ಬಂಗಾರದ ಚಿಟ್ಟೆ
ಬಣ್ಣ ಬಣ್ಣದ ಹೂಗಳ ತೋಟ,
ನೋಡುವ ಕಂಗಳಿಗೆ ನಿಜಕ್ಕೂ ರಸದೂಟ,
ಇತ್ತ ಸಾಗುತಿದೆ ದುಂಬಿಗಳ ನೋಟ,
ಹೂವಿನ ಜೊತೆ ಪಾತರಗಿತ್ತಿಯ ತುಂಟಾಟ.
ಬಂಗಾರದ ಚಿಟ್ಟೆಯೊಂದು ಹಾರಿ ಬಂತು,
ಸಿಂಗಾರದ ಹೂವಿನಲಿ ಬಂದು ಕುಂತು,
ಜೇನ ಹೇರುತ್ತಿತ್ತು ಅಂದಿನ ಕಂತು,
ಸಂತೋಷದಿ ನಾನು ನೋಡಿದೆ ನಿಂತು.
ಉತ್ಪಾದನೆ ಮಾಡಿ ಹರುಷದಿ ತಾನು,
ಹೂವು ನೀಡುವುದು ಚಿಟ್ಟೆಗೆ ಜೇನು,
ಇದನ್ನು ಕಂಡು ಭೂಮಿ ಬಾನು,
ಹರುಷದಿ ಹಿಗ್ಗಿ ಸಂತೋಷ ಪಡದೇನು.
ತೋಟದಿ ಬಣ್ಣದ ಹೂಗಳು ಚೆಂದ,
ಚಿಟ್ಟೆಯು ಪಡುತಿದೆ ಹೊವಲ್ಲಿ ಆನಂದ,
ಹೂವಿಗೂ ದುಂಬಿಗು ಇರುವ ಬಂಧ,
ಅದು ಪ್ರಕೃತಿಯು ಬೆಸೆದ ಸಂಬಂಧ..
– ಡಾ. ಬಿ. ವೆಂಕಟೇಶ್
ಜನತೆಗೆ ನೆಲೆಯಾದ ತಾಯಿ
ನಮ್ಮ ನಾಡಿನ ಇತಿಹಾಸ ಸೃಷ್ಟಿಸಿದ ತಾಯಿ ಸಾಹಸಮಯಿ ಸಾಲು ಮರದ ತಿಮ್ಮಕ್ಕ.
ಸಾವಿರಾರು ಸಸಿಗಳನ್ನು ಶ್ರಮವಹಿಸಿ ನೆಟ್ಟು ಮಕ್ಕಳಂತೆ ಪೋಷಿಸಿ ವೃಕ್ಷಗಳ ಬೆಳೆಸಿದೆಯಕ್ಕ.
ವಿವಾಹವಾಗಿ ಮಕ್ಕಳಿಲ್ಲದ ಸ್ತ್ರೀಯರಿಗೆ ನೀ ಮಾದರಿಯಾಗುವಂತೆ ಮರಗಳ ಬೆಳೆದೆಯಕ್ಕ.
ಸನ್ಮಾನ್ಯ ನರೇಂದ್ರ ಮೋದೀಜಿಯವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದೆಯಕ್ಕ.
ಅಲ್ಲಿ ನೆರೆದಿದ್ದ ಹಲವಾರು ಗಣ್ಯಾತಿಗಣ್ಯ ವ್ಯಕ್ತಿಗಳ ಮೆಚ್ಚುಗೆಗೆ ಪಾತ್ರಧಾರಿಯಾದೆಯಕ್ಕ .
ಬಿಸಿಲಲ್ಲಿ ಬೆಂದು ಬಂದ ಜನತೆಗೆ ನೆರಳ ನೀಡಿ ಅವರ ಮನದಲ್ಲಿ ಶಾಶ್ವತವಾಗಿ ನೆಲೆಸಿದೆಯಕ್ಕ.
ಕನ್ನಡ ನಾಡಿಗೆ ಹೆಮ್ಮೆ ತರುವಂತಹ ಸಾಹಸ ಮಾಡಲಿಕ್ಕೆ ನಿನ್ನ ಜೀವವನ್ನೇ ತೇಯ್ದೆಯಕ್ಕ.
ಇಂದು ಕೊರೋನಾ ವೈರಸ್ಸ್ ಹಾವಳಿಯಿಂದ ನಿನ್ನ ಸಾಹಸದ ನೆನಪು ಮರುಕಳಿಸಿದೆಯಕ್ಕ.
– ಕೆ ಹೆಚ್ ಜಯಪ್ರಕಾಶ್ ಚಿತ್ರದುರ್ಗ