ಗೀತಾಂಜಲಿಯ ಜನಕ ರವೀಂದ್ರನಾಥ ಟ್ಯಾಗೋರ್ !

ರವೀಂದ್ರನಾಥ ಟ್ಯಾಗೋರ್

ಆತ ಜಗತ್ತು ಕಂಡು ಮಹಾ ತಪಸ್ವಿ ಕವಿಯಾಗಿದ್ದ….ಆತನ ಮಸ್ತಕದಿಂದ ಹೊರಟ ಗೀತೆಯ ಮಾಲೆಗಳು ಸುಗಂಧ ಭರಿತವಾಗಿದ್ದವು….ಅವುಗಳಲ್ಲಿ ಹಿಮಾಲಯದ ತಂಪಿತ್ತು…
ಕನ್ಯಾಕುಮಾರಿಯ ಅಲೆಗಳ ಸದ್ದು ಕೇಳಿಸುತ್ತಿತ್ತು….ಆತ ಗಂಧರ್ವರ ಮುಂದುವರೆದ ಕೊಂಡಿಯಾಗಿದ್ದ… ಮಾತೆಯ ಮೂಲಕ ಕಾಳಿದಾಸನಂತೆ ವರ ಪಡೆದ ದೈವಾನುಸಂಭೂತ ವ್ಯಕ್ತಿಯಾಗಿದ್ದ….
ಆತ ಸಾಕ್ಷಾತ ದೇವ ಋಷಿಯಾಗಿದ್ದನು…
ಅವರು ಬೇರಾರು ಅಲ್ಲ ಜಗತ್ತಿನ ಮಹಾನ ಗ್ರಂಥ ಬರೆದ ಮಹಾ ಮಹೀಮ ಗೀತಾಂಜಲಿಯ ಜನಕ ರವೀಂದ್ರನಾಥ ಟ್ಯಾಗೋರ್….!

ಸುಮ್ಮನೆ ಆ ಮಹಾನ ಕವಿ ರವೀಂದ್ರನಾಥ್ ಟ್ಯಾಗೋರರ ಭಾವಚಿತ್ರದಲ್ಲಿರುವ ಮುಖವನ್ನು ಈಗಲೂ ನೀವು ಗಮನಿಸುತ್ತ ನೋಡುತ್ತಿದ್ದರೆ, ಅದು ಇನ್ನಷ್ಟು-ಮತ್ತಷ್ಟು ನೋಡುವಂತೆ ನಮಗೆ ಪ್ರೇರಣಾದಾಯಕವಾದ ಮತ್ತು ಮನಸಿಗೆ ಪರಮ ಶಾಂತಿ, ಅಹ್ಲಾದತೆಯ ಭಾವದ ಅನುಭೂತಿ ದೊರಕುವಂತ ಅತ್ಯಂತ ಕೋಮಲ ಮುಖವಾಗಿದೆ…

ಅತೀ ಹೆಚ್ಚು ದುಃಖಿತ ವ್ಯಕ್ತಿ ಕವಿಯಾಗುತ್ತಾನೆ

ವಾಗ್ದೇವಿಯ ಮಾನಸ ಪುತ್ರ ಕವಿ ಕಾಳಿದಾಸನಿಂದ ಹಿಡಿದು ನಾಟಕಕಾರ ಷೆಕ್ಸಪೀಯರ್, ಡಾಂಟೆ, ಖಲೀಲ ಗೀಬ್ರಾನ ಕನ್ನಡ ನೆಲದಲ್ಲಿ ಹುಟ್ಟಿ ಜಾನಪದವನ್ನು ಜಗತ್ತಿಗೆ ಪರಿಚಯಿಸಿ ಹಳತಾದ ಕೋಟು, ಮಾಸಲು ದೋತ್ರ ಉಟ್ಟು ನಾನು-ನೀನು-ಆನು-ತಾನು ಎಂದು ಬದುಕಿನ ವೀಣೆಯ ನಾಲ್ಕೆ ನಾಲ್ಕು ತಂತಿಗಳನ್ನು ಮೀಟಿದ ವರಕವಿ ಬೇಂದ್ರೆ ಸಮೇತ ಎಲ್ಲರೂ ಪ್ರಪಂಚ ಎಂಬ ದುಃಖದ ಸಾಗರದಲ್ಲಿ ಇವೆರಲ್ಲ ಈಜಿದವರೇ ಸರಿ. ಹಾಗೆ ತಮಗೆ ಬದುಕಿನಲ್ಲಿ ತೋಚಿದ್ದನ್ನು ಗೀಚಿದವರಿವರು. ಸಹಜವಾಗಿಯೇ ಕವಿಯು ತನ್ನ ಅತೀತ ಜೀವನದಲ್ಲಿ ಪ್ರೇಮ ವೈಫಲ್ಯಗಳನ್ನು ಅನುಭವಿಸಿದಾಗ, ಆತ ಪ್ರೇಮವನ್ನು ತುಂಬಿಸಿಕೊಳ್ಳಲು ಪ್ರೇಮ ಗೀತೆಗಳನ್ನು ಬರೆಯುತ್ತಾನೆ. ಯಾರಿಗೆ ಪ್ರೇಮ ಸಿಕ್ಕಿದೆಯೋ ಅವರಿಗೆ ಕವನ ಬರೆಯುವ ಜರೂರತ್ತಿತ್ತಲ್ಲ ಅದರ ನೋವು ಕೂಡಾ ಆತನಿಗಿರುವುದಿಲ್ಲ ಪ್ರೀತಿ ಸಿಕ್ಕ ಮೇಲೆ ಆತನಲ್ಲಿ ಈಗ ಯಾವ ಕೋರಿಕೆ-ಬೇಡಿಕೆಗಳು, ಆಲಾಪನೆಗಳೆ ಇಲ್ಲ ಆತ ಪ್ರೇಮದ ತುತ್ತದಿಯ ಸುಪ್ಪತ್ತಿಗೆಯಲ್ಲಿ ಮಲಗಿದಾಗ ಸುಮ್ಮ ಸುಮ್ಮನೆ ದುಃಖದ ಚಾದರ ಏಕೆ ಹೊತ್ತುಕೊಳ್ಳುತ್ತಾನೆ.? ಆ ಚಾದರ ಮಾತ್ರ ಅದೇನಿದ್ದರು ಪ್ರೇಮದಿಂದ ವಂಚಿತ ವ್ಯಕ್ತಿ ಸ್ವತ್ತಾಗುವುದು…

ಇನ್ನು ತನ್ನಲ್ಲಿರುವ ತಾನು ಅನುಭವಿಸಿದ ಅಪಾರವಾದ ದುಃಖ, ಬಡತನ, ಒಂಟಿತನ, ಪರಿಸರ-ಪ್ರಕೃತಿ ಹಲವಾರು ವಿಚಾರಧಾರೆಗಳು ಹೊರಹೊಮ್ಮುವದು ಕವಿ ವ್ಯಕ್ತಪಡಿಸುವ ಅಭಿವ್ಯಕ್ತಿಗಳ ಬರಹದ ಮೂಲಕ. ಆತ ಬರೆಯುತ್ತಾನೆ, ಹಾಡುತ್ತಾನೆ ಇದರಿಂದ ಆತ ಉಸಿರಾಡುತ್ತಾನೆ, ಬದುಕುತ್ತಾನೆ ಆತನಿಗೆ ಅದರಿಂದಲೇ ಸಮಾಧಾನವಾಗುವುದು. ಅದಕ್ಕೆ ಕವಿ ಕವನದ ವಿಚಾರಧಾರೆ ತನ್ನಲ್ಲಿಗೆ ಬಂದಾಗ, ಆತನಲ್ಲಿ ಅದು ಪ್ರಕಟವಾದಾಗ ಆತ ಬೀಗಿ ಭದ್ರವಾಗಿ ತನ್ನ ಮನೆಯ ಕದ ಮುಚ್ಚುತ್ತಾನೆ. ಇದಕ್ಕಾಗಿ ಆತ ದಿನಗಟ್ಟಲೆ ಊಟ-ಉಪಚಾರ ಮನೆ-ಮಠ ನಿತ್ಯ ಮಾಡುವ ಸ್ನಾನ ಸಮೇತ ಎಲ್ಲವನ್ನೂ ಮರೆಯುತ್ತಾನೆ. ಏಕೆಂದರೆ ಆತನಲ್ಲಿ ಕವನದ ವಿಚಾರಧಾರೆಯ ಹರಿಯುವಿಕೆ ಗಮ್ಯ ತುಂಡಾಗಬಾರದು ಎನ್ನುವ ಒಂದೇ ಒಂದು ಉದ್ದೇಶ ಆತ ಆ ಕ್ಷಣ ಹೊತ್ತು ಜಗತ್ತನ್ನು ತನ್ನನ್ನು ತಾನು ಮರೆಯುವಂತೆ ಮಾಡಿಕೊಳ್ಳುತ್ತಾನೆ.

ನಿನ್ನ ಕವನ ನಿನ್ನ ಹೊಟ್ಟೆಯನ್ನು ತುಂಬಿಸುವುದಿಲ್ಲ..!


ಪಶ್ಚಿಮ ಬಂಗಾಳದ ಒಂದು ಕುಟುಂಬದಲ್ಲಿ ಬರೊಬ್ಬರಿ ಒಂದೇ ಮನೆಯಲ್ಲಿ ಹದಿನಾಲ್ಕು ಮಕ್ಕಳು ಹೆತ್ತ ತಂದೆ-ತಾಯಿಂದಿರಿದ್ದರು. ಆ ಹದಿನಾಲ್ಕು ಮಕ್ಕಳಲ್ಲಿ ಇನ್ನೂ ಕವಿ ರವೀಂದ್ರನಾಥ ಕೊನೆಯನಾಗಿದ್ದನು. ಆತನಿಗೆ ಉಪನಯನವು ಸಹ ಆಗಿರಲಿಲ್ಲ ಆತನ ಮೈ ಮನಗಳ ಮೇಲೆ ನವಜಾತ ಶಿಸುವಿನ ಕೋಮಲತೆಯ ಚಹರೆ ಮರೆಯಾಗಿರಲಿಲ್ಲ. ಆತ ಎಂಟು ವರ್ಷದವನಾಗಿದ್ದಾಗ, ಕವನ ಬರೆಯತೊಡಗಿದ ಇಡೀ ಮನೆಯಲ್ಲಿ ಎಲ್ಲರೂ ಬಹುಮುಖ ಪ್ರತಿಭಾವಂತರಾಗಿದ್ದರು. ಆದರೆ ಆ ಮನೆ ರವೀಂದ್ರರ ಪಾಲಿಗೆ ನೀರವ ಮೌನವಾಗಿತ್ತು. ಅದಾಗಲೇ ಅವರ ತಾಯಿ ಕವಿ ರವೀಂದ್ರನನ್ನು ಕೈಯನ್ನು ಬಿಟ್ಟು ಬಹುದೂರ ಭಗವಂತನ ಹತ್ತಿರ ಸಾಗಿದ್ದಳು. ತಂದೆ ಯಾವಾಗ ನೋಡಿದರು ಆವಾಗ ಮನೆಯಲ್ಲಿರುತ್ತಿರಲಿಲ್ಲ. ಅವರು ದೇಶ- ವಿದೇಶಗಳಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ಆದರೆ ಆ ಮನೆಯಲ್ಲಿ ಅಣ್ಣಂದಿರಿದ್ದರೂ ಸಹ ಆ ಮನೆ ರವೀಂದ್ರರಿಗೆ ಖಾಲಿ, ಖಾಲಿಯಾಗಿತ್ತು. ಅವರು ಮನೆಯಲ್ಲಿ ಏನು ಮಾಡಬೇಕಾಗಿತ್ತೋ ಅದನ್ನು ಮಾಡತೋಡಗಿದರು ಕವನ ಬರೆಯುವ ಖಯಾಲಿ, ಸಂಗೀತ ನುಡಿಸುವ ಹವ್ಯಾಸ ಮುಂದುವರೆಯಿತು.

ಕೆಲ ವರುಷಗಳಾದ ನಂತರ ಮಗ ದೊಡ್ಡವನಾಗಿ ಒಮ್ಮೆ ಕವನ ಬರೆಯುವದನ್ನು ಕಂಡು ಅವರು ತಂದೆ ತುಂಬಾ ಅಸಮಾಧನಗೊಂಡರು. ಕವಿ ರವೀಂದ್ರನಾಥ್ ಟ್ಯಾಗೋರ್ ಕುರಿತು, ‘ಆಯಿತು ನೀನು ಬಾಲ್ಯದಿಂದ ಕಾಲೇಜು ಶಿಕ್ಷಣವರೆಗೂ ಕವನ ಬರೆದು ಗುಡ್ಡೆ ಹಾಕಿದ್ದು ಸಾಕು’..! ನಿನ್ನ ಕವನಗಳು ನಮ್ಮ ಹೊಟ್ಟೆ ತುಂಬಿಸುವುದಿಲ್ಲ..! ನೀನು ಬ್ಯಾರಿಸ್ಟರ್ ಪದವಿ ಪಡೆಯಲು ಕಾನೂನು ಕಲಿಯಲು ಇಂಗ್ಲೆಂಡ್ ಹೋಗು..! ಎಂದು ಅವನ ಆಸಕ್ತಿಗೆ ವಿರುದ್ಧವಾಗಿ ಆದೇಶ ನೀಡಿದರು. ತಂದೆಯ ಆದೇಶದಂತೆ ಕವಿ ರವೀಂದ್ರನಾಥ್ ರವರು ಒಲ್ಲದ ಮನಸಿನಿಂದ ದುಃಖಗೊಂಡು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿದರು.

ಕಾನೂನಿನಲ್ಲಿ ಕ್ಲೀಯೋಪಾತ್ರ ಕಂಡರು.!
ಸೆಕ್ಷನ್ ಗಳಲ್ಲಿ ಷೆಕ್ಸಪೀಯರ್ ನೋಡಿದರು.!


ಹೌದು ಈ ಜಗತ್ತಿನಲ್ಲಿ ಮಕ್ಕಳ ಆಸಕ್ತಿಗೆ ವಿರುದ್ಧವಾಗಿ ತಂದೆ-ತಾಯಿಗಳು ತೆಗೆದುಕೊಂಡ ನಿರ್ಧಾರಗಳು ಮಕ್ಕಳ ಆತ್ಮವನ್ನು ಮಾರಿಕೊಂಡತಾಗುವುದು. ಈ ವಿಷಯ ಭಾರತದ ಖ್ಯಾತ ಕವಿ ತತ್ವಜ್ಞಾನಿ ರವೀಂದ್ರ ಮೇಲಾಯಿತು. ಮೇಲ್ಗಡೆ ಅವರು ಕಾನೂನು ಕೊಟು ಧರಿಸಿಗೆ ಕಾಲೇಜಿಗೆ ಹೋದರೆ, ಅವರೊಳಗಡೆ ಷೆಕ್ಸಪೀಯರ್ ಒದ್ದಾಡುತ್ತಿದ್ದ ಸಂಜೆಯ ಮಬ್ಬುಗತ್ತಲಿನಲ್ಲಿ ಈಜಿಪ್ಟ್ ಪಿರಾಮಿಡ್ ನಿಂದ ಎದ್ದು ಬಂದು ಕ್ಲೀಯೋಪಾತ್ರ ಗೆಜ್ಜೆ ಕಟ್ಟಿಕೊಂಡು ಹೆಜ್ಜೆ ಹಾಕುತ್ತ ಅವರಿಗೆ ಕವನ ಗೀಚಲು ಪ್ರೇರಣೆಯಾಗುತ್ತಿದ್ದಳು. ಮನಸಿನಲ್ಲಿರುವ ಮಾತಗಳು ನಾಲಿಗೆ ಮೇಲೆ ಬರುತ್ತವೆ ಎಂಬಂತೆ ಅವರು ಕವನ ಬರೆಯಲು ಕಾನೂನು ವ್ಯಾಸಂಗ ಅರ್ಧಕ್ಕೆ ನಿಲ್ಲಿಸಿದರು. ಅವರಿಗೆ ಬ್ಯಾರಿಸ್ಟರ್ ಪದವಿ ಬೇಡವಾಯಿತು. ಷೆಕ್ಸಪೀಯರ್ ನ ದುರಂತಗಳ ಅಧ್ಯಯನ ಬೇಕಾಯಿತು. ಭಾರತಕ್ಕೆ ಬಂದೇ ಬಿಟ್ಟರು.

ಗೀತಾಂಜಲಿ ಆಸಕ್ತಿ-ಸಂಕಲ್ಪದಿಂದ ಹೊರ ಹೊಮ್ಮಿತು..!

ಗೀತಾಂಜಲಿ ಎನ್ನುವ ಪರಮ ಪವಿತ್ರ ಕವನ ಸಂಕಲನವನ್ನು ಬರೆಯಲು ಟ್ಯಾಗೋರ್ ರು ಒಂದು ಸುದೀರ್ಘವಾದ ತಪಸ್ಸು ಮಾಡಿದರು. ಅದನ್ನು ಇನ್ನಿಲ್ಲದ ಶೃದ್ದೆ- ನಂಬಿಕೆ ವಿಶ್ವಾಸದಿಂದ ಬರೆಯ ತೊಡಗಿದರು. ಕೊನೆಗೆ ಆ ಪುಸ್ತಕ ಇಂಗ್ಲಿಷ್ ಭಾಷಾ ಪ್ರೌಢಿಮೆ ಬಲ್ಲ ಬಹು ದೊಡ್ಡ ಪಂಡಿತ ಆಂಡ್ರೋ ನಿಗೆ ಓದಲು ನೀಡಿದರು. ಅದನ್ನು ಓದಿದ ಆಂಡ್ರೋ ನಾಲ್ಕು ಕಡೆ ಪದಗಳನ್ನು ಬದಲಾಯಿಸಿ, ಕವಿ ರವೀಂದ್ರನಾಥ್ ರವರಿಗೆ ನೀಡಿದನು. ಒಮ್ಮೆ ನೂರಾರು ವಿದೇಶಿ ವಿದ್ವಾಂಸರು ಕವಿಗಳ ಮುಂದೆ ಗೀತಾಂಜಲಿ ಕವನ ಸಂಕಲನವನ್ನು ಓದುವ ಅವಕಾಶ ಟ್ಯಾಗೋರ್ ರಿಗೆ ಸಿಕ್ಕಿತು. ಅವರು ಅದನ್ನು ಕಿಕ್ಕಿರಿದ ಜನರಿರುವ ಸಭಾಂಗಣದಲ್ಲಿ ಓದ ತೊಡಗಿದರು. ಸಭಾಂಗಣದ ನಾಲ್ಕು ದಿಕ್ಕುಗಳಿಂದ ಭಾರತ ಹೆಮ್ಮೆಯ ಪುತ್ರನ ಜೈಕಾರ ಮೊಳಗ ತೊಡಗಿತು. ಟ್ಯಾಗೋರ್ ರರು ಕವನ ಸಂಕಲನ ಓದುವಾಗ ಮಧ್ಯದಲ್ಲಿ ಈಟ್ಸ್ ಎನ್ನುವ ನವ ತರುಣ ಕವಿ ಎದ್ದು ನಿಂತು ಈ ಪುಸ್ತಕ ಗೀತಾಂಜಲಿ ಕವನ ಸಂಕಲನಕ್ಕೆ ಖಂಡಿತ ಪ್ರಪಂಚದ ಪ್ರತಿಷ್ಠಿತ ನೊಬೆಲ್ ಸಿಕ್ಕೆ ಸಿಗುವುದು, ಎಂದು ಘಂಟಾಘೋಷವಾಗಿ ಸಭೆಯ ಕರಾತಾಡನದ ಮುಂದೆ ಜೋರಾಗಿ ಕೂಗಿ ಹೇಳಿದ. ಆಗ ಎಲ್ಲರೂ ಒಮ್ಮೆಲೇ ಬೆಕ್ಕಸ ಬೆರಗಾದರು.

ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ಸಾಹಿತಿ.!

ವೇದಿಕೆಯ ಮೇಲಿನಿಂದ ಇಳಿದು ಬಂದ ಟ್ಯಾಗೋರ್ ರರು ಈಟ್ಸ್ ನಿಗೆ ಧನ್ಯವಾದಗಳು ಹೇಳಿದರು. ಆಗ ಈಟ್ಸ್ ಹೇಳಿದ ನೀವು ನಿಮ್ಮ ಆತ್ಮವನ್ನು ತುಂಬಾ ಚಡಪಡಿಸಿಕೊಂಡು ಕವನ ಈ ಸಂಕಲ ಬರೆದಿರುವಿರಿ.! ಆದರೆ ಇದರಲ್ಲಿ ನಾಲ್ಕು ಕಡೆ ಪದಗಳಲ್ಲಿ ನನಗೆ ಜೀವಂತಿಕೆವಿರದ ಕಲ್ಲುಗಳು ಇಟ್ಟಂತಾಗಿವೆ. ಆ ಪದಗಳನ್ನು ನೀವು ಪುಸ್ತಕದಿಂದ ತೆಗೆದು ಹಾಕಿರಿ ಎಂದಾಗ ಟ್ಯಾಗೋರ್ ರು ಆ ನಾಲ್ಕು ಪದಗಳಾವವು..? ಎಂದರು ಆತ ಅವುಗಳನ್ನು ತೋರಿಸಿದ ಬಲು ಆಶ್ಚರ್ಯದ ಸಂಗತಿ ಎಂದರೆ, ಅವು ಇಂಗ್ಲಿಷ್ ಭಾಷಾ ಪಂಡಿತ ಆಂಡ್ರೋ ಸೇರಿಸಿದ ಬಲವಂತದ ಪದಗಾಳಾಗಿದ್ದವು. ಅವುಗಳನ್ನು ನೋಡಿ ಈಟ್ಸ್ ಹೇಳಿದ ನಿಮ್ಮ ಮೊದಲಿನ ಪದಗಳು ಜೀವಂತವಾಗಿವೆ. ಅವುಗಳನ್ನು ಮತ್ತೆ ಇದರಲಿ ಸಂಕಲನ ಮಾಡಿ ಎಂದನು… ಮುಂದೆ ಬಾರದು ಬಪ್ಪದು ತಪ್ಪದು ಎಂಬಂತೆ ನೊಬೆಲ್ ಆಯ್ಕೆ ಸಮಿತಿಯ ವತಿಯಿಂದ ಏಷ್ಯಾದ ಮೊಟ್ಟ ಮೊದಲ ಅದ್ವೀತಿಯ ಕವನ ಸಂಕಲನ ಗೀತಾಂಜಲಿ ಎನ್ನುವದು ಸಾಭೀತಾಗಿ ನೊಬೆಲ್ ಪ್ರಶಸ್ತಿ ಪಾರಿತೋಷಕಕ್ಕೆ ಭಾಜನವಾಯಿತು…
ಒಂದು ವೇಳೆ ಕವಿ ರವೀಂದ್ರನಾಥ್ ಟ್ಯಾಗೋರ ರವರು ತಮ್ಮ ಮನಸಿನ ಆಸಕ್ತಿಗೆ ವಿರುದ್ಧವಾಗಿ ಸಾಗಿದ್ದರೇ, ಕಾನೂನು ಪದವಿ ಪಡೆದು ಬರೀ ಒಬ್ಬ ವಕೀಲ ವೃತ್ತಿ ನಡೆಸುವ ಸಾಂಪ್ರದಾಯಿಕ ವ್ಯಕ್ತಿಯಾಗುತ್ತಿದ್ದರು. ಆದರೆ ಅವರ ಅಚಲ ನಿರ್ಧಾರ ಅವರನ್ನು ಜಗತ್ತು ಕಂಡ ಅಪರೂಪದ ಅಪೂರ್ವ ಅಸಾಮನ್ಯ ವ್ಯಕ್ತಿಯಾಗಿಸಿತು.. ಇದುವೆ ಆಸಕ್ತಿಗೆ ಸಂಕಲ್ಪ ಶಕ್ತಿಗಿರುವ ತಾಕತ್ತು..

ದಶರಥ ಕೋರಿ, ಶಿಕ್ಷಕರು, ಇಂಡಿ

Leave a Reply

Your email address will not be published. Required fields are marked *