Site icon Kannada Chetana

ನನಗೆ ಪ್ರೇಮವೇ 💕 ಸಿಗಲಿಲ್ಲ!💔 ಮರ್ಲ್ಲಿನ್ ಮನ್ರೋ!

Marilyn Monroe -ಮರ್ಲಿನ್ ಮನ್ರೋ

Marilyn Monroe -ಮರ್ಲಿನ್ ಮನ್ರೋ

ಜಾಗತಿಕ ಪರಮ ಸುಂದರಿ ಅಮೇರಿಕಾದ ಖ್ಯಾತ ರೂಪದರ್ಶಿ  ಚಲನಚಿತ್ರ ನಟಿ ಮೋಹಕ ಮಾದಕತೆಯ ಮೈಮಾಟವನ್ನು ಹೊಂದಿದ್ದ ಲಾವಣ್ಯವತಿ ಕನ್ನಡದ ಮಿನುಗು ತಾರೆ ಕಲ್ಪನಾಳಂತೆ ಕೀರ್ತಿಯ ಶಿಖರಕ್ಕೇರಿ ನಭೋಮಂಡಲದ ತಾರೆಯಾಗಿ ಜನಪ್ರೀಯತೆಯ ಆಂತರಿಕ ಕಕ್ಷೆಯಿಂದ ಸರಸರನೇ ಕಳಚಿ ಬಿದ್ದಳು, ಬಿದ್ದವಳ ಹೆಸರು ಮರ್ಲಿನ್ ಮನ್ರೋ!

ಇಂದಿಗೆ ಸರಿಯಾಗಿ ನೂರಾ ಇಪ್ಪತ್ಮೂರು ವರ್ಷಗಳ ಹಿಂದೆ ಅಮೇರಿಕಾದ ಕ್ಯಾಲಿಪೋರ್ನಿಯಾದಲ್ಲಿ ಆಕಾಶದಿಂದ ಧರೆಗಿಳಿದ ಬಂದ ಕನ್ಯೆ ಅಪ್ಸರೆ ಎಂಬಂತೆ ಜನಿಸಿದಳು…

ಮರ್ಲಿನ್ ಮನ್ರೋಳಿಗೆ ಅವಳ ತಂದೆ ಯಾರು ಎಂದು ಹೆಸರು ಗೊತ್ತಿತ್ತು ಆದರೆ ಆತನ ಮುಖ ಕೊನೆಯವರೆಗೆ ಅವಳ ಕಾಣಲಾಗಲಿಲ್ಲ….ಏಕೆಂದರೆ ಅವಳ ತಾಯಿ ಮದುವೆಯಾಗದೆ ಮನ್ರೋಳನ್ನು ಹೆತ್ತಿದ್ದಳು. ಇರಲಿ ಅವಳ ಬದುಕಿನ ಬಗ್ಗೆ ಕೊನೆಯಲ್ಲಿ ಮಾತನಾಡುವೆ.

ಮರ್ಲಿನ್ ಮನ್ರೋ ತನ್ನ ಸ್ನಿಗ್ಧ ಸೌಂದರ್ಯದ ರೂಪರಾಶಿಯಿಂದ ಅಮೇರಿಕನ್ ರ ನಿದ್ದೆಗೆಡಿಸದ್ದಳು ಅವಳಿಗಾಗಿ ಅಮೇರಿಕಾದ ಚಲನ ಚಿತ್ರ ಮಂದಿರದ ಗೇಟ್ ಕೀಪರ್ ನಿಂದ ಹಿಡಿದು ಅಮೇರಿಕಾದ ಅಂದಿನ ಅಧ್ಯಕ್ಷ ಜಾನ್ ಎಫ್ ಕೆನೆಡಿಯವರಿಗೆ ದೇವದಾಸರಾಗಿದ್ದರು ಎನ್ನುವದು ಪ್ರತೀತಿಯಲ್ಲಿ ಆಗಿನ ಕಾಲದ ಮಾತಾಗಿತ್ತು.

ಹಾಲಿವುಡ್ ಚಿತ್ರನಟಿಯಾಗಿ ಬೆಳ್ಳಿ ಬದುಕಿಗೆ ಕಾಲಿಟ್ಟ ಮಿಂಚು ಬಳ್ಳಿ ಮರ್ಲಿನ್ ಮನ್ರೋಳ ಬದುಕು ಅದೃಷ್ಟದಿಂದ ಕೂಡಿ ಗೆಲುವ ಅನ್ನುವುದು ಅವಳ ಬೈತಲೆಯಲ್ಲಿನ ಸಿಂಧೂರವಾಗಿತ್ತು ……ಅವಕಾಶಗಳು ಅವಳು ನಿತ್ಯ ಹಾಕುವ ಕಿವಿಯ ಓಲೆ ಝುಮಕ್ಕಿಗಳಾಗಿದ್ದವು …..ದುಡ್ಡು ದುಡ್ಡು ಅಪಾರ ದುಡ್ಡು ಅವಳು ಪಾಲಿಗೆ ಎರಡು ಕ್ಕೆ ತಟ್ಟಿ ಹೆಚ್ಚಾದ ಸುಗಂಧ ಭರಿತ  ಪೌಡರನ್ನು ಕೈ ತಟ್ಟುತ್ತಾ ಹುಡಿ ಹಾರಿಸಿ ಮುಖಕ್ಕೆ ಹಚ್ಚಿಕೊಂಡoತಾಗಿತ್ತು ….. 

ಕೀರ್ತಿ ಎನ್ನುವದು ಅವಳು ಬಳಸುವ ಪರಿಮಳದ ದ್ರವ್ಯವಾಗಿತ್ತು…. ಅವಳ ಸಂಗ ಸೇರಲು ಅಸಂಖ್ಯಾತ ಪ್ರೇಮಿಗಳು ವಿಲವಿಲ ಒದ್ದಾಡಿದರೆ ಕೊಟ್ಯಾಧೀಶರು ಹಗಲಿರುಳು ಕನವರಿಸುತ್ತಿದ್ದರು. 

ಅಮೇರಿಕಾದಲ್ಲಿ ಲೈಂಗಿಕ ಲಾಂಛನವಾಗಿ ಗುರುತಿಸಿಕೊಂಡಿದ್ದ ಮನ್ರೋಳ ಬದುಕಿನಲ್ಲಿ ಮೂರು ಜನ ಗಂಡಂದಿರು ಬಂದು ಹೋದರು ಆದರೂ ಮರ್ಲಿನ ಮನ್ರೋಳಿಗೆ ಸೀಮಂತಿಕೆಯ ಭಾಗ್ಯ ಸಿಗಲಿಲ್ಲ…ಅವಳ ಬದುಕಿನಲ್ಲಿ ಬಂದು ಹೋದ ಗಂಡಂದಿರಿಂದ ಅವಳಿಗೆ ಒಂದೇ ಒಂದು ಹಿಡಿ ಪ್ರೀತಿ – ಪ್ರೇಮ ಅವಳಿಗೆ ಕೊಡಲಿಲ್ಲ, ಸಿಗಲಿಲ್ಲ …. ಹಾಗಂತ ಇದು ಅವಳ ನಿಲುವಾಗಿತ್ತು.

ಮನ್ರೋಳ ಬದುಕಿನ ಬಗ್ಗೆ ಬಗೆದಷ್ಟು ಮೊಗೆದಷ್ಟು ರಂಜನೀಯ ವಿಷಯಗಳು ನಮಗೆ ಸಿಗುತ್ತವೆ …..ಅವಳು ಒಮ್ಮೆ ರೂಪದರ್ಶಿಯಾಗಿ ಮ್ಯಾಗಜೀನ್ ಗಾಗಿ ಭಾವಚಿತ್ರ ಕ್ಲಿಕ್ಕಿಸಿಕೊಳ್ಳುವಾಗ ಜೋರಾದ ಗಾಳಿಗೆ ಅವಳ ಉಟ್ಟ ಬಟ್ಟೆ …….. ಆ ಭಾವಚಿತ್ರ ಅಮೇರಿಕನ್ನರನ್ನು ಪಡ್ಡೆ ಹುಡುಗರನ್ನು ದಂಗು ಬಡಿಸಿತ್ತು….ಅಮೇರಿಕನ್ನ ನಟಿಯರಲ್ಲಿಯೇ ಅವಳ ಆ ಚಿತ್ರ ತುಂಬಾ ಜನಪ್ರೀಯವಾಗಿತ್ತು ಸಾಕಷ್ಟು ದುಡ್ಡು -ದೌಲತ್ತು ಗಳಿಸಿದ ಮನ್ರೋ ಮಾತ್ರ ಸುಖದಿಂದ ವಂಚಿತಳಾಗಿದ್ದಳು ದುರಾದೃಷ್ಟಕ್ಕೆ ಅವಳ ಕೆನ್ನೆಯ ಮೇಲೆ ಕೊದಲು ಬೆಳೆದಿದ್ದವು ….ಇದರಿಂದ ಅವಳು ಒಂದಿಷ್ಟು ಮನಸಿಗೆ ಕಿರಿಕಿರಿಯಾಗಿತ್ತು (ಕನ್ನಡದ ನಟಿ ಕಲ್ಪನಾಳಿಗೆ ಕೈ ಮೇಲೆ ಇದೇ ತರಹದಲ್ಲಿ ಬಿಳಿ ಮಚ್ಚೆ ಬೆಳೆಯಲು ಪ್ರಾರಂಭಿಸಿತ್ತು?)

ಕುಡಿತ, ಖಿನ್ನತೆ ಭಗ್ನಪ್ರೇಮದ ಸೇತುವೆ ಮೇಲೆ ಸಾಗಿದ ಮರ್ಲಿನ್ ಮನ್ರೋಳ ಬದುಕಿಗೆ ವಿಧಿ ಕೊಳ್ಳಿಯಿಡಲು ಪ್ರಾರಂಭಿಸಿದ ಮತ್ತು ಮನ್ರೋ ಕೂಡಾ ತನ್ನ ಸ್ವಯಂಕೃತಪರಾದರಿಂದ ಬಂದ ಅವಕಾಶಗಳನ್ನು ಎಡಗಾಲಿನಿಂದ ಒದ್ದಳು ಒದ್ದ ಪರಿಣಾಮ ಅಕ್ಷರಶಃ ವೈಫಲ್ಯಗಳ ಸರಮಾಲೆ ಅವಳನ್ನು ಸರ್ಪದಂತೆ ಸುತ್ತು ಹಾಕಿ ಉಸಿರುಗಟ್ಟಿಸಿ ದಿವಾಳಿಯಾಗಿಸಿದವು …..ಇದು ಮುಂದುವರೆದು ಒಂದು ದಿನ ಅವಳ ಆತ್ಮಹತ್ಯೆಗೆ ಸಜ್ಜಾದಳು (ಕಲ್ಪನಾಳ ರೀತಿಯಲ್ಲಿ) ಸಜ್ಜಾಗಿ ಸಾಯುವ ಮುನ್ನ ಸಾವಿನ ಪತ್ರ ಬರೆದಳು ನನಗೆ ನನ್ನ ಜೀವನದಲ್ಲಿ ಪ್ರೀತಿ – ಪ್ರೇಮ ಸಿಗಲೇ ಇಲ್ಲ ! 😭😭💔💔ಇಂತಿ ಮರ್ಲಿನ್ ಮನ್ರೋ………..!

ಏನಾಗಿತ್ತು ಮರ್ಲಿನ್ ಮನ್ರೋಳಿಗೆ … ?

ಅವಳ ಹುಟ್ಟು ಒಂದು ದುರಂತವಾಗಿತ್ತು ಮನ್ರೋಳಿಗೆ ತನ್ನ ಜನಕ ಯಾರು ಎಂಬುವದೇ ಕೊನೆಗಾಲದವರೆಗೂ ಗೊತ್ತಾಗಲಿಲ್ಲ! ತಾಯಿ ಮದುವೆಯಾಗುವ ಮುನ್ನವೆ ಮನ್ರೋ ಹುಟ್ಟಿದ್ದಳು ತಾಯಿ ಕೂಡಾ ಗಂಡಸರಿಂದ ದೌರ್ಜನ್ಯಕ್ಕೊಳಗಾಗಿದ್ದಳು ಹುಚ್ಚತನದ ಕಾಯಿಲೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ತಾಯಿ ಶೂಶ್ರೂಷೆ ಪಡೆಯುತ್ತಿದ್ದರೆ ಮನ್ರೋಳಿಗೆ ಬಾಲ್ಯದಲ್ಲಿ ತಾಯಿ -ತಂದೆ ಪ್ರೀತಿ ಸಿಗಲಿಲ್ಲ.
ಸುಮಾರು ಹತ್ತು ಬಾಡಿಗೆ ತಂದೆ- ತಾಯಿಯರ ಮನೆಯಲ್ಲಿ ಬೆಳೆದ ಮನ್ರೋ ಬಾಲ್ಯದ ಬದುಕು ದಿಕ್ಕಾಪಾಲಾಗಿತ್ತು ಅನಾಥಾಲಯದಲ್ಲಿ ಬೆಳೆದ ಮನ್ರೋಳಿಗೆ ಅನಾಥ ಪ್ರಜ್ಞೆ ಹೆಜ್ಜೆ ಹೆಜ್ಜೆಗೂ ಕಾಡುತಿತ್ತು ಮೇಲಾಗಿ ಬಾಲ್ಯದಲ್ಲಿರುವಾಗಲೇ ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೊಳಗಾಗಿ ಇಡೀ ಜೀವಮಾನವೆಲ್ಲ ವಿಹಲ್ವಗೊಂಡು ಕ್ಷೋಭೆಗೊಳಗಾಗಿದ್ದಳು ಇವೆಲ್ಲವುಗಳ ಒಟ್ಟು ಪರಿಣಾಮ ಮರ್ಲಿನ್ ಮನ್ರೋಳ ವ್ಯಕ್ತಿತ್ವದ ಮೇಲಾಗಿತ್ತು ಹಾಗಾಗಿ ಅವಳಗಿಂತ ನಂತರ ಹುಟ್ಟಿದ ಶರಪಂಜರ ನಟಿ ಕನ್ನಡದ ಕಲ್ಪನಾಳಂತೆ ನಾನು ಬಂದೆ …. ! ನಾನು ನೋಡದೆ …! ಎಂಬ ರೀತಿಯಲ್ಲಿ ಮರ್ಲಿನ್ ಮನ್ರೋ ಸಾಗುತ್ತಾ ಒಂದು ದಿನ ಸಾಕಷ್ಟು ನಿದ್ರೆ ಮಾತ್ರ ಸೇವಿಸಿ ನನಗೆ ಪ್ರೀತಿ -ಪ್ರೇಮ ಸಿಗಲಿಲ್ಲ!😭😭 ಎಂದು ಇಹಲೋಕ ತ್ಯಜಿಸಿದಳು. ಇದೆಲ್ಲವನ್ನು ಮನ್ರೋ ಸಕಾರಾತ್ಮಕವಾಗಿ ತೆಗೆದುಕೊಂಡು ಬದುಕಿದ್ದರೆ ಬದುಕು ಬಂಗಾರವಾಗುತ್ತಿತ್ತು ಅವಳು ಹೊಸ ಇತಿಹಾಸ ನಿರ್ಮಿಸಿ ಮನೆಮಾತಾಗುತ್ತಿದ್ದಳು.

೧೦ ರಥ ಕೋರಿ ಇಂಡಿ 🙏🙏🌹🌹

Exit mobile version