
ಪ್ರೀತಿಯ ಕವನ
ಕಣ್ಣಂಚಲಿ ನೀ ತೋರಿದೆ ಪ್ರೀತಿ ನನ್ನಲಿ … ತುಸು ಕೋಪ ಇದ್ದರು ಚೆಂದ ಆ ನಿನ್ನ ಮೊಗದಲಿ.. ಹೀಗೆ ಇದ್ದು ಬಿಡು ನಮ್ಮಮ್ಮನ ಸೊಸೆಯಾಗಿ .. ನೂರು ವರ್ಷ ನನ್ನ ಜೊತೆಯಾಗಿ .. ಪ್ರೇಮ ಮಾತಿನಿಂದೇನು?ಮಂತ್ರದಿಂದೇನು? ಮಾತು ಮಂತ್ರಗಳೆಲ್ಲ ಬರಿನೆವಗಳೆಮಗೆ. ನನ್ನ ನಿನ್ನಯ ಮಧುರ ಮಿಲನ ಮಾತುಗಳಿರಿಯದ, ಮಂತ್ರಗಳಳೆಯದ ಹಿರಿಯಾಳದಲ್ಲಿ ಶಾಶ್ವತ. ನನಗೂ ನಿನಗೂ ಭೇದವಿಲ್ಲ ಪ್ರೇಮ ಅದ್ವೈತಿ ! – ಶ್ರೀ ಕುವೆಂಪು ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ ಕಾಮನಾ…