ಜೀವನದ ಸಮಸ್ಯೆಗಳು ನ್ಯೂಟನ್ ಬೆಕ್ಕಿನ ಕಿಂಡಿಗಳಿದ್ದಂತೆ .!
ಜಗತ್ತಿಗೆ ಚಲನೆಯ ಮತ್ತು ಗುರುತ್ವಾಕರ್ಷಣೆಯ ಬಲದ ಸಿದ್ಧಾಂತವನ್ನು ಪ್ರತಿಪಾದಿಸಿದ ವಿಜ್ಞಾನಿ, ಬಂಗಾರದ ರಸವಿದ್ಯೆ ಬಲ್ಲ ಬುದ್ದಿವಂತ ಸರ್ ಐಸಾಕ್ ನ್ಯೂಟನ್ ಕುರಿತು ಒಂದು ಬಲು ಸ್ವಾರಸ್ಯಕರವಾಗಿರುವ ಘಟನೆ ಈಗಲೂ ಪ್ರಚಲಿತವಾಗಿದೆ. ನ್ಯೂಟನ್ ರು ತಮ್ಮ ಮನೆಯಲ್ಲಿ ಪ್ರತಿನಿತ್ಯ ವಿಜ್ಞಾನದ ಚಿಂತನೆಗಳನ್ನು ಮಾಡುವಾಗ, ಅವರ ಮನೆಯ ಬೆಕ್ಕು-ಬೆಕ್ಕಿನ ಮರಿಗಳು ಬಾಗಿಲಿನಿಂದ ಅತ್ತಿಂದಿತ್ತ-ಇತ್ತಿಂದತ್ತ ತಿರುಗುತ್ತ ಅವರಿಗೆ ಪದೇ ಪದೇ ಸಮಸ್ಯೆಗಳನ್ನುಂಟು ಮಾಡುತ್ತಿದ್ದವು.ವಿಜ್ಞಾನದ ಅನೇಕ ಜಟಿಲ ಸಮಸ್ಯೆಗಳನ್ನು ಬಗೆ ಹರಿಸಿದ ನ್ಯೂಟನ್ ರಿಗೆ ಅಂದು, ಬೆಕ್ಕಿನ ಸಮಸ್ಯೆ ನಿಜಕ್ಕೂ ಬಹು ದೊಡ್ಡದಾಗಿತ್ತು….