ನಿಮ್ಮ ಮಕ್ಕಳಲ್ಲಿ ಉತ್ತಮ ಓದುವ ಹವ್ಯಾಸವನ್ನು ಬೆಳೆಸಲು 8 ಅದ್ಭುತವಾದ ಸಲಹೆಗಳು | 8 magical tips to develop good reading habits in your children
ಮಕ್ಕಳು ಓದಲು ಕಲಿಯುವ ಮೊದಲು ಮನೆಯಲ್ಲಿಯೇ ಉತ್ತಮ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬಹುದು. ಇದಕ್ಕೆ ಸಹಾಯ ಮಾಡುವ ಎಂಟು ಅದ್ಭುತವಾದ ಮತ್ತು ಸರಳ ಸಲಹೆಗಳು ಇಲ್ಲಿವೆ. ಓದುವುದನ್ನು ದೈನಂದಿನ ಅಭ್ಯಾಸವನ್ನಾಗಿ ಮಾಡಿಕೊಳ್ಳಿ. ನಿಮ್ಮ ಮಗು ಜನಿಸಿದ ದಿನದಿಂದಲೇ ಓದುವ ರೂಢಿಯನ್ನು ಬೆಳೆಸಲು ನೀವು ಪ್ರಾರಂಭಿಸಬಹುದು. ಮಲಗುವ ಮುನ್ನ ನಿಮ್ಮ ಮಗುವಿಗೆ ಕೇಳುವ ಹಾಗೆ ಪುಸ್ತಕವನ್ನು ಗಟ್ಟಿಯಾಗಿ ಹಿತವಾದ ಧ್ವನಿಯಲ್ಲಿ ಓದಿದಾಗ ಶಿಶುಗಳು ಓದಿನ ಲಯಕ್ಕೆ ಪ್ರತಿಕ್ರಿಯಿಸುತ್ತವೆ. ನಿಮ್ಮ ಮಗುವಿನ ಮುಂದೆ ಓದಿ. ನಿಮಗೆ ಇಷ್ಟವಾಗಿರುವ ಕಥೆಯ ಪುಸ್ತಕವಾಗಿರಲಿ, ಮ್ಯಾಗಜಿನ್…
