ಪಪ್ಪಾಯಿ / ಪರಂಗಿ ಹಣ್ಣನ್ನು ಪ್ರತಿದಿನ ಸೇವಿಸುವುದರಿಂದಾಗುವ 5 ಅದ್ಭುತ ಉಪಯೋಗಗಳು

papaya ಪರಂಗಿ ಪಪ್ಪಾಯಿ

ಪಪ್ಪಾಯ ಅಥವಾ ಪರಂಗಿ ಹಣ್ಣು ಇದು ಅತ್ಯಂತ ಸಿಹಿ ಮತ್ತು ನೈಸರ್ಗಿಕ ಅಂಶಗಳನ್ನು ಒಳಗೊಂಡಿದೆ. ಈ ಹಣ್ಣನ್ನು ಚಿಕ್ಕ ಮಕ್ಕಳು ದೊಡ್ಡವರು ವಯಸ್ಸಾದವರು ಕೂಡ ತಿನ್ನಬಹುದು. ಈ ಹಣ್ಣಿನ ಮಿತವಾದ ಸೇವನೆಯಿಂದ ನಾವು ಅನೇಕ ಲಾಭವನ್ನು ಪಡೆಯಬಹುದು. ಮಹಿಳೆಯರು ಈ ಹಣ್ಣಿನ ಸೇವನೆಯಿಂದ ಮುಟ್ಟಿನ ತೂಂದರೆ ಹೋಗಲಾಡಿಸಬಹುದು.

ಪರಂಗಿ/ ಪಪ್ಪಾಯಿ ಹಣ್ಣಿನ ಸೇವನೆಯಿಂದ ಆಗುವ ಪ್ರಯೋಜನಗಳು

ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುವದು.

ಖಾಲಿ ಹೊಟ್ಟೆಯಲ್ಲಿ ನೀವು ಪಪಾಯಿಯನ್ನು ಸೇವಿಸಿದರೆ, ನಿಮ್ಮ ಕರುಳಿನ ಚಲನೆಯನ್ನು ಸರಾಗಗೊಳಿಸಿ ಮಲಬದ್ದತೆಯನ್ನು ತಡೆಯಲು ಸಹಾಯಮಾಡುತ್ತದೆ, ಜೊತೆಗೆ ಇದು ಅಸಿಡಿಟಿ ಮತ್ತು ಅಜೀರ್ಣ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿ.

ತೂಕ ಕಡಿಮೆಗೊಳಿಸಲು ಸಹಾಯ ಮಾಡುತ್ತದೆ

ಪಪ್ಪಾಯಿಯು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ನಿಮ್ಮ ತೂಕವು ಹೆಚ್ಚಾಗುವುದಿಲ್ಲ, ಜೊತೆಗೆ ಇದರಲ್ಲಿರುವ ಫೈಬರ್ ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿರುವಂತೆ ಮಾಡಿ ನೀವು ಅತಿಯಾಗಿ ತಿನ್ನುವುದರಿಂದ ಪಾರು ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಪಪ್ಪಾಯಿಯನ್ನು ತಿಂದರೆ ದೇಹದಲ್ಲಿರುವ ವಿಷಕಾರಿ ಟಾಕ್ಸಿನ್‌ಗಳನ್ನು ಹೊರ ಹಾಕಲು ಸಹಕಾರಿಯಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಆರೋಗ್ಯಕರ ಹೃದಯವನ್ನು ಹೊಂದಬಹುದು.

ದೇಹದಲ್ಲಿ ಕೊಲೆಸ್ಟ್ರಾಲ್, ಬೊಜ್ಜು ಹೆಚ್ಚಾದರೆ ಹೃದಯದ ಕಾಯಿಲೆಗಳು ಹೆಚ್ಚುತ್ತವೆ. ಪಪ್ಪಾಯಿಯಲ್ಲಿರುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದರಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಚರ್ಮದ ಹೊಳಪನ್ನು ಹೆಚ್ಚಿಸುವದು.

ಪ್ರತಿದಿನ ಬೆಳಿಗ್ಗೆ ಪಪ್ಪಾಯಿಯನ್ನು ತಿನ್ನುವುದು ನಿಮ್ಮ ಆರೋಗ್ಯಕ್ಕೂ ಹಾಗು ಚರ್ಮಕ್ಕೂ ತುಂಬಾ ಸಹಕಾರಿ. ಇದು ವಿಟಮಿನ್ ಸಿ ಅಂಶ ಹೊಂದಿದ್ದು ಚರ್ಮದ ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್ಗಳು ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ದೇಹದ ವಿಷಕಾರಿ ಅಂಶಗಳನ್ನು ಹೂರ ಹಾಕಿ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ಇದರ ಲೈಕೋಪೀನ್ ಅಂಶವು ಚರ್ಮದ ಬೇಗ ವಯಸ್ಸಾಗುವಿಕೆಯನ್ನು, ಪಿಗ್ಮೆಂಟೇಶನ್, ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳ ಸಮಸ್ಯೆಗಳನ್ನೂ ತಡೆದು ಚರ್ಮಕ್ಕೆ ಹೊಳಪು ನೀಡುತ್ತದೆ.

ಪಪಾಯಿಯ ಉಪಗೋಗಗಳ ಜೊತೆಗೆ ನಾವು ಜಾಗೃತಿವಹಿಸಬೇಕಾದ ಕೆಲವು ವಿಷಯಗಳು ಇಲ್ಲಿವೆ.

ಪಪ್ಪಾಯಿ ತಿನ್ನುವುದರಿಂದ ಆಗುವ ಅಡ್ಡ ಪರಿಣಾಮಗಳು

ಗರ್ಭಪಾತದ ಅಪಾಯ

ಗರ್ಭಿಣಿ ಮಹಿಳೆಯರು ಇದನ್ನು ತಿಂದರೆ ಅನಗತ್ಯ ಗರ್ಭಪಾತಕ್ಕೆ ಕಾರಣವಾಗಬಹುದು.

ಆಹಾರದ ನಾಳಕ್ಕೆ ತೂಂದರೆ ಉಂಟುಮಾಡಬಹುದು.

ಮಿತಿಮೀರಿದ ಪಪಾಯಿ ಸೇವನೆಯಿಂದ ಅನ್ನ ನಾಳದ ಪದರವು ಕ್ಷಣಿಸಬಹುದು.

ಜನ್ಮ ದೋಷಗಳು

ಪಾಪಾಯದಲ್ಲಿರುವ ವಿಷಕಾರಿ ಎಂಜಿಮ್, ಪಪೈನ್ ಶಿಶುಗಳಲ್ಲಿ ದೋಷವುಂಟಾಗಬಹುದು. ಆದ್ದರಿಂದ, ಹಾಲುಣಿಸುವ ತಾಯಂದಿರು ಪಪ್ಪಾಯಿ ತಿನ್ನುವುದನ್ನು ಮರುಪರಿಶೀಲಿಸಬೇಕು.

ಕೆಲವರಿಗೆ ಅಲರ್ಜಿಯನ್ನು ಹೆಚ್ಚಿಸುವದು.

ಪಪ್ಪಾಯಿಯಲ್ಲಿರುವ ಲ್ಯಾಟೆಕ್ಸ್ ಅಲರ್ಜಿಯನ್ನು ಉಂಟುಮಾಡಬಹುದು.

ರಕ್ತದ ಸಕ್ಕರೆಯನ್ನು ಅಂಶವನ್ನು ಕಡಿಮೆ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಅಅಂಶವನ್ನ ಕಡಿಮೆ ಮಾಡುತ್ತದೆ. ಆದ್ದರಿಂದ ಕಡಿಮೆ ಬಿಪಿ ಇರುವವರು ಪಪ್ಪಾಯಿಯನ್ನು ಹೆಚ್ಚು ತಿನ್ನಬಾರದು.

ಫರ್ಟಿಲಿಟಿ ಮೇಲೆ ಪರಿಣಾಮ ಬೀರುತ್ತದೆ

ಪಪ್ಪಾಯಿ ಬೀಜಗಳು ಪುರುಷರಲ್ಲಿ ಬಂಜೆತನವನ್ನು ಉಂಟು ಮಾಡುತ್ತದೆ.ಈ ಹಣ್ಣಿನ ಬೀಜಗಳು ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡಬಹುದು ಮತ್ತು ವೀರ್ಯ ಚಲನಶೀಲತೆಯ ಮೇಲೆ ಪರಿಣಾಮ ಬೀರಬಹುದು.

ವಿಷತ್ವ

ಪಪ್ಪಾಯ ಹಣ್ಣಿನಲ್ಲಿ ಬೆಂಜೈಲ್ ಐಸೊಥಿಯೋಸೈನೇಟ್ ಸಂಯುಕ್ತಗಳು ಇವೆ. ಆದ ಕಾರಣ ಕೆಲವು ಪಪ್ಪಾಯಿಗಳು ವಿಷಕಾರಿಯಾಗಿ ಬದಲಾಗಬಹುದು. ಆದ್ದರಿಂದ, ಪಪ್ಪಾಯಿಗೆ ಅಲರ್ಜಿ ಇರುವವರು ತಿನ್ನುವ ಮೂದಲು ಹಣ್ಣಿನ ಬಗ್ಗೆ ತಿಳಿದುಕೊಳ್ಳುವದು ಉತ್ತಮ.

ಪಪ್ಪಾಯಿಯನ್ನು ಹೆಚ್ಚು ತಿಂದರೆ ಏನಾಗುತ್ತದೆ?

ಪಪ್ಪಾಯಿಯನ್ನು ಹೆಚ್ಚು ತಿನ್ನುವುದರಿಂದ ಅತಿಸಾರ ಮತ್ತು ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡಬಹುದು.

ಪಪ್ಪಾಯಿ ತಿನ್ನಲು ಉತ್ತಮ ಸಮಯ ಯಾವುದು?

ಬೆಳಗಿನ ಉಪಾಹಾರದ ಸಮಯದಲ್ಲಿ ಮತ್ತು ಸಂಜೆಯ ಸ್ನಾಕ್ಸ್ ಗೆ ಒಂದು ಬೌಲ್ ಪ್ಪಾಯಿಯನ್ನು ಸೇವಿಸಿ. ಇದು ತುಂಬಾ ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಪಪ್ಪಾಯಿ ತಿನ್ನುವುದರಿಂದ ಆಗುವ ದುಷ್ಪರಿಣಾಮಗಳೇನು?

ಪಪ್ಪಾಯಿ ಹಣ್ಣಿನಲ್ಲಿರುವ ಲ್ಯಾಟೆಕ್ಸ್ ಅಂಶಗಳು ‌ ಕೆಲವರಿಗೆ ಚರ್ಮದ ಅಲರ್ಜಿಯನ್ನು ಉಂಟು ಮಾಡುವದು . ಪಪ್ಪಾಯ ಹಣ್ಣು ಹೊಟ್ಟೆಯಲ್ಲಿ ಕಿರಿಕಿರಿಯನ್ನು ಉಂಟುಮಾಡಬಹುದು.

Leave a Reply

Your email address will not be published. Required fields are marked *