ಮಾನಸಿಕ ಆರೋಗ್ಯ ಎಂದರೇನು?. ಮನೋರೋಗದ ಲಕ್ಷಣಗಳು ಮತ್ತು ಸಲಹೆಗಳು | What is Mental Health?. Psychosis Symptoms and Tips

ಮಾನಸಿಕ ಆರೋಗ್ಯ

ಮಾನಸಿಕ ಆರೋಗ್ಯವು ನಮ್ಮ ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಒಳಗೊಂಡಿದೆ. ಇದು ನಾವು ಹೇಗೆ ಯೋಚಿಸುತ್ತೇವೆ, ಭಾವಿಸುತ್ತೇವೆ ಮತ್ತು ಕಾರ್ಯನಿರ್ವಹಿಸುತ್ತೇವೆ ಮತ್ತು ನಾವು ಒತ್ತಡವನ್ನು ಹೇಗೆ ನಿರ್ವಹಿಸುತ್ತೇವೆ ಮತ್ತು ಆಯ್ಕೆಗಳನ್ನು ಹೇಗೆ ಮಾಡುತ್ತೇವೆ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

ಮಾನಸಿಕ ಆರೋಗ್ಯವು  ನಮ್ಮ ಬಾಲ್ಯದಿಂದ ಹಿಡಿದು ಹದಿಹರೆಯದಿಂದ ಮತ್ತು ಪ್ರೌಢಾವಸ್ಥೆಯವರೆಗೆ ಪ್ರತಿಯೊಂದು ಹಂತದಲ್ಲೂ ತುಂಬಾ ಮುಖ್ಯವಾಗಿದೆ. ನೀವು ನಿಜವಾಗಿಯೂ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಅದು ನಿಮ್ಮ ಆಲೋಚನೆ, ಮನಸ್ಥಿತಿ ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ. 

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್‌ನ (NIMH) ಪ್ರಕಾರ, ವಯಸ್ಕರಲ್ಲಿ ಐವರಲ್ಲಿ ಒಬ್ಬರು ಮಾನಸಿಕ ಅಸ್ವಸ್ಥತೆಯೊಂದಿಗೆ ಬದುಕುತ್ತಿದ್ದಾರೆ. 

ಮನೋರೋಗಕ್ಕೆ ಈ ಕೆಳಗಿನ ಅಂಶಗಳು ಕಾರಣವೆಂದು ಹೇಳಬಹುದು :

  • ಜೈವಿಕ ಅಂಶಗಳಾದ ಜೀನ್‌ಗಳು ಅಥವಾ ಮೆದುಳಿನ ರಾಸಾಯನಗಳು.
  • ಜೀವನದಲ್ಲಿ ನಡೆದ ಆಘಾತಕರ ಅಥವಾ ನಿಂದನೆಯಂತಹ ಅನುಭವಗಳು. 
  • ಅನುವಂಶಿಕತೆಯಿಂದ ಉಂಟಾದ ಸಮಸ್ಯೆ. 

ಕೆಲವು ಮನೋರೋಗದ ಲಕ್ಷಣಗಳು ಇಲ್ಲಿವೆ:

  • ಸಮಾಜವಿರೋಧಿತನದ ವ್ಯಕ್ತಿತ್ವ
  • ಆತಂಕದ ಸಮಸ್ಯೆಗಳು  (ಪ್ಯಾನಿಕ್ ಡಿಸಾರ್ಡರ್ಸ್, ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ (OCD) ಮತ್ತು ಸಾಮಾಜಿಕ ಆತಂಕ) ಗಮನ ಕೊರತೆ
  • ಖಿನ್ನತೆ
  • ತಿನ್ನುವ ಅಸ್ವಸ್ಥತೆಗಳು
  • ಒತ್ತಡದ ಅಸ್ವಸ್ಥತೆ
  • ಸ್ಕಿಜೋಫ್ರೇನಿಯಾ
  • ಸ್ವ ಹಾನಿ
  • ಆತ್ಮಹತ್ಯೆ ಪ್ರಯತ್ನಗಳು 

ಗಂಭೀರ ಮಾನಸಿಕ ಅಸ್ವಸ್ಥತೆ ಎನ್ನುವುದು ವ್ಯಕ್ತಿಯ ಜೀವನ ಮತ್ತು ಕಾರ್ಯನಿರ್ವಹಿಸುವ ಸಾಮರ್ಥ್ಯದೊಂದಿಗೆ ಹಸ್ತಕ್ಷೇಪ ಮಾಡುತ್ತದೆ. ಇದು ತಾನಾಗಿಯೇ ಕಡಿಮೆ ಆಗುವ ಅಥವಾ ಇಚ್ಛಾಶಕ್ತಿಯಿಂದ ಹೋಗಲಾಡಿಸಬಹುದಾದ ವಿಷಯವಲ್ಲ. 

ಮನೋರೋಗಕ್ಕೆ ಮುನ್ನೆಚ್ಚರಿಕೆ ಚಿಹ್ನೆಗಳು ಮತ್ತು ಲಕ್ಷಣಗಳು:

ನೀವು ಅಥವಾ ನಿಮ್ಮ ಸುತ್ತಲಿರುವ ಯಾರಾದರೂ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಈ ಕೆಳಗಿನ ಒಂದು ಅಥವಾ ಹೆಚ್ಚಿನ ನಡವಳಿಕೆಗಳನ್ನು ನೀವು ಗಮನಿಸಬಹುದು:

  • ಯಾರಿಗೂ ಕೇಳಿಸದೇ ಇರುವ ಧ್ವನಿಯನ್ನು ಕೇಳುವುದು. 
  • ತರ್ಕಕ್ಕೆಬಾರದ ಅಥವಾ ಸತ್ಯವಲ್ಲದ ವಿಷಯಗಳನ್ನು ನಂಬುವುದು. 
  • ತಮಗೆ ಅಥವಾ ಬೇರೆಯವರಿಗೆ ಹಾನಿ ಮಾಡುವುದು. 
  • ನಿಮ್ಮ ದೈನಂದಿನ ಕೆಲಸಗಳನ್ನು ಮಾಡಲು ಆಗದೆ ಇರುವುದು. 
  • ನಿಮ್ಮ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವೆನಿಸಬಹುದು. 

ನಿಮಗೆ ಗೊತ್ತಿರುವ ಯಾರಾದರೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯಾ ? 

ಮಾನಸಿಕ ಆರೋಗ್ಯದ ಸಮಸ್ಯೆಗಳ ಬಗ್ಗೆ ಮಾತನಾಡುವುದು ಸ್ವಲ್ಪ ಕಷ್ಟವೆನಿಸಬಹುದು. ಆದರೆ ಇದನ್ನು ಕಡೆಗಣಿಸಬಾರದು. ನಿಮಗೆ ತುಂಬಾ ಹತ್ತಿರವಿರುವವರ ಜೊತೆ ಇದರ ಬಗ್ಗೆ ಮಾತನಾಡಿ ಒಳ್ಳೆಯ ಮಾನಸಿಕ ತಜ್ಞರ ಹತ್ತಿರ ಹೋಗಿ ಕೌನ್ಸೆಲ್ಲಿಂಗ್/ ಸಮಾಲೋಚನೆಯನ್ನು ಪಡೆಯುವುದು ಅತೀ ಉತ್ತಮ. 

ಮಾನಸಿಕ ಅಸ್ವಸ್ಥತೆಯೊಂದಿಗೆ ಚೆನ್ನಾಗಿ ಬದುಕಲು ಸಲಹೆಗಳು:

ಮಾನಸಿಕ ಅಸ್ವಸ್ಥತೆಯ ಕಾರಣದಿಂದಾಗಿ ಕೆಲಸ ಮಾಡಲು, ಶಾಲೆಯನ್ನು ಮುಂದುವರಿಸಲು, ನಿಯಮಿತ ವೇಳಾಪಟ್ಟಿಯನ್ನು ಅನುಸರಿಸಲು, ಆರೋಗ್ಯಕರ ಸಂಬಂಧಗಳನ್ನು ಹೊಂದಲು, ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ. 

ಆದರೆ, ಆರಂಭಿಕ ಹಂತದಲ್ಲಿಇದನ್ನು ಕಂಡುಕೊಂಡು, ಸ್ಥಿರವಾದ ಚಿಕಿತ್ಸೆ-ಸಾಮಾನ್ಯವಾಗಿ ಔಷಧಿ ಮತ್ತು ಸೈಕೋಥೆರಪಿಗಳಿಂದ ಈ ಪರಿಸ್ಥಿತಿಗಳನ್ನು ನಿರ್ವಹಿಸಲು, ಮತ್ತು ಅರ್ಥಪೂರ್ಣ, ಉತ್ಪಾದಕ ಜೀವನವನ್ನು ನಡೆಸಲು ಸಾಧ್ಯವಿದೆ.

ಇತ್ತೀಚಿನ ದಿನಗಳಲ್ಲಿ, ಇಂತಹ ಜನರಿಗೆ ಸಾಮಾನ್ಯ ಬದುಕನ್ನು ಜೀವಿಸಲು ಮತ್ತು ಅವರ ಗುರಿಯನ್ನು ಸಾಧಿಸಲು ಸಹಾಯವಾಗುವಂತೆ ಸಾಮಾಜಿಕ ಬೆಂಬಲದ  ಜೊತೆಗೆ ಪುರಾವೆ ಆಧಾರಿತ ಹೊಸ ಚಿಕಿತ್ಸೆಗಳು ಲಭ್ಯವಿದೆ. ಅಂತಹ ಕೆಲವು ಸಲಹೆಗಳು, ಉಪಕರಣಗಳು ಮತ್ತು ಟೆಕ್ನಿಕ್ ಗಳು ಇಲ್ಲಿವೆ:

ಮಾನಸಿಕ ಆರೋಗ್ಯ
ಮಾನಸಿಕ ಆರೋಗ್ಯ
  1. ಒಳ್ಳೆಯ ಮನೋವೈದ್ಯರನ್ನು ಮಾರ್ಗದರ್ಶನದಂತೆ ಚಿಕಿತ್ಸೆಗೆ ಯೋಜನೆ ಮಾಡಿಕೊಳ್ಳಬೇಕು. ನೀವು ಈಗ ಆರಾಮವಾಗಿದ್ದೀನಿ ಎನ್ನಿಸಿದರೂ ಕೂಡ, ವೈದ್ಯರ ಮಾರ್ಗದರ್ಶನವಿಲ್ಲದೆ ಅವರ ಬಳಿಗೆ ಹೋಗುವುದನ್ನು ಮತ್ತು ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಬೇಡಿ, ಅಗತ್ಯವಿದ್ದರೆ ಔಷಧಿಗಳ ಡೋಸೇಜ್ಗಳನ್ನು ಸರಿಹೊಂದಿಸಲು ವೈದ್ಯರೊಂದಿಗೆ ಸಹಕರಿಸಿ. 
  2. ಉತ್ತಮ ಅಭ್ಯಾಸಗಳಾದ ಬೇಗ ಏಳುವುದು, ಧ್ಯಾನ, ಯೋಗ , ವ್ಯಾಯಾಮದಂತಹ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು. ನಿಮಗೆ ಒಬ್ಬರಿಂದಲೇ ಇದನ್ನು ಮಾಡಲು ಸಾಧ್ಯವೆನಿಸದಿದ್ದರೆ, ವೆಲ್ನೆಸ್-ಗ್ರೂಪ್ ಗಳಿಗೆ ಸೇರಿಕೊಳ್ಳಿ ಮತ್ತು ಒತ್ತಡವನ್ನು ನಿಯಂತ್ರಿಸಿಕೊಳ್ಳಿ. 
  3. ಉತ್ತಮವಾದ ಆಹಾರವನ್ನು ಸೇವಿಸಿ ಮತ್ತು ಒಳ್ಳೆಯ ನಿದ್ರೆಯನ್ನು ಪಡೆಯಿರಿ. 
  4. ಇತರರೊಂದಿಗೆ ಉತ್ತಮ್ಮ ಸಂಬಂಧವನ್ನು ಕಾಪಾಡಿಕೊಳ್ಳುವುದು ಮುಖ್ಯ. ನಿಮಗೆ ಕಷ್ಟವೆನಿಸಿದಾಗ ನಿಮ್ಮ ಆತ್ಮೀಯರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ ಮತ್ತು ಅವರ ಸಹಾಯವನ್ನು ಪಡೆದುಕೊಳ್ಳಿ. 

ಉತ್ತಮ ನಿದ್ರೆ ನಿಮ್ಮ ಮೆದುಳಿನ ಕಾರ್ಯಕ್ಷಮತೆ, ಮನಸ್ಥಿತಿ ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಸ್ಥಿರವಾಗಿ ಕಳಪೆ ನಿದ್ರೆಯು ಆತಂಕ, ಖಿನ್ನತೆ ಮತ್ತು ಇತರ ಮಾನಸಿಕ ರೋಗಗಳಿಗೆ ದಾರಿಮಾಡಿಕೊಡುತ್ತದೆ. 

Leave a Reply

Your email address will not be published. Required fields are marked *