Skip to content
- ಓದು ಒಕ್ಕಾಲು ಬುದ್ಧಿ ಮುಕ್ಕಾಲು.
- ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು.
- ಜಾಣನಿಗೆ ಮಾತಿನ ಪೆಟ್ಟು ಕತ್ತೆಗೆ ಲತ್ತೆಯ ಪೆಟ್ಟು.
- ಚಿಂತೆಯಿಲ್ಲದವನಿಗೆ ಸಂತೆಯಲ್ಲಿ ನಿದ್ದೆ ಬಂತು.
- ನೀರಿದ್ದರೆ ಊರು ನಾರಿಯಿದ್ದರೆ ಮನೆ.
- ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು.
- ಬಳ್ಳಿಗೆ ಕಾಯಿ ಭಾರವೆ?.
- ಖೀರು ಕುಡಿದವ ಓಡಿ ಹೋದ ನೀರು ಕುಡಿದವ ಸಿಕ್ಕಿಬಿದ್ದ.
- ಹಣ್ಣು ಕೆಟ್ರೆ ಪುಟ್ಟಿ ಹಾಳು ಹೆಣ್ಣು ಕೆಟ್ರ ಹಟ್ಟಿ ಹಾಳು.
- ಅಪ್ಪ ತೋಡಿದ ಬಾವಿ ಅಂತ, ಉಪ್ಪು ನೀರು ಕುಡಿಬ್ಯಾಡ.
- ಎಲ್ರೂ ರಾಜರಾದ್ರೆ ಪಲ್ಲಕ್ಕಿ ಹೋರೋರ್ಯಾರು.
- ಉರಿಯೋ ಬೆಂಕಿಗೆ ತುಪ್ಪ ಹಾಕಿದಂಗ.
- ಊರು ಉಪಕಾರವರಿಯದು ಹೆಣ ಸಿಂಗಾರ ಅರಿಯದು.
- ಆಪತ್ಕಾಲದಾಗ ಆದವನೆ ನೆಂಟ.
- ಅಪ್ಪ ತೋಡಿದ ಬಾವಿ ಅಂತ ಉಪ್ಪು ನೀರು ಕುಡಿಯ ಬೇಡ
- ಮಾತು ಮನೆ ಕೆಡಿಸ್ತು ತೂತು ಒಲೆ ಕೆಡಸ್ತು.
- ಬಡತನ ಬಂದಾಗ ನೆಂಟರ ಬಾಗಿಲು ಸೇರಬಾರದು.
- ಇಲಿಯಾಗಿ ನೂರು ವರ್ಷ ಬಾಳುವದಕ್ಕಿಂತ ಹುಲಿಯಾಗಿ ಮೂರು ವರ್ಷ ಬಾಳುವುದು ಮೇಲು.
- ಹೊತ್ತು ಬಂದಂತೆ ಕೊಡೆ ಹಿಡಿ.
- ಪಾಲಿಗೆ ಬಂದದ್ದು ಪಂಚಾಮೃತ.
- ಎಲ್ಲಾರ ಮನೆ ದೊಸೇನು ತೂತೇ.
- ಮಳಿ ಬಂದ್ರ ಕೇಡಲ್ಲ ಮಗ ಉಂಡ್ರ ಕೆಡಲ್ಲ.
- ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
- ಸುಂಕದವನ ಮುಂದೆ ಸುಖ ದುಃಖ ಹೇಳಿಕೊಂಡಂತೆ.
- ನೂಲಿನಂತೆ ಸೀರೆ ತಾಯಿಯಂತೆ ಮಗಳು.
- ಓದು ಒಕ್ಕಾಲು ಬುದ್ಧಿ ಮುಕ್ಕಾಲು.
- ಕುಣಿಯಲು ಬಾರದವಳು ನೆಲ ದೊಂಕೆಂದಳು.
- ಮಾಡಿದ್ದುಣ್ಣೋ ಮಾರಾ.