ಆತ ಅಹಂಕಾರದ ಅಂಗಿ ತೊಟ್ಟಿದ್ದ ಆತನ ಅರಿವು ಆರಿ ಹೋಗಿತ್ತು ..!
ಆತ ಬದುಕಿನಲ್ಲಿ ವೇದ-ವೇದಾಂತ ಬಲ್ಲವನಾಗಿ ಆತ್ಮಜ್ಞಾನದಿಂದ ಅಹಂ ಬ್ರಹ್ಮಾಸ್ಮಿ ಅರಿತುಕೊಂಡಿದ್ದ. ತತ್ಮಮಸಿಯ ತತ್ವ ತಿಳಿದುಕೊಂಡು ಪ್ರಖರ ಪಾಂಡಿತ್ಯ ಬಲ್ಲವನಾಗಿದ್ದ ಆತನ ವಾಗ್ಝರಿಯ ವಾಣಿಗಳು ಸುರಿಮಳೆಯಾಗಿ ಸುರಿದರೇ ವಿದ್ವತ್ವ ಹೊಳೆಯಾಗಿ ಹರಿಯುತ್ತಿತ್ತು. ಶ್ವೇತಕೇತುವಿನ ತಂದೆ ಅತ್ಯಂತ ಶ್ರೇಷ್ಠ ವಿದ್ವಾಂಸನಾಗಿದ್ದರೂ ಕೂಡಾ ಮಗನನ್ನು ಒಬ್ಬ ಯೋಗ್ಯವಾದ ಗುರುಗಳ ಹತ್ತಿರ ಗುರುಕುಲಕ್ಕೆ ವಿದ್ಯಾ ಬುದ್ದಿಯನ್ನು ಕಲಿಯಲು ಕಳುಹಿಸಿದ್ದರು. ಹಲವು ವರ್ಷಗಳ ಕಾಲಚಕ್ರದ ನಂತರ ಶ್ವೇತ ಕೇತು ಸಕಲ ವಿದ್ಯೆಯನ್ನು ಕಲಿತು ಗುರುಗಳಿಂದ ಆಶೀರ್ವಾದ ಪಡೆದು ಮಹಾನ ಮೇಧಾವಿಯಾಗಿ ಮನೆ ಕಡೆ ಸಾಗಿದ….