ಜೀವನದ ಕವನ

ಜೀವನದ ಕವನ

ಉರುಳಿತು ನನ್ನ ಕನಸೆಂಬ ಗೋಪುರ

ಅಂದು ನಾ ಕಂಡೆನು ಹಗಲು ಕನಸೊಂದನು.
ಆ ಕನಸು ನನಸಾಗದೇ ನಾ ಬಹಳ ನೊಂದೆನು.
ಅದನು ನನಸಾಗಿಸಲು ಹಾಕಿದೆ ನಾ ಸಾಕಷ್ಟು ಶ್ರಮವನ್ನು.
ವಿಧಿಯು ಹುಸಿಯಾಗಿಸಿತು ನನ್ನ ಕನಸಿನ ನಿರೀಕ್ಷೆಯನ್ನು.

ನನ್ನ ಕನಸಿನ ಗೋಪುರ ಉರುಳಿ ನುಚ್ಚು ನೂರಾಯ್ತು.
ಆಗ ನನಗ ಸಹಿಸಲಸಾಧ್ಯವಾದಷ್ಟು ವ್ಯಥೆ ಉಂಟಾಯ್ತು.
ಈ ಕಷ್ಟ ನೋವುಗಳ ತಾಳಲಾರದೆ ದುಃಖ ಉಕ್ಕಿ ಹರಿಯಿತು.
ಈ ಎಲ್ಲಾ ವಿರಹ ವೇದನೆಗಳ ಸಹಿಸಿ ಬಾಳಿ ಬದುಕುವಂತಾಯ್ತು.

ಯಾರಾದರೂ ಸರಿ ಬದಲಿಸಲು ಸಾಧ್ಯವೇ ನನ್ನ ಹಣೇ ಬರಹ.
ಬಾಲ್ಯ ಯವ್ವನದಲ್ಲೇ ಅತಿಯಾಯ್ತು ನನ್ನ ನಿರಾಸೆಯ ದಾಹ.
ಈಗ ಯೌವ್ವನವು ಕಳೆದು ಮುಪ್ಪಾಯ್ತು ನನ್ನ ದೇಹ.
ಪ್ರಸ್ತುತ ಸಕಲವನ್ನು ಬದಿಗೊತ್ತಿ ಕವಿಯಾಗಿ ಮುಂದುವರೆಸಿದೆ ನನ್ನ ಬರಹ.

ಕಳೆದು ಹೋದ ಆ ದಿನಗಳು ಮತ್ತೆ ಮರಳಿ ಬರಲು ಸಾಧ್ಯವೇ
ಸಧ್ಯಕ್ಕೆ ನನಗುಳಿದಿರುವುದೊಂದೇ ಭಗವಂತನ ಸ್ಮರಣೆ ಅಲ್ಲವೇ.
ಆತನನ್ನು ಧ್ಯಾನಿಸುತ್ತಾ ಆನಂದದ ಕಡಲಲ್ಲಿ ತೇಲುವೆ.
ಆ ಶಿವನ ಸ್ಮರಣೆ ಮಾಡುತ್ತಾ ಮುಕ್ತಿಯನ್ನು ಹೊಂದುವೆ.

ನಾ ಕಂಡ ಕನಸಿನಂತೆ ಸಾಗಲಿಲ್ಲ ಈ ನನ್ನ ಬದುಕು.
ಬರೀ ದುಃಖ ವ್ಯಥೆಗಳೆಂಬ ಕಲ್ಲುಮುಳ್ಳುಗಳು ಹಾದಿಯುದ್ದಕ್ಕೂ.
ಆದರೂ ದಿಟ್ಟ ಹೆಜ್ಜೆಯನಿಟ್ಟು ಸಾಗಿದೆ ಜಗ್ಗದೇ ಯಾವುದಕ್ಕೂ.
ಆ ಹಾದಿಯ ಬದಲಿಸಿ ನೋಡಿದರೆ ಅಲ್ಲಿಯೂ ಸಹ ಕಂಡವು ಕೆಲ ಒಡಕು.

– ಕೆ.ಹೆಚ್. ಜಯಪ್ರಕಾಶ್


ಮುರಿದ ಕನಸುಗಳ ಅಳಲನ್ನು
ಯಾರು ಕೇಳುತ್ತಾರೆ.
ಆಂತರ್ಯದಲ್ಲಿ ಅಡಗಿದ್ದ ನೋವು
ಕಣ್ಣ ರೆಪ್ಪೆಗಳ ಅಂಚಿಗೆ ಬಂದು ನಿಂತಿದೆ.
ಆದರೂ ನಾನು ಸೋಲೊಪ್ಪುವುದಿಲ್ಲ.
ಹೊಸದೊಂದು ಗಮ್ಯದ
ಕನಸ ಕಟ್ಟಿಕೊಳ್ಳುವೆ
~ ಅಟಲ್ ಬಿಹಾರಿ ವಾಜಪೇಯಿ
ಕನ್ನಡಕ್ಕೆ : ಮಂಜುಳ ಕಿರುಗಾವಲು


ಲೋಕದ ಯಾವ ಪರಿವೆಯೂ ಇಲ್ಲದೆ,
ನಿನಗಷ್ಟೇ ಹಾಕಬೇಕಾದ ಸುಜೂದಿನಲ್ಲೂ
ಅವಳ ನೆನಪಾದರೆ ಮನ್ನಿಸಿಬಿಡು ಖುದಾ..
ಒಂದೇ ತಪ್ಪಿಗೆ ಪದೇ ಪದೇ ಶಿಕ್ಷಿಸದಿರು

ಮಹಮ್ಮದ್ ಫೈಝ್ ವಿಟ್ಲ

Leave a Reply

Your email address will not be published. Required fields are marked *