ಮದುವೆ ಆಗುವಂತೆ ಹ್ಯಾರಿ ತನ್ನ ಮಗಳಿಗೆ ಕನ್ವಿನ್ಸ್ ಮಾಡುತ್ತಿದ್ದ.
“ಮದುವೆ ಆಗಿ ನೋಡು ಹೇಗೆ ನಿನ್ನ ಲೈಫ್ ಉಪ್ಪು, ಹುಳಿ, ಖಾರ, ರುಚಿ, ಸ್ವಾದ, ಖುಶಿ, ಕಣ್ಣೀರು ಎಲ್ಲದರಿಂದಲೂ ತುಂಬಿಕೊಳ್ಳುತ್ತದೆ”
“ಮದುವೆ ಆಗದೇನೂ ನಾನು ಇದನ್ನೆಲ್ಲ ಅನುಭವಿಸುತ್ತಿದ್ದೇನಲ್ಲ, ಒಂದು ಪ್ಲೇಟ್ ಪಾನಿ ಪುರಿ ತಿಂದರೆ ಸಾಕು”
ಮಗಳು ಉತ್ತರಿಸಿದಳು
“ನಮಗೆ ಕೆಲಸಕ್ಕೆ ಒಬ್ಬ ರೆಸ್ಪಾನ್ಸಿಬಲ್ ಮನುಷ್ಯ ಬೇಕು“
ಅಧಿಕಾರಿ, ಕೆಲಸದ ಸಂದರ್ಶನ ಕ್ಕೆ ಬಂದಿದ್ದ ನಸ್ರುದ್ದೀನ್ ಗೆ ತಮಗೆ ಬೇಕಾದ ಸೂಕ್ತ ಅಭ್ಯರ್ಥಿಯ ಬಗ್ಗೆ ವಿವರಿಸಿ ಹೇಳುತ್ತಿದ್ದ.
“ಹಾಗಾದರೆ ಈ ಕೆಲಸಕ್ಕೆ ನಾನೇ ತಕ್ಕ ವ್ಯಕ್ತಿ ಸರ್, ನಾನು ಹಿಂದೆ ಕೆಲಸ ಮಾಡಿದಲ್ಲೆಲ್ಲ ಪ್ರತೀ ಬಾರಿ ತಪ್ಪುಗಳಾದಾಗ ಅದಕ್ಕೆಲ್ಲ ನಾನೇ ರೆಸ್ಪಾನ್ಸಿಬಲ್ ಅಂತ ನನ್ನ ಅಧಿಕಾರಿಗಳು ಹೇಳುತ್ತಿದ್ದರು”.
ನಸ್ರುದ್ದೀನ್ ತನ್ನ ಆಯ್ಕೆಗೆ ಸೂಕ್ತ ಸಾಕ್ಷ್ಯ ಒದಗಿಸಿದ.