ಆಸರೆ
ನೀ ನನಗಾದರೆ ನಾನು ನಿನಗೆ,
ನಮ್ಮಿಬ್ಬರ ನಂಟು ಕೊನೆಯವರೆಗೆ,
ಮಣ್ಣಿಂದ ಜೀವವು ಹಸಿರ ತೆನೆಗೆ,
ನಾವಿಬ್ಬರು ಬೇಕು ಈ ಭುವಿಗೆ.
ನನ್ನಿಂದ ನೀನು ನಿನ್ನಿಂದ ನಾನು,
ನಾವು ಒಂದಾದರೆ ಭೂಮಿ ಭಾನು,
ಏನೇ ಆದರೂ ನಾ ನಿನ್ನ ಕೈ ಬಿಡೆನು,
ಎಷ್ಟೇ ಕಷ್ಟದ್ದಲ್ಲೂ ಜೊತೆಯಾಗಿರುವೆನು.
ನಾವಿಬ್ಬರು ಸೇರಿ ದುಡಿಯೋಣ,
ನಿಷ್ಠೆಯಿಂದ ಕಾಯಕವ ಮಾಡೋಣ,
ನಾವಿದ್ದರೆ ನೀವು ಎನ್ನುವುದು ತಿಳಿಸೋಣ,
ಮಾನವ ಕುಲಕೆ ಆಸರೆಯಾಗಿರೋಣ…
– ಡಾ. ಬಿ. ವೆಂಕಟೇಶ್
ಹೊಸ ರಾಗ
ಮುಂಜಾನೆ ಮಂಜಲಿ ಆ ಉದಯರಾಗ,
ಬಾನಿನ ಅಂಚಲಿ ಮೂಡಿದ ಹೊಸರಾಗ,
ನಗು ನಗುತ ನೀನು ಬಂದಾಗ,
ನಾ ಹಾಡಿದೆ ನಿನಗಾಗಿ ಪ್ರೇಮರಾಗ.
ನಿನ್ನ ಗಾಯನಕೆ ಕೋಗಿಲೆಯು ನಾಚಿದೆ,
ನಿನ್ನ ಸೌಂದರ್ಯಕೆ ಮಂಜು ಕರಗಿದೆ,
ನಿನ್ನ ನರ್ತನಕೆ ನವಿಲು ಮೌನವಾಗಿದೆ,
ಗೆಳತಿ ನಿನ್ನೊಲವ ಮನವು ಬೇಡಿದೆ..
– ಡಾ. ಬಿ. ವೆಂಕಟೇಶ್
ಅರಿವಿಲ್ಲದೆ… ಆದ ಪರಿಚಯ ನಮ್ಮದು ಅಂದು,
ನಿನ್ನ ಪರಿಚಯ ಆದ ದಿನದಿಂದ ಅಗಿರುವೆ ನಾನು
ಪುಟ್ಟ ಮಗುವಿನಂತೆ ಇಂದು,
ನೀ ತೋರುವ ಸ್ನೇಹದ ಮಮತೆಯಲ್ಲಿ
ಅಮ್ಮನ ಪ್ರೀತಿಯ ಸವಿಯುತಿರುವೆ,
ನಿನ್ನ ಈ ಮುದ್ದಾದ ಕೋಪದಿ
ಅಪ್ಪನನ್ನು ನೆನಪಿಸುತೀರುವೆ,
ಏನೆಂದು ಹೆಸರಿಡಲಿ ಈ ಸುಂದರವಾದ ಸಂಬಂಧಕ್ಕೆ….
– ಹೆಚ್ ಸಂಗಯ್ಯ
ಮೊದಲಾಸಲ ಸೀರೆಯಲ್ಲಿ ನಿನ್ನನ್ನು ನಾ ಕಂಡಾಗ ಕಣ್ಣಂಚಿನಲ್ಲಿ ನೀರು ಜಾರ ತೊಡಗಿತು, ಕಾರಣ ಎಷ್ಟು ಮುದ್ದಾಗಿ ಕಾಣುತ್ತಿದ್ದಾಳೆ…..
ನನ್ನ ಬಂಗಾರ ಎಂಬ ಖುಷಿಗೆ, ಹಾಗೆಯೇ…..
ಇಂತಹ ಮುದ್ದಾದ ನನ್ನ ಬಂಗಾರನ ಹೇಗೆ ಬಿಟ್ಟು ಕೊಡೋದು ಎಂಬ ನೋವಿಗೆ ಮನಸ್ಸು ಕೊರಗತೊಡಗಿತು.
– ಹೆಚ್ ಸಂಗಯ್ಯ
ಮಳೆಯಲ್ಲಿ ನೆನೆದ ಮನಸ್ಸು….
ಹಾಗೆ ಮನದಲ್ಲಿ ನೊಂದ ಮನಸ್ಸು….
ಎರಡಕ್ಕೂ ಒಂದೇ ಕಾರಣ ಅದುವೇ ಈ ಪ್ರೀತಿ,
ಮಳೆಯಲ್ಲಿ ನೆನೆದಾಗ ಅವಳ ನೆನಪಲ್ಲಿ ಕಣ್ಣೀರನ್ನು ಮರೆ ಮಾಚುವೆ,,
ಮನದಲ್ಲಿ ನೋಂದಾಗ ಯಾರಿಗೂ ಗೊತ್ತಾಗದ ಹಾಗೆ ನಗು ಮುಖದಿ ಇರುವೆ…… ಇವೆರಡನ್ನು ಕಲಿಸಿ ಕೊಟ್ಟವಳು ನೀನೇ….ಅಲ್ಲವೇ.
– ಹೆಚ್ ಸಂಗಯ್ಯ
ಪ್ರೇಮಿಸುವುದೆಂದರೆ ಉಮ್ಮಳಿಸಿ ಬರುವ ನಿನ್ನ ನೆನಪು
ಯಾವುದನ್ನು ಪ್ರೇಮದ ನೋವೆಂದು ಕೇಳುತಿದ್ದಿರ!
ಒಮ್ಮೆ ಯಾರನ್ನಾದರೂ ಪ್ರೇಮಿಸಿ ನೋಡಿ.
– ನುಸ್ರತ್ ಫತೇ ಅಲಿ ಖಾನ್
ಅನು ~ಸಾಕಿ