Site icon Kannada Chetana

ಶ್ರೀರಾಮ – ಕೈಯಲ್ಲಿ ಬಿಲ್ಲು ಬಾಣ ಆದರೂ ಸುರಕ್ಷಿತ ಭಾವ

shri ram

shri ram

ಕೈಯಲ್ಲಿ ಬಿಲ್ಲು ಬಾಣ ಹಿಡಿದ ಶ್ರೀರಾಮ ಚಂದ್ರನ ವ್ಯಕ್ತಿತ್ವ ಅದು ಇಡೀ ಮನುಕುಲಕ್ಕೆ ಮಾದರಿ….

ಇದೇ ರೀತಿ ಬಿಲ್ಲು ಬಾಣಗಳನ್ನು  ಹಿಡಿದ ಲಕ್ಷ್ಮಣನ ವ್ಯಕ್ತಿತ್ವದ ಭಾವಚಿತ್ರ ನೋಡಿದರೆ ಕಲ್ಪನೆಯಲ್ಲಿ ಒಂಚೂರು ಹೆದರಿಕೆಯಾಗುವದು ಸಹಜ….

ಇದೇ ರೀತಿಯಲ್ಲಿ ಕೈಯಲ್ಲಿ ಬಿಲ್ಲು ಬಾಣ ಹಿಡಿದುಕೊಂಡು ಅರ್ಜುನ ವ್ಯಕ್ತಿತ್ವದ ಭಾವಚಿತ್ರ ನೋಡಿದರೆ ಒಂದಿಷ್ಟು ಹೆದರಿಕೆ ಶುರುವಾಗುವದು ಸಹಜ…..

ಹಾಗೆ ಒಂದು ಕೈಯಲ್ಲಿ ಬಿಲ್ಲು ಬಾಣ ಹಿಡಿದ ಕರ್ಣನ ಚಿತ್ರ ನೋಡಿದರೆ ಮತ್ತಷ್ಟು ಸಹಜ ಭಯ ಶುರುವಾಗುವದು…

ಇನ್ನೂ ಭಾರ್ಗವ ಪರುಶುರಾಮನ ಕೈಯಲ್ಲಿ ಬಿಲ್ಲು ಬಾಣ ನೋಡಿದರೆ ಎದೆಯಲ್ಲಿ ಅದರ ಭೀಕರತೆಯ ಭಯದ ಡವ ಡವ ಶುರುವಾಗುವದು ಸಹಜವಾದ ಕಲ್ಪನೆ…

ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮಚಂದ್ರ ಹದಿನಾಲ್ಕು ವರುಷಗಳ ಕಾಲ ವನವಾಸಕ್ಕೆ ಹೋಗುವಾಗ ಶ್ರೀರಾಮಚಂದ್ರನ ತಂದೆ ದಶರಥ ಹೇಳುತ್ತಾನೆ ಶ್ರೀರಾಮ ನಿನ್ನ ಅಮ್ಮ ಹಠ ಮಾಡಿ ನಿನಗೆ ಕಾಡಿಗೆ ಕಳುಹಿಸಲು ಸಜ್ಜಾಗಿದ್ದಾಳೆ…!ಅದರಲ್ಲೂ ನೀನು ನನಗೆ ಕಾಡಿಗೆ ಹೋಗುವ ವಚನ ಕೊಟ್ಟಿರುವೆ..!

ಈಗಲೂ ಕಾಲ ಮಿಂಚಿಲ್ಲ ನನ್ನನ್ನು ಬಂಧಿಸಿ ಬಂಧನದಲ್ಲಿಡು ಇದರಿಂದ ನೀನು ಪಾರಾಗುತ್ತೀಯಾ…! ನಿನ್ನ ಪಟ್ಟಾಭಿಷೇಕ ಕೂಡಾ ನೇರವೇರುತ್ತದೆ..!ಎನ್ನುತ್ತಾನೆ.

ಹಾಗೆ ನಾನು ಕೂಡಾ ನನ್ನ ಹೆಂಡತಿಗೆ ಕೊಟ್ಟ ವಚನ ಪಾಲಿಸಿದಂತಾಗುತ್ತದೆ…! ಎಂದನು.

ನಂತರ ಶ್ರೀರಾಮನ ಸಹೋದರ ಲಕ್ಷ್ಮಣ ಕೂಡಾ ತನ್ನ ಅಣ್ಣನಿಗೆ ಒಂದು ಸಲಹೆ ನೀಡುತ್ತಾನೆ…

ಅಣ್ಣಾ ನೀನು ತಂದೆಯ ಆಪೇಕ್ಷೆಯಂತೆ ಅವರನ್ನು ಬಂಧನದಲ್ಲಿಡು..! ಪಟ್ಟಾಭಿಷೇಕಕ್ಕೆ ಸೂಚಿಸಿರುವ ಭರತನನ್ನು , ಅಯೋಧ್ಯೆಯನ್ನು ನಿನ್ನ ಬಿಲ್ಲು ಬಾಣಗಳ ಶಕ್ತಿಯಿಂದ ಹಿಡಿತಕ್ಕೆ ಪಡೆದುಕೋ…! ಎಂದನು.

ಆಗ ಶ್ರೀರಾಮಚಂದ್ರ ಸಹೋದರ ಲಕ್ಷ್ಮಣನ ಕುರಿತು ತಮ್ಮಾ..! ಇಂತಹ ವ್ಯಕ್ತಿತ್ವದ ಮರ್ಯಾದೆಯ ಪರಿಸ್ಥಿತಿಯಲ್ಲಿ ನಾನು ಸಹೋದರ ಭರತನನ್ನು ಬಾಹುಬಲದಿಂದ ಬಾಗಿಸಲು ಹೋದರೆ ಅದು ಖಂಡಿತ ಅದು ತಪ್ಪು ಅದು ಒಬ್ಬ ರಾಜನಾಗುವನು ಪಾಲಿಸುವ ರಾಜಧರ್ಮವಲ್ಲ…! ಮೇಲಾಗಿ ಒಂದು ಕಡೆ ನನ್ನ ಮೇಲೆ ಅಪಾರ ಪ್ರೀತಿ-ಪ್ರೇಮ ಮಮತೆಯಿರುವ ಭರತ ತಂದೆಯವರು ವಿಶ್ರಾಂತಿಯಲ್ಲಿದ್ದಾಗ ಅವರಲ್ಲಿಗೆ ಭಯ ಭಕ್ತಿಯಿಂದ ಎಲ್ಲಿ ನನ್ನಿಂದ ಅವರ ವಿಶ್ರಾಂತಿಗೆ ಭಂಗ ಬರುತ್ತದೋ ಎಂದು ದೂರದಲ್ಲಿ ನಿಂತು ತಂದೆಯವರಿಗೆ ನತಮಸ್ತಕನಾಗಿ ಹೊರಟು ಹೋಗುತ್ತಾನೆ…! ಅಂಥಹ ಎಳಸು, ಮುಗ್ದ ಹೃದಯದ ತಮ್ಮನ ಮೇಲೆ ಈ ಬಿಲ್ಲು ಬಾಣದ ಪ್ರಯೋಗವೇ..? ಇದು

ತುಂಬಾ ದುಃಖವೆನಿಸುತ್ತದೆ..! ಎನ್ನುತ್ತಾನೆ.

ಇನ್ನೂ ಯಾವ ತಾಯಿ ನನ್ನನ್ನು ಹಗಲಿರುಳು  ಶೂಶ್ರಷೆ ಮಾಡಿದಳೋ..!  ಯಾವ

ವಾತ್ಸಲ್ಯ ಮೂರ್ತಿಯಾದ ತಾಯಿಯ ತೊಡೆಯ ಮೇಲೆ ನಾನು ಮಲಗಿ ವಿಶ್ರಾಂತಿ ಪಡೆದೆನೋ..!

ಬಾಲ್ಯದಲ್ಲಿ ಯಾವಾ ತಾಯಿಯ ಸೆರಗಿನಲ್ಲಿ ನಾನು ಬಚ್ಚಿಟ್ಟುಕೊಂಡು ಸುರಕ್ಷಿತ ಭಾವದಲ್ಲಿದ್ದನೋ..!ಅಂಥಹ ತಾಯಿಗೆ ಬಿಲ್ಲು ಬಾಣದ ಹೆದರಿಕೆಯೇ..? ಇದನ್ನು ನಾನು ಮಾಡಬೇಕೆ ಇದು ನನಗೆ ಖಂಡಿತಾ ಒಪ್ಪದು ಭವಿಷ್ಯದಲ್ಲಿ ನಾನು ತಂದೆಗೆ ತಕ್ಕ ಮಗ ಎಂದು ಎಂದಂದಿಗೂ ಎನಿಸಿಕೊಳ್ಳಲಾರೆ…!

ಯಾವ ಮಗ ತಂದೆಗೆ ಜೀವನದಲ್ಲಿ ಹೆಸರು, ಮರ್ಯಾದೆ ತರುತ್ತಾನೋ ಅವನೆ ನಿಜವಾದ ಮಗ…! ಎನ್ನುತ್ತಾನೆ.

ಇನ್ನೂ ನನ್ನ ಪರಮ ಪಿತ ಅಯೋಧ್ಯೆಯ ಮಹಾರಾಜ ನನ್ನನ್ನು ಬಂಧಿಸಿ ಬಂಧನದಲ್ಲಿಡು..! ಎಂದರು  ಅವರು ಒಮ್ಮೆ ತಲೆಯ ಕೂದಲು ಸರಿ ಮಾಡಿಕೊಳ್ಳಲು ದರ್ಪಣದಲ್ಲಿ ತಮ್ಮ ಮುಖ ನೋಡಿದಾಗ ಅವರ ತಲೆಯ ಒಂದೇ ಒಂದು ಕೂದಲು ಬೆಳ್ಳಗಾಗಿತ್ತು…..

ಅದಕ್ಕೆ ಅವರು ತಕ್ಷಣ ಯಾವ ಆಶೆ ಆಕಾಂಕ್ಷೆಗಳ ವ್ಯಸನಕ್ಕೆ ಗುರಿಯಾಗದೆ ನನ್ನ ಗುರುಗಳಾದ ವಶಿಷ್ಠರ ಬಳಿ ಹೋಗಿ ಗುರುಗಳೆ ನನ್ನ ತಲೆಗೂದಲು ಬೆಳ್ಳಗಾಗುತ್ತಿವೆ ಇನ್ನೂ ನಾನು ರಾಜ್ಯಭಾರ ಮಾಡಲಾರೆ…! ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಲು ತಯಾರಾಗಿರಿ…! ಎಂದರೋ ಅಂತಹ ಪುಣ್ಯಜೀವಿ ನನ್ನ ತಂದೆಯವರಲ್ಲಿ ಹೋಗಿ ಈ ಬಿಲ್ಲು ಬಾಣಗಳನ್ನು ತೆಗೆದುಕೊಂಡು ಅವರನ್ನು ಬಂಧಿಸುವದು ಅತ್ಯಂತ ಪಾಪದ ಕೆಲಸ.. ಅದು ಅವರ ವಂಶದ ಕುಡಿಯಾಗಿ…ಆಗ ಲಕ್ಷ್ಮಣನಿಗೆ ತನ್ನ ಸಹೋದರ ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಮಾನವ ರೂಪದ ದೇವರು ಎನ್ನುವದು ತಿಳಿದಾಯಿತು…..

ಶ್ರೀರಾಮ ಚಂದ್ರ ವಚನ ಪಾಲಿಸಲು ತನ್ನ ಬಾಳ್ವೆ ಬಹುಭಾಗವನ್ನು ಕಾಡಿನಲ್ಲಿ ಗಡ್ಡೆಗೆಣಸು ತಿನ್ನುತ್ತ ಅತ್ಯಂತ ಭೀಕರವಾದ ಸನ್ನಿವೇಶಗಳಲ್ಲಿ ಧರ್ಮಕರ್ಮಗಳ ಮರ್ಮವನ್ನು ಮರೆಯಲಿಲ್ಲ

ಅಸ್ತ್ರ ಶಸ್ತ್ರಗಳ ಕೈಹಿಡಿದ  ಶ್ರೀರಾಮಚಂದ್ರನ ವ್ಯಕ್ತಿತ್ವ ಜಗತ್ತಿನಲ್ಲಿ ಇಂದು ಬಹು ಪರಾಕ ಬಹು ಪರಾಕವಾಗಿದೆ.. ಹಾಗಾಗಿ ಬಿಲ್ಲು ಬಾಣಗಳು ಶ್ರೀರಾಮಚಂದ್ರನಿಗೆ ಒಪ್ಪಿದಷ್ಟು ಚಂದಾಗಿ ಯಾವ ದೇವತೆಗೂ ಒಪ್ಪಿಲ್ಲು… ಏಕೆಂದರೆ ಆತನ ಕೈಗಳು ಅಷ್ಟೊಂದು ಸುರಕ್ಷಿತವಾಗಿ. ಇನ್ನೂ ಆಯಧಗಳನ್ನು ಹಿಡಿದ ಹಿಂದೂ ದೇವತೆಗಳು  ಭಾವಚಿತ್ರಗಳನ್ನು ನೋಡಿ ಅವು ಒಂದಿಷ್ಟು ಉಗ್ರವಾಗಿ ಸಮಯಕ್ಕೆ ತಕ್ಕಂತ ವ್ಯಗ್ರಗೊಂಡ ಭಾವಚಿತ್ರಗಳಾಗಿವೆ….

ಇದಕ್ಕೆ ಹೇಳುವದು ಪ್ರಭು  ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರ …!

✍🏻 ದಶರಥ ಕೋರಿ ಶಿಕ್ಷಕರು ಇಂಡಿ

Exit mobile version