ಸ್ತ್ರೀ ಕವನಗಳು : ಮೀಸೆ ಹುಡುಗಿ
ನೀನು ಚೆಲುವೆಎಂದು ಅವನು ಹೇಳಿದಾಗನಾನು ನಂಬುವುದಿಲ್ಲ.ಬದಲಾಗಿ, ನನ್ನ ಸ್ಕೂಲ್ ದಿನಗಳನ್ನುಮತ್ತೊಮ್ಮೆ ಜೀವಿಸುತ್ತೇನೆ.ನಾನು ಎಷ್ಟು ಚೆನ್ನಾಗಿದ್ದೇನೊ ಗೊತ್ತಿಲ್ಲಆದರೆ ಎಲ್ಲರಿಗೂ ನಾನುಮೀಸೆ ಹುಡುಗಿ.ಅವನಿಗೆ ಗೊತ್ತಿರಲಿಕ್ಕಿಲ್ಲಅಮ್ಮನ ತವರಿನಲ್ಲಿಹೆಣ್ಣು ಮಗಳು ಬೆಳೆಯುವ ಸಂಕಟ.ಅಲ್ಲಿ ಅಪ್ಪನ X ಒಂದೇನನ್ನ ದೇಹದ ಹೆಮ್ಮೆ,ಅಮ್ಮನ X ಗೆ ತಾನು ಪೂರ್ಣ ಹೆಣ್ಣಲ್ಲದಬಗ್ಗೆ ಒಳಗೊಳಗೇ ಮರುಕ.ಜನ ನನ್ನ ಮೆಚ್ಚುವುದುನನ್ನ ನನ್ನತನಕ್ಕಾಗಿ ಮಾತ್ರ ಎಂಬಖಾಲಿ ಸಾಂತ್ವನವನ್ನುತನ್ನ ಮೂಲೆ ಮೂಲೆಗಳಲ್ಲಿ ತುಂಬಿಕೊಂಡಿದ್ದಾಳೆಈ ಹರೆಯದ ಹುಡುಗಿ ಎಂಬುದುಅವನಿಗೆ ಗೊತ್ತಿಲ್ಲ.ನೀನು ‘ನಿನ್ನ ಹಾಗಿರು’ಎಂದು ಹೇಳುತ್ತಲೇFair & Lovely ಶೇಡ್ ಕಾರ್ಡನ್ನುನನ್ನ ಮೂತಿಯ ಮುಂದೆ ಹಿಡಿಯುವಈ…