Site icon Kannada Chetana

ಮಾಟ-ಮಂತ್ರ- ಮೋಡಿ ನಿಜವೇ…??. ಭಾಗ-1

ಮಾಟ-ಮಂತ್ರ

ಮಾಟ-ಮಂತ್ರ

ಜಗತ್ತಿನ ಕೋಟ್ಯಾಂತರ ಜನರಿಗೆ ಜಗತ್ತು ಪ್ರಾರಂಭವಾದಾಗಿನಿಂದ ಇಂದಿನವರೆಗೂ ಅತ್ಯಂತ ಕುತೂಹಲ ಕೌತಕದ ವಿಷಯವೆಂದರೇ ಈ ಭೂಮಿಯ ಮೇಲೆ ನಿಜಕ್ಕೂ ಮಾಟ-ಮಂತ್ರ-ಮೋಡಿ- ಬಾನಾಮತಿ ಅಸ್ತಿತ್ವದಲ್ಲಿವೆಯಾ.? 

ಮಾಟ- ಮಂತ್ರದಿಂದ ಛೇಡಿ- ಚಿಪಾಟಿಯಿಂದ ಎದುರಾಳಿಯನ್ನು ಬಗ್ಗು ಬಡಿದು ನಮಗಾದವರ ಮೇಲೆ ನಮ್ಮ ಮನ ಬಂದಂತೆ ನಾನಾ ರೀತಿಯಲ್ಲಿ ಹಿಂಸೆ ನೀಡಿ ಸೇಡು ತೀರಿಸಿಕೊಳ್ಳಬಹುದೇ…..?? ಎನ್ನುವ ವಿಲಕ್ಷಣವಾದ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ಹುಡುಕುವದು ಅತ್ಯಂತ ಕಷ್ಟದ ಕೆಲಸ ಆದರೂ ನಾನು ಕೂಡಾ ಹಲವರಂತೆ ಉತ್ತರ ಹುಡುಕುವ ಒಂದು ಹೊಸದಾಗಿರುವ ಸಣ್ಣ  ಪ್ರಯತ್ನಕ್ಕೆ ಹೊಸ ಹೆಜ್ಜೆಯನ್ನು ನಿಗೂಢ ಲೋಕಕ್ಕೆ ನನ್ನ ಮೊದಲನೇಯ ಲೇಖನ ಭಾಗ 01 ಮೂಲಕ ಇಡುತ್ತಿದ್ದೇನೆ……

ಏಟು ಎದಿರೇಟು…!!

ಕನ್ನಡ ಸಿನಿಮಾ ಜಗತ್ತಿನಲ್ಲಿ 1981ರಲ್ಲಿ ಒಂದು ಮೋಡಿ- ಮಾಟ- ಮಂತ್ರದ ಕುರಿತು ಒಂದು ಅದ್ಭುತವಾದ ಚಲನ ಚಿತ್ರ ‘ಏಟು ಎದರೇಟು’ ಶ್ರೀನಾಥ ಸುಂದರ ಕೃಷ್ಣ ಅರಸ ಲಕ್ಷ್ಮೀ ನಟನೆಯ ಅಭಿನಯದಲ್ಲಿ ಬಿಡುಗಡೆಯಾಯಿತು.ಈ ಚಲನಚಿತ್ರದಲ್ಲಿ ಸುಂದರ ಕೃಷ್ಣ ಅರಸ ಅತ್ಯಂತ ಘೋರವಾದ ಮೋಡಿ ಮಾಟ ಮಾಡುವ ಒಬ್ಬ ಕ್ಷುದ್ರ ಮಾಂತ್ರಿಕನಾಗಿರುತ್ತಾನೆ.ಇಡೀ ಊರಿನ ಜನರ ಮನದಲ್ಲಿ ತನ್ನ ಮಾಟ ಮಂತ್ರದಿಂದ ಭಯವನ್ನು ಹುಟ್ಟಿಸಿರುತ್ತಾನೆ. ಸುಂದರ ಕೃಷ್ಣ ಅರಸ ಮಾಟಗಾರನ ಪಾತ್ರದಲ್ಲಿ ಒಂದು ಸುಡುಗಾಡಿನಲ್ಲಿ ಕುಳಿತು ಆವಾ ಹಯಾಮಿ..! ಎನ್ನುವ ಕರ್ಕಶವಾದ ಮಂತ್ರೋಛಾರಣೆಯೊಂದಿಗೆ ಆ ಊರಿನ ಸಭ್ಯಸ್ಥ ಗೃಹಿಣಿ ಲಕ್ಷ್ಮೀಯನ್ನು ಸ್ಮಶಾನ ಭೂಮಿಗೆ ಬರಲು ಪ್ರಚೋಧನೆಯನ್ನು ನೀಡುತ್ತಾನೆ. ನೋಡು ನೋಡುತ್ತಿದ್ದಂತೆ ಲಕ್ಷ್ಮೀ ಗರಬಡಿದವರಂತೆ ಸಾಗುತ್ತ ಘನಘೋರವಾದ ರುದ್ರಭೂಮಿಗೆ ಕಾರಿರುಳಲ್ಲಿ ಕಾಲಿಡುತ್ತಾಳೆ. ಅತ್ಯಂತ ಉಗ್ರಳಾಗಿ ವರ್ತಿಸುತ್ತ ಲಕ್ಷ್ಮೀ ತನಗರವಿಲ್ಲದಂತೆ ಆತನ ಪ್ರತಿ ಮಾತಿಗೂ ಸ್ಪಂದಿಸುತ್ತಾ ಸ್ಮಶಾನ ಭೂಮಿಯಲ್ಲಿ ಕುಳಿತು ಆತನ ಪಾಲಿಗೆ ಆಜ್ಞಾದಾರಕಳಾಗಿ ಕಾರ್ಯ ನಿರ್ವಹಿಸುತ್ತಾ ಸಾಗುತ್ತಾಳೆ. ಇದೇ ಚಲನ ಚಿತ್ರದ ಪ್ರಸಂಗವನ್ನು ಹೋಲುವ ಕರ್ನಾಟಕದ ಅತ್ಯಂತ ಪುರಾತನ ಕತೆಯೊಂದನ್ನು ನಾನಷ್ಟೇ ಅಲ್ಲ ಪ್ರತಿಯೊಬ್ಬ ಕನ್ನಡಿಗರು ಬಾಲ್ಯದಲ್ಲಿ ಕೇಳಿರಬೇಕು. ಆ ಕತೆ  ಇಂದಿಗೂ ತುಂಬಾ ರೋಮಾಂಚನಕಾರಿ ದಂತಕತೆಯಾಗಿದೆ….

ಬಾಣಂತಿ ಮಾಟಗಾರನ ಬೆನ್ನು ಹತ್ತಿದಳು..!!

ಹೆಚ್ಚು ಕಡಿಮೆ ಎಲ್ಲರೂ ಕೇಳಿರುವಂತೆ  ಕರ್ನಾಟಕದಲ್ಲಿ ಒಂದಾನೊಂದು ಕಾಲದಲ್ಲಿ ಅತ್ಯಂತ ಜನಜನಿತವಾದ ಭಯಾನಕತೆಯಿಂದ ಕೂಡಿದ ಒಂದು ಅದ್ಭುತವಾದ ದಂತಕತೆ ಚಾಲ್ತಿಯಲ್ಲಿತ್ತು. ಆ ಕತೆ ಈಗಲೂ ಇದೇ ಅದು ಬೇರೆ ಮಾತು.

ಒಂದು ಕುಗ್ರಾಮದಲ್ಲಿ ಒಬ್ಬ ಮಾಟ- ಮಂತ್ರ ಮಾಡುವ ಕ್ಷುದ್ರ ವ್ಯಕ್ತಿ ಒಂದು ದಿನ ಆ ಊರಿನಲ್ಲಿ ನವಜಾತ ಶಿಸು ಹೆತ್ತ ಒಬ್ಬ ಬಾಣಂತಿ ಹೆಂಗಸಿನ ಮನೆಯನ್ನು ಗುರುತಿಸಿ ಪತ್ತೆ ಹಚ್ಟುತ್ತಾನೆ. ತಾನು ಅತಿ ಮಾನುಷ ಶಕ್ತಿಯನ್ನು ಪಡೆಯಲು ಹಾಗೆ ವಿಚಿದ್ರಕಾರಿ ಶಕ್ತಿಯನ್ನು ಪಡೆಯಲು ಆತನಿಗೆ ಬಾಣಂತಿಯ ಶವದ ಎಡಗೈ ಬೇಕಾಗಿರುತ್ತದೆ. ಆತ ಅಂದು ಕೊಂಡಂತೆ ಒಂದು ದಿನ ಮಧ್ಯಾಹ್ನ ಬಾಣಂತಿ ವಾಸವಾಗಿದ್ದ ಗುಡಿಸಲಿಗೆ ಬಂದು ಭಿಕ್ಷೆಯನ್ನು ಬೇಡುತ್ತಾನೆ. ಮಾಟಗಾರನ ಭೀಕ್ಷೆಯ ಮೊರೆಯನ್ನು ಕೇಳಿ ಆ ಬಾಣಂತಿ ಅಮಾಯಕಳಾಗಿ ಹೊರ ಬರುತ್ತಾಳೆ.ಆಗ ಅವಳನ್ನು ದಿಟ್ಟಿಸಿ ನೋಡಿದ ಭೀಕ್ಷುಕ ವೇಷಧಾರಿ ಮಾಟಗಾರನ ದೃಷ್ಠಿಗೆ ಆ ಬಾಣಂತಿ ಒಂದೇ ಕ್ಷಣದಲ್ಲಿ ತನ್ನಿರುವಿಕೆಯನ್ನು ಮರೆತು ಗರಬಡಿದಂತವಳಾಗಿ ಮೈ ಮೇಲೆ ಪ್ರಜ್ಞೆಯಿಲ್ಲದೇ ನಿಂತು ಬೀಡುತ್ತಾಳೆ.ನಂತರ ಕಣ್ಮುಚ್ಚಿ ಕಣ್ಣು ತೆಗಯುವದೊರಳಗಾಗಿ ಆ ಮಾಟಗಾರ ಮಾಂತ್ರಿಕನ ಬೆನ್ನು ಹತ್ತಿ ಅವಳು ತನ್ನ ನವಜಾತ ಶಿಸುವನ್ನು ಮರೆತು ಗುಡಿಸಲಿನಿಂದ ಹೊರಡುತ್ತಾಳೆ. ಹಾಗ ಮಟ ಮಟ ಮಧ್ಯಾಹ್ನದ ಸಮಯದಲ್ಲಿ ಮಾಟಗಾರನ ಬೆನ್ನು ಹತ್ತಿ ಸುಡುಗಾಡಿಗೆ ಸಾಗಿ ಅಲ್ಲಿ ಬಲಿಪೀಠದ ಮೇಕೆಯಂತೆ ಆತನ ಕುಕೃತ್ಯಕ್ಕೆ ಬಲಿಯಾಗಿ ಆತನ ಅತಿಮಾನುಷ ಶಕ್ತಿಗೆ ತನ್ನ ಶವದ ಎಡಗೈ ನೀಡಿ ಆಹುತಿಯಾಗುತ್ತಾಳೆ…..

ಈ ಎರಡು ವಿಷಯದಲ್ಲಿ ಒಂದೇ ತಾತ್ಪರ್ಯ ಅಡಗಿದೆ..!

ಮೊದಲನೇಯದು ಚಲನ ಚಿತ್ರದ ಪ್ರಸಂಗದಲ್ಲಿ ಆ ಗೃಹಿಣಿ ಲಕ್ಷ್ಮೀ ಆತನ ಮಂತ್ರದ ಕೂಗಿಗೆ ಆತನ ದಿಟ್ಟಿಸಿ ನೋಡಿ ಭಸ್ಮ ಎರಚಿದ ಸನ್ನಿವೇಶಕ್ಕೊಳಗಾಗಿ ಸ್ಮಶಾನಕ್ಕೆ ಮೂಕಳಾಗಿ ಎಲ್ಲವನ್ನು ಮರೆತು ಸಾಗುತ್ತಾಳೆ.

ಅದೇ ರೀತಿ ದಂತಕತೆಯ ಪ್ರಸಂಗದಲ್ಲಿ ಬಾಣಂತಿಯೂ ಕೂಡಾ ಆ ಮಾಟಗಾರ ಕ್ರೂರ ದೃಷ್ಠಿಗೆ ಆತನ ಆಜ್ಞಾದಾರಕಳಾಗಿ ಆತನ ಬೆನ್ನು ಹತ್ತಿ ನವಜಾತ ಶಿಸುವನ್ನು ಮರೆತು ಸಾಗುತ್ತಾಳೆ. ಇದರಲ್ಲಿ ಹೆಚ್ಚು ಕಡಿಮೆ ಒಂದೇ ರೀತಿಯ ಸಾಮ್ಯತೆ ಕಂಡು ಬರುತ್ತವುದು. ಮಾಟ ಮಂತ್ರ ಮೋಡಿ ಮಾಡುವ ಮಾಟಗಾರನ ಒಂದೇ ಒಂದು ಆಜ್ಞೆಗೆ ಆ ಇಬ್ಬರು ಸ್ತ್ರೀಯರು ತಮ್ಮ ಇರುವಿಕೆಯ ಪ್ರಜ್ಞೆಯನ್ನು ಮೈ ಮರೆತು ಸಾಗುವರು..

ಏನೀ ಈ ಪ್ರಸಂಗಗಳ ಮರ್ಮ.??

ಮುಂದಿನ ಭಾಗಕ್ಕೆ ಕಾಯಿರಿ…

೧೦ರಥ ಕೋರಿ ಶಿಕ್ಷಕರು ಇಂಡಿ

Exit mobile version