ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ | Tunga teeradi ninta suyativara nyare pelamma |Shri Raghavendra Swamy Song Lyrics

ಶ್ರೀ ರಾಘವೇಂದ್ರ ಸ್ವಾಮಿಗಳು | Raghavendra-Swamy

ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ | Tunga teeradi ninta suyativara nyare pelamma

ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ                              ||ಪ||

ಸಂಗೀತಪ್ರಿಯ ಮಂಗಳ ಸುಗಣತರಂಗ ಮುನಿಕುಲೋತ್ತುಂಗ ಕಣಮ್ಮ         ||ಅ.ಪ||

ಚೆಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು ನೋಡಮ್ಮ

ಜಲಜಮಣಿಯ ಕೊರಳಲ್ಲಿ ತುಳಸಿಮಾಲೆಗಳು ಪೇಳಮ್ಮ

ಸುಲಲಿತ ಕಮಂಡಲು ದಂಡವನೆ ಧರಿಸಿಹನೆ ನೋಡಮ್ಮ

ಕ್ಷುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ                        ||೧||

ಸುಂದರ ಚರಣಾರವಿಂದಕೆ ಭಕುತಿಯಲಿಂದ ನೋಡಮ್ಮ

ವಂದಿಸಿ ಸ್ತುತಿಸುವ ಭೂಸುರವೃಂದ ನೋಡಮ್ಮ

ಚಂದದಲ೦ಕೃತಿಯಿಂದ ಶೋಭಿಸುವಾನಂದ ನೋಡಮ್ಮ

ಹಿಂದೆ ವ್ಯಾಸಮುನಿಯೆಂದೆನಿಸಿದ ಕರ್ಮಂದಿಗಳರಸಘದಿಂದ ರಹಿತನೆ          ||೨||

ಅಭಿನವ ಜನಾರ್ಧನ ವಿಠಲನ ಧ್ಯಾನಿಸುವ ನೋಡಮ್ಮ

ಅಭಿವಂದಿಸಿದವರಿಗೆ ಅಖಿಲಾರ್ಥವ ಸಲ್ಲಿಸುವ ನೋಡಮ್ಮ

ನಭಮಣಿಯಂದದಿ ವಿವಿಧದಿ ಶೋಭಿಸುವ ನೋಡಮ್ಮ

ಶುಭಗುಣಗಣನಿಧಿ ರಾಘವೇಂದ್ರ ಗುರು ಅಬುಜಭವಾಂಡದಿ ಪ್ರಬಲ ಕಾಣಮ್ಮ ||೩||


tuMgA teeradi niMta suyativaranyAre pELammaYya
saMgeetapriya maMgalasuguNataraMga munikulOttuMga kANamma ||

cheluva sumukha phaNeyalli tilaka nAmagaLu nODamma
jalamaNiya koraLalli tulasimAlegaLu pELamma
sulalita kamaMDalu daMDavane dharisihane nODamma
kShulla hiraNyakanalli janisida prahlAdanu tAnillihanamma ||1||

suMdara charaNAraviMdake bhakutiyaliMda nODamma
vaMdisi stutisuva bhUsuravRuMda nODamma
chaMdadalaMkRutiyiMda shObhisuvAnaMda nODamma
hiMde vyAsamuniyeMdenisida karmaMdigaLa rasaghadiMda rahitane ||2||

abhinava janArdhana viThalana dhyAnisuva nODamma
abhivaMdisidavarige akhilArthava sallisuva nODamma
nabhamaNiyaMdadi vividhadi shObhisuva nODamma
shubhaguNanidhi rAghavEMdra guru abujabhavAMDadi prabala kANamma ||3||

ತೂಗಿರೆ ರಾಯರ ತೂಗಿರೆ ಗುರುಗಳ | Tugire rayara tugire gurugala

ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯಕಿಕುಲ ತಿಲಕರ ||ಪ||

ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರ ರ ||ಅಪ||

ಕು೦ದನ ಮಯವಾದ ಚಂದದ ತೊಟ್ಟಿಲೊಳ್
ಆನಂದದಿ ಮಲಗ್ಯಾ ರ ತೂಗಿರೆ
ನಂದನ ಕಂದ ಗೋವಿಂದ ಮುಕುಂದನ
ಚಂದದಿ ಭಜಿಪರ ತೋಗಿರೆ ||೧||

ಯೋಗ ನಿದ್ರೆಯಾನ ಬೇಗನೆ ಮಡುವ
ಯೋಗಿಶ್ಯ ವಂದ್ಯರ ತೂಗಿರೆ
ಭೋಗಿಶಯನನ ಪಾದ
ಮೋದದಿ ಭಜಿಪರ ಭಾಗವತರನ್ನ ತೂಗಿರೆ ||೨||

ಅದ್ವೈತ ಮತದ ವಿದ್ವಂಸದ ನಿಜ ಗುರು
ಮಧ್ವಮತೋದ್ಧಾರನ ತೂಗಿರೆ
ಶುದ್ದ ಸಂಕಲ್ಪ ದಿ ಬಂದ ನಿಜ ಭಕ್ತರ
ಉಧ್ಧಾರಮಾಲ್ಪರ ತೂಗಿರೆ ||೩ ||

ಭಜಕ ಜನರು ತಮ್ಮ ಭಜಜೆಯ ಮಾಡಲು
ನಿಜ ಗತಿ ಇಬ್ಬರ ತೂಗಿರೆ
ನಿಜ ಗುರು ಜಗನಾಥ ವಿಠಲನ ಪಾದವ
ಭಜನೆಯ ಮಲ್ಪರಣ ತೂಗಿರೆ ||೪||


tUgire rAyara tUgire gurugaLa
tUgire yathikula thilakara
tUgire yogeendra karakamala poojayara
tUgire guru Raghavendrara ||

kundana mayavada chaMdada tOTiladolu
naMdadi malagyara tUgire
naMdanakaMda govinda mukundana
nandadi Bhajipara tUgire ||1||

yauganidreyanu bEgane mADuva
Yoghisha Vandyara tUgire
Bhogishayanana pada yogadi Bhajipara
Bhagavatharana tUgire ||2||

nEmadi tananu kamipajanarige
kamita koDuvavara tUgire
premadi nijajanara aamayavanukoola
dhoomaketuvenipara tUgire ||3||

Advaitha mathada vidvashana nijaguru
madhwamathodharana tUgire
siddha sankalpadi baddha nijabhaktara
uddharamalpara tUgire ||4||

Bhajaka janaru bhava trujana maDisi avara
nijjagathiippara tUgire
nijaguru jaganathaVittalana padakanja
Bhajaneya malpara tUgire ||5||

Leave a Reply

Your email address will not be published. Required fields are marked *