ಪ್ರೀತಿಯ ಕವನ
ಆಸರೆನೀ ನನಗಾದರೆ ನಾನು ನಿನಗೆ,ನಮ್ಮಿಬ್ಬರ ನಂಟು ಕೊನೆಯವರೆಗೆ,ಮಣ್ಣಿಂದ ಜೀವವು ಹಸಿರ ತೆನೆಗೆ,ನಾವಿಬ್ಬರು ಬೇಕು ಈ ಭುವಿಗೆ.ನನ್ನಿಂದ ನೀನು ನಿನ್ನಿಂದ ನಾನು,ನಾವು ಒಂದಾದರೆ ಭೂಮಿ ಭಾನು,ಏನೇ ಆದರೂ ನಾ ನಿನ್ನ ಕೈ ಬಿಡೆನು,ಎಷ್ಟೇ ಕಷ್ಟದ್ದಲ್ಲೂ ಜೊತೆಯಾಗಿರುವೆನು.ನಾವಿಬ್ಬರು ಸೇರಿ ದುಡಿಯೋಣ,ನಿಷ್ಠೆಯಿಂದ ಕಾಯಕವ ಮಾಡೋಣ,ನಾವಿದ್ದರೆ ನೀವು ಎನ್ನುವುದು ತಿಳಿಸೋಣ,ಮಾನವ ಕುಲಕೆ ಆಸರೆಯಾಗಿರೋಣ… – ಡಾ. ಬಿ. ವೆಂಕಟೇಶ್ ಹೊಸ ರಾಗಮುಂಜಾನೆ ಮಂಜಲಿ ಆ ಉದಯರಾಗ,ಬಾನಿನ ಅಂಚಲಿ ಮೂಡಿದ ಹೊಸರಾಗ,ನಗು ನಗುತ ನೀನು ಬಂದಾಗ,ನಾ ಹಾಡಿದೆ ನಿನಗಾಗಿ ಪ್ರೇಮರಾಗ.ನಿನ್ನ ಗಾಯನಕೆ ಕೋಗಿಲೆಯು ನಾಚಿದೆ,ನಿನ್ನ ಸೌಂದರ್ಯಕೆ ಮಂಜು ಕರಗಿದೆ,ನಿನ್ನ…