ಹುಣ್ಣಿಮೆ ತಿಥಿ ಪ್ರಾರಂಭ - ಮಾರ್ಚ್ 24, 2024 ರಂದು 09:54 AM
ಹುಣ್ಣಿಮೆ ತಿಥಿ ಕೊನೆಗೊಳ್ಳುವುದು - ಮಾರ್ಚ್ 25, 2024 ರಂದು ಮಧ್ಯಾಹ್ನ 12:29
ರಾಧೆ ಮತ್ತು ಕೃಷ್ಣ ರ ಪ್ರೀತಿಗಾಗಿ
ನರಸಿಂಹರೂಪಿಯಾದ ವಿಷ್ಣು ಮತ್ತು ಪ್ರಹ್ಲಾದನ ಭಕ್ತಿಗಾಗಿ
ಕಾಮ ದೇವರು ಮರುಳಿದ ದಿನವಾಗಿ
1
2
3
ಗರ್ಗ ಸಂಹಿತೆಯ ಪ್ರಕಾರ, ಕಪ್ಪಗಿರುವ ಕೃಷನು, ರಾಧೆಯು ತನಗೆ ಇಷ್ಟ ಪಡುತ್ತಾಳೋ ಇಲ್ಲವೋ ಎಂದು ಚಿಂತಿಸುತ್ತಿರಲು, ರಾಧೆಯು ತನಗಿಷ್ಟವಾದ ಬಣ್ಣವನ್ನು ಕೃಷ್ಣನಿಗೆ ಹಚ್ಚಿ ತನ್ನ ಇಷ್ಟವನ್ನು ವ್ಯೆಕ್ತಪಡಿಸುತ್ತಾಳೆ.
ಹಿರಣ್ಯಕಶ್ಯಪನ ಮಾತಿನಂತೆ, ಬಾಲಕ ಪ್ರಹ್ಲಾದನನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡು ಕೆರಳಿದ ಬೆಂಕಿಯಲ್ಲಿ ಕುಳಿತ ಹೋಲಿಕಾ ಬೆಂಕಿಯಲ್ಲಿ ಸುಟ್ಟು ಭಸ್ಮವಾದರೂ, ವಿಷ್ಣುವಿನ ಆಶೀರ್ವಾದದಿಂದ ಪ್ರಹ್ಲಾದನಿಗೆ ಚೂರೂ ಗಾಯವಾಗಲಿಲ್ಲ.
ಪಾರ್ವತಿಯ ಸಹಾಯಕ್ಕೆ ಕಾಮದೇವರು ಧ್ಯಾನಸ್ಥನಾಗಿದ್ದ ಶಿವನ ಮೇಲೆ ಬಾಣ ಬಿಡಲು ಕೋಪಗೊಂಡ ಶಿವನು ಕಾಮದೇವರನ್ನು ತನ್ನ ಮೂರನೆಯ ಕಣ್ನತೆಗೆದೂ ಸುಟ್ಟು ಹಾಕುತ್ತಾನೆ. ನಂತರ ರತಿ ದೇವಿಯ ೪೦ ದಿನದ ತಪಸ್ಸಿಗೆ ಮೆಚ್ಚಿದ ಶಿವನು ಕಾಮದೇವರನ್ನು ಮರು ಸೃಷ್ಟಿಮಾಡುತ್ತಾನೆ.