ಯಶಸ್ಸಿನ ಮಾರ್ಗಕ್ಕೆ ಪ್ರೇರಣೆಯ ನುಡಿಗಳು
- “ನಿರಂತರ ಪ್ರಯತ್ನವು ಅಸಾಧ್ಯವನ್ನು ಸಾಧ್ಯವಾಗಿ ಮಾಡುವುದು.”
- “ಯಾರು ನಿರಂತರವಾಗಿ ಯಶಸ್ವಿಯಾಗುತ್ತಿರುತ್ತಾರೋ, ಅವರು ನಿರಂತರವಾಗಿ ಕೆಲಸವನ್ನು ಮಾಡುತ್ತಿರುತ್ತಾರೆ .”
- “ಜಯಶಾಲಿಗಳು ತಮ್ಮ ಪ್ರಯತ್ನದ ದಾರಿಯಲ್ಲಿದ್ದಾಗ ಯಾರೂ ಸಹಾಯಕ್ಕೆ ಬರುವುದಿಲ್ಲ. ಆದರೆ ಸಾಧನೆಯ ಮೆಟ್ಟಿಲು ಏರುತ್ತಿರಲು ಒಬ್ಬಬ್ಬರಾಗಿ ಸಮೀಪಿಸುತ್ತಾರೆ”
- “ನಿಮ್ಮ ಮೇಲೆ ನಂಬಿಕೆ ಇಡಿ. ಸೋಲನ್ನು ಮಟ್ಟ ಹಾಕಿ ಗೆಲುವನ್ನು ಪಡೆಯುವುದು ಖಂಡಿತ.”
- “ನಿರಾಶೆ ಒಂದು ಅಪರಾಧ. ಅದಕ್ಕಿಂತ ಭಯಾನಕವಾದುದು ಕಾರಣವಿಲ್ಲದೆ ಬದುಕುವುದು .”
- “ನಿಮ್ಮ ಕನಸನ್ನು ನನಸು ಮಾಡಲು ಕಷ್ಟಪಡದೆ ಹೋದರೆ, ನಿಮ್ಮ ಆಸೆಗಳು ಮತ್ತು ಯೋಜನೆಗಳು ಮರಳಿಗೆ ಸಮವಾಗುತ್ತವೆ.”
- “ನಿಷ್ಠೆ, ನಿರ್ಭಯ, ಮತ್ತು ಕರ್ತವ್ಯನಿಷ್ಠೆ ಈ ಗುಣಗಳು ನಿಮ್ಮನ್ನು ಜಯಶಾಲಿಯನ್ನಾಗಿ ಮಾಡುತ್ತವೆ.”
- “ನಿಮ್ಮ ಆಲೋಚನೆಗಳನ್ನು ಪೂರ್ಣಗೊಳಿಸದೆ ಕೆಲವರ ಮುಂದೆ ಹೇಳುವುದರಿಂದ ಅದು ಅಪೂರ್ಣವಾಗಿಯೇ ಊಳಿದುಬಿಡುತ್ತದೆ.”
- ಒಳ್ಳೆಯ ಆಲೋಚನೆ, ಒಳ್ಳೆಯ ಕೆಲಸ ನಿನ್ನನ್ನು ಅತಿ ಶಕ್ತಿಶಾಲಿಯನ್ನಾಗಿ ಮಾಡುತ್ತದೆ.”
- “ನಿರಂತರ ಅಭ್ಯಾಸದಿಂದ ಯಶಸ್ಸು ಅತ್ಯಗತ್ಯವಾಗಿ ಬರುತ್ತದೆ.”
- “ನಿಮ್ಮ ಸೋಲಿನಿಂದ ನಿರಾಶೆಗೊಳ್ಳಬೇಡಿ, ಏಕೆಂದರೆ ಅದು ನಿಮ್ಮ ಯಶಸ್ಸಿನ ಮೈಲುಗಲ್ಲು ಆಗಿರಬಹುದು.”
- “ನಮ್ಮ ಸೋಲುಗಳಿಂದ ಕಲಿಯಬೇಕಾದ ಅನೇಕ ಪಾಠಗಳಿವೆ.”
- “ಯಶಸ್ಸಿಗೆ ಯಾವುದೇ ಅಡ್ಡ ದಾರಿಗಳಿಲ್ಲ. ನಿರಂತರವಾದ ಪರಿಶ್ರಮವೇ ಯಶಸ್ಸಿಗೆ ಇರುವ ಸುಲಭ ದಾರಿ.”
- “ನಿಮ್ಮ ಬಗ್ಗೆ ನೀವು ಹೇಳುವುದಕ್ಕಿಂತ, ನಿಮ್ಮ ಬಗ್ಗೆ ನೀವೇ ಹೆಚ್ಚು ನಂಬಿಕೆ ಇಡಬೇಕು.”
- “ಯಾವಾಗಲೂ ಮುಂದೆ ಸಾಗುತ್ತ ಇರಿ. ನಿಮ್ಮ ಬೆಳವಣಿಗೆಯನ್ನು ಎಂದಿಗೂ ನಿಲ್ಲಿಸಬೇಡಿ. ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ.”
- ನಿಮ್ಮ ಕನಸುಗಳನ್ನು ನನಸು ಮಾಡುವವರು ನೀವೇ, ಆದ್ದರಿಂದ ಬದುಕುವ ದಾರಿಯನ್ನು ಜಾಣತನದಿಂದ ಆರಿಸಿಕೊಳ್ಳಿ.
- “ನಿರಂತರ ಹೋರಾಟ ಮತ್ತು ನಿರಂತರ ಪ್ರಯತ್ನದಿಂದಲೇ ಜಯವನ್ನು ಸಾಧಿಸಬಹುದು.”