ಪ್ರೀತಿ ಎಂಬ ಸಾಗರದಲ್ಲಿ ಪುಟ್ಟ ಮೀನುಗಳು ನಾವಿಬ್ಬರು,
ನನಗೆ ನೀನು, ನಿನಗೆ ನಾನು, ಸಾಕಲ್ವಾ….
ಪ್ರತಿ ಹೆಜ್ಜೆಯಲು ನಿನ್ನಯ ನೆರಳಾಗಿ ಜೊತೆಯಾಗಿರುವೆ,
ಹೀಗೆಲ್ಲಾ…. ಅದೆಷ್ಟೊ ಹುಚ್ಚು ಕನಸುಗಳನ್ನು ಕಂಡು
ಇನ್ನೂ ನಿನ್ನಯ ನೆನಪಲ್ಲೆ…..
ಜೀವಿಸುತ್ತಿರುವ ಹುಚ್ಚು ಪ್ರೇಮಿ ನಾನು.
– ಹೆಚ್ ಸಂಗಯ್ಯ
ಜೀವನದುದ್ದಕ್ಕೂ ಸಾಗುತಿದೆ ಪಯಣ
ನಗುವೆಂಬ ಮುಖವಾಡ ಧರಿಸಿ ಈ ಧರೆಯಲಿ,
ಅತ್ತರು ಕರಗದ ಮನಸ್ಸಿಲ್ಲ ಇಲ್ಲಿ ಯಾರಲಿ,
ಅದಕ್ಕೆಂದೇ… ನಗುತಾ ಸಾಗುತಿರುವೆ…..
ಈ ನಾಟಕೀಯ ಜೀವನದಲಿ…
– ಹೆಚ್ ಸಂಗಯ್ಯ
ಶ್ರೀ ಕೃಷ್ಣ ರಾಧೆಯನ್ನು ಎಷ್ಟು ಪ್ರೀತಿಸಿದನೋ …
ನಾನು ಅವರಷ್ಟು ಪ್ರೀತಿನ ಮಾಡದೆ ಇರಬಹುದು.
ಆದರೆ ಒಂದು ತಿಳ್ಕೊ ಬಂಗಾರ..
ನೀ ನನ್ನನ್ನು ಆಗಲಿದ ಘಳಿಗೆಇಂದ ಇವರೆಗೂ..
ರಾಧೇ ಕೃಷನನ್ನು ದೂರವಾದಾಗ..
ಕೃಷ್ಣ ಎಷ್ಟು ಸಂಕಟ ಪಟ್ಟನೋ..
ಅಷ್ಟೇ ಸರಿ ಸಮ ನಾನು ಸಂಕಟ ಪಡುತ್ತಾ ಇದ್ದೀನಿ..
ಏಕೆಂದರೆ ಕೃಷ್ಣ ರಾಧೇಯ ಮೇಲೆ ಇಟ್ಟಿರೋ ಪ್ರೀತಿ
ಎಷ್ಟು ಪವಿತ್ರವೋ ನನ್ನ ಪ್ರೀತಿ ಕೂಡ ಅಷ್ಟೇ ಪವಿತ್ರ…
– ಹೆಚ್ ಸಂಗಯ್ಯ
ನಗುವ ಪರಿಸ್ಥಿತಿ ದೂರವಾಗಿ
ನಗುವ ನಾಟಕ ಜೀವನ ನನ್ನದಾಗಿದೆ ಇಂದು.
ಕಾರಣಗಳು ಅನೇಕ..
ಆದರೆ ಹೇಳಿಕೊಳ್ಳಕೆ ಮನಸ್ಸಿಲ್ಲ.
ಹಾಗೆಯೇ ಕೇಳುವ ತಾಳ್ಮೆ ಇಲ್ಲಿ ಯಾರಿಗೂ ಇಲ್ಲ.
ಯಾಕಂದರೆ ಇಲ್ಲಿ ಯಾರಿಗೂ ಯಾರು ಆಗಲ್ಲ.
– ಹೆಚ್ ಸಂಗಯ್ಯ