ಮಾಯಾವಿ ಹಾಡಿನ ಸಾಹಿತ್ಯ | ಮಾಯಾವಿ ಸಾಂಗ್ ಲಿರಿಕ್ಸ್ | Mayavi Song Lyrics

Mayavi Kannada Song Lyrics

“ಮಾಯಾವಿ” ಇದು ಭಾರತೀಯ ಶಾಸ್ತ್ರೀಯ ಸಂಗೀತವನ್ನು ಆಧುನಿಕ ಧ್ವನಿಪಥಗಳೊಂದಿಗೆ ಮಿಶ್ರಣ ಮಾಡಿ, ಸೋನು ನಿಗಮ್, ಸಂಜಿತ್ ಹೆಗ್ಡೆ ಮತ್ತು ನಾಗಾರ್ಜುನ್ ಶರ್ಮಾ ಅವರರಿಂದ ಹೊರತಂದ ಒಂದು ಸುಂದರವಾದ  ಸಂಯೋಜನೆ.

ಮಾಯಾವಿ ಪ್ರಪಂಚಕ್ಕೆ ಪರಿಚಯವಾಗಿದ್ದು “ಭೂಮಿ -2024” ಮೂಲಕ. 

ಭಾರತದ ಪ್ರಸಿದ್ಧ ಸಂಗೀತ ಸಂಯೋಜಕರು ಮತ್ತು ನಿರ್ಮಾಪಕರಾದ ಸಲೀಂ ಮತ್ತು ಸುಲೈಮಾನ್ ಮರ್ಚೆಂಟ್, ಅತ್ಯುತ್ತಮ ಪ್ರತಿಭೆಗಳನ್ನು ಮತ್ತು ವೈವಿಧ್ಯಮಯ ಸಂಗೀತವನ್ನು ಉತ್ಪಾದಿಸಿ ಜಗತ್ತಿಗೆ ಪರಿಚಯಿಸಲು  ತಮ್ಮದೇ ಆದ ರೆಕಾರ್ಡ್ ಲೇಬಲ್, ಮರ್ಚೆಂಟ್ ರೆಕಾರ್ಡ್ಸ್ ಅನ್ನು ಪ್ರಾರಂಭಿಸಿದರು.

ಮರ್ಚೆಂಟ್ ರೆಕಾರ್ಡ್ಸ್ ಮೂಲಕ, ಅವರು ಹಲವಾರು ಕಲಾವಿದರೊಂದಿಗೆ ಸಹಯೋಗ ಹೊಂದಿದ್ದು, ಭಾರತೀಯ ಸಂಗೀತ ಕ್ಷೇತ್ರದ ವಿಕಸನಕ್ಕೆ ಕೊಡುಗೆ ನೀಡಿದ್ದಾರೆ. 

ಅವರ ಯೂಟ್ಯೂಬ್ ಚಾನೆಲ್, ‘ಸಲೀಂ ಸುಲೈಮಾನ್ ಮ್ಯೂಸಿಕ್’, ತಮ್ಮ ಕೆಲಸವನ್ನು ಪ್ರದರ್ಶಿಸಲು ಮತ್ತು ಹೊಸ ಕಲಾವಿದರನ್ನು ಬೆಂಬಲಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಈ ಪ್ರಯತ್ನವು ಸಂಗೀತ ಪರಂಪರೆಯನ್ನು ಸಂರಕ್ಷಿಸಲು ಮತ್ತು  ಮುಂಬರುವ ಪ್ರತಿಭೆಗಳನ್ನು ಬೆಳೆಸಲು ಇರುವ  ಅವರ ಹುಮ್ಮಸ್ಸನ್ನು ಸಾರುತ್ತದೆ. ಭೂಮಿ -2024 ಕೂಡ ಇದರ  ಸರಿಣಿಯೇ.

ಮಾಯಾವಿ ಹಾಡಿನ ಕ್ರೆಡಿಟ್‌ಗಳು:

ಸಾಹಿತ್ಯ – ನಾಗಾರ್ಜುನ್ ಶರ್ಮಾ

ಗಾಯಕರು –  ಸೋನು ನಿಗಮ್, ಸಂಜಿತ್ ಹೆಗ್ಡೆ

ಸಂಗೀತ ಸಂಯೋಜಕ – ಸಂಜಿತ್ ಹೆಗಡೆ

ನಿರ್ದೇಶಕ – ತುಷಾರ್ ಮಹಾಜನ್, ಗೌತಮ್ ಹೆಬ್ಬಾರ್, ಸನ್ನಿ ಎಂ.ಆರ್., ಸಂಜಿತ್ ಹೆಗಡೆ 

ಸಂಪಾದಕರು – ಅಲೆಕ್ ಡಿಸೋಜಾ, ರಕ್ಷಿತ್ ಮಹಾಜನ್

Mayavi Kannada Song Lyrics

ಮಾತಲ್ಲೇ ಮಿಂಚು ತಂದ ನನ್ನವಳೇ ಈ ಮಾಯಾವಿ

ಚಂದ್ರನ್ನೇ ಜುಮ್ಕಿ ಮಾಡಿ ಇಟ್ಕೊಂಡಿದ್ಲು ಹಾಯಾಗಿ

ಮುದ್ದಾದ ಕಣ್ಣಿಗೊಂದು

ಪುಟ್ಟ ಆ ಕೆನ್ನೊಗೊಂದು ನಕ್ಷತ್ರ ತಂದು ಕೊಡಲೇನು ಮಾಯಾವಿ

ಮಾಯಾವಿ ಮಿನುಗು ನೀನು

ಮುಂಜಾನೆ ಬಿಸಿಲು ನೀನು

ಸಾಲದಿರೋ ಹಾಡು ನೀನು

ಬೇಕೆನಿಸೋ ಸಂಜೆ ನೀನು

ಎಧೆಯ ಧುನಿಗೆ

ಬೆಳಕು ನೀನೆ

ನೀನಾದೆ ನೀನಾದೆ

ಯಾರಿರಧ ರಸ್ತೆಯಲ್ಲಿ

ಸಂತೈಸೋ ಅವಳೇ ಗಾಳಿ

ಸಾಗರದ ಬಾನಿನಳ್ಳಿ

ಕಂಗೊಳ್ಳೋ ಅವಳೆ ನೀಲಿ

ಸಮಯಾ ನೀ ನಿಂತೊಡನೆ

ಅವಳ ಅಂಗಯ್ಯಲ್ಲೇ

ನಾನೂನು ಶರಣಾದೆ

ಅವಳ ಗುಂಗಿನಲ್ಲೇ

ಸೋತೆ ಹೋದೆ ಸೋತೆ ಹೋದೆ

ನೀ ಮೊದಲಾ ಕೊನೆಯಾ ಆಸೆ

ನನ್ನ ಎದೆಗೆ ಹಿಡಿಸೋ ಭಾಷೆ

ಅನುರಾಗದಲಿ ಕೊನೆಬೀದಿಯಲಿ

ನನಗೂ ನಿನಗೂ ಮನೆ ಮಾಡಿರುವೆ

ಓಲಗೆ ಬರಲು ತಡ ಇನ್ನೇಕೆ

ಕಿಟಕೀಲೆ ನಾ ಕಾದೆ

ಯಾರೋ ನಾ ಯಾರೋ ಕನಸಲ್ಲಿ ಯಾರೂ ಇರದಗ

ನನ್ನವಳ ಮನಸಲ್ಲಿ ನನಗೇ ಬೇಕು ಜಾಗ

ಈ ಹೃದಯ ಮೌನ ಆಗುವಾಗ

ಮಾತು ಹೇಗೇ ಆಡಲಿ

ಹುಡುಗೀ ಹೋದೆ ಎಲ್ಲೋ ಧೂರಿ

ನೀನೇ ಸಿಕ್ಕ ಶಾಯರಿ

ಸೋತೆ ಹೋದೆ ಸೋತೆ ಹೋದೆ

ನೀ ಮೊದಲಾ ಕೊನೆಯಾ ಆಸೆ

ನನ್ನ ಎದೆಗೆ ಹಿಡಿಸೋ ಭಾಷೆ

ಅನುರಾಗದಲಿ ಕೊನೆಬೀದಿಯಲಿ

ನನಗೂ ನಿನಗೂ ಮನೆ ಮಾಡಿರುವೆ

ಓಲಗೆ ಬರಲು ತಡ ಇನ್ನೇಕೆ

ಕಿಟಕೀಲೆ ನಾ ಕಾದೆ

Mayavi Kannada Song Lyrics
Mayavi Kannada Song Lyrics

Leave a Reply

Your email address will not be published. Required fields are marked *