ನಿಸರ್ಗದ ಕವನ
ಬಂಗಾರದ ಚಿಟ್ಟೆಬಣ್ಣ ಬಣ್ಣದ ಹೂಗಳ ತೋಟ,ನೋಡುವ ಕಂಗಳಿಗೆ ನಿಜಕ್ಕೂ ರಸದೂಟ,ಇತ್ತ ಸಾಗುತಿದೆ ದುಂಬಿಗಳ ನೋಟ,ಹೂವಿನ ಜೊತೆ ಪಾತರಗಿತ್ತಿಯ ತುಂಟಾಟ. ಬಂಗಾರದ ಚಿಟ್ಟೆಯೊಂದು ಹಾರಿ ಬಂತು,ಸಿಂಗಾರದ ಹೂವಿನಲಿ ಬಂದು ಕುಂತು,ಜೇನ ಹೇರುತ್ತಿತ್ತು ಅಂದಿನ ಕಂತು,ಸಂತೋಷದಿ ನಾನು ನೋಡಿದೆ ನಿಂತು. ಉತ್ಪಾದನೆ ಮಾಡಿ ಹರುಷದಿ ತಾನು,ಹೂವು ನೀಡುವುದು ಚಿಟ್ಟೆಗೆ ಜೇನು,ಇದನ್ನು ಕಂಡು ಭೂಮಿ ಬಾನು,ಹರುಷದಿ ಹಿಗ್ಗಿ ಸಂತೋಷ ಪಡದೇನು. ತೋಟದಿ ಬಣ್ಣದ ಹೂಗಳು ಚೆಂದ,ಚಿಟ್ಟೆಯು ಪಡುತಿದೆ ಹೊವಲ್ಲಿ ಆನಂದ,ಹೂವಿಗೂ ದುಂಬಿಗು ಇರುವ ಬಂಧ,ಅದು ಪ್ರಕೃತಿಯು ಬೆಸೆದ ಸಂಬಂಧ.. – ಡಾ. ಬಿ. ವೆಂಕಟೇಶ್…