಯಂತೆ ಮಗಳು.
  26. ಓದು ಒಕ್ಕಾಲು ಬುದ್ಧಿ ಮುಕ್ಕಾಲು.
  27. ಕುಣಿಯಲು ಬಾರದವಳು ನೆಲ ದೊಂಕೆಂದಳು.
  28. ಮಾಡಿದ್ದುಣ್ಣೋ ಮಾರಾ.

Leave a Reply

Your email address will not be published. Required fields are marked *