ಗೀತಾಂಜಲಿಯ ಜನಕ ರವೀಂದ್ರನಾಥ ಟ್ಯಾಗೋರ್ !
ಆತ ಜಗತ್ತು ಕಂಡು ಮಹಾ ತಪಸ್ವಿ ಕವಿಯಾಗಿದ್ದ….ಆತನ ಮಸ್ತಕದಿಂದ ಹೊರಟ ಗೀತೆಯ ಮಾಲೆಗಳು ಸುಗಂಧ ಭರಿತವಾಗಿದ್ದವು….ಅವುಗಳಲ್ಲಿ ಹಿಮಾಲಯದ ತಂಪಿತ್ತು…ಕನ್ಯಾಕುಮಾರಿಯ ಅಲೆಗಳ ಸದ್ದು ಕೇಳಿಸುತ್ತಿತ್ತು….ಆತ ಗಂಧರ್ವರ ಮುಂದುವರೆದ ಕೊಂಡಿಯಾಗಿದ್ದ… ಮಾತೆಯ ಮೂಲಕ ಕಾಳಿದಾಸನಂತೆ ವರ ಪಡೆದ ದೈವಾನುಸಂಭೂತ ವ್ಯಕ್ತಿಯಾಗಿದ್ದ….ಆತ ಸಾಕ್ಷಾತ ದೇವ ಋಷಿಯಾಗಿದ್ದನು…ಅವರು ಬೇರಾರು ಅಲ್ಲ ಜಗತ್ತಿನ ಮಹಾನ ಗ್ರಂಥ ಬರೆದ ಮಹಾ ಮಹೀಮ ಗೀತಾಂಜಲಿಯ ಜನಕ ರವೀಂದ್ರನಾಥ ಟ್ಯಾಗೋರ್….! ಸುಮ್ಮನೆ ಆ ಮಹಾನ ಕವಿ ರವೀಂದ್ರನಾಥ್ ಟ್ಯಾಗೋರರ ಭಾವಚಿತ್ರದಲ್ಲಿರುವ ಮುಖವನ್ನು ಈಗಲೂ ನೀವು ಗಮನಿಸುತ್ತ ನೋಡುತ್ತಿದ್ದರೆ, ಅದು…