ರುದ್ರಾಕ್ಷಿಯ 21 ಪ್ರಕಾರಗಳು ಮತ್ತು ಅವುಗಳ ಮಹತ್ವ
ರುದ್ರನ- ಅಕ್ಷಿಯೇ, ರುದ್ರಾಕ್ಷಿ. ಹಿಂದೂಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಹಿಮಾಲಯ ಪ್ರದೇಶದಲ್ಲಿ ಹೆಚ್ಚಾಗಿ ರುದ್ರಾಕ್ಷಿ ಮರಗಳು ಕಂಡುಬರುತ್ತವೆ. ನೈಸರ್ಗಿಕವಾಗಿ ಬೆಳೆದ ರುದ್ರಾಕ್ಷವು “ಹಿಮಾಲಯ ಬೀಜ” ಎಂಬ ವಿಭಿನ್ನ ಹೆಸರನ್ನು ಹೊಂದಿದೆ. ರುದ್ರಾಕ್ಷಿಗೆ ಪೂಜೆ-ಪುರಸ್ಕಾರಗಳಲ್ಲಿ ವಿಶೇಷವಾದ ಸ್ಥಾನವಿದೆ ಮತ್ತು ಇದು ಔಷಧೀಯ ಗುಣಗಳನ್ನು ಕೂಡ ಹೊಂದಿದೆ. ಪುರಾಣದ ಪ್ರಕಾರ ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ, ಪರಶಿವನ ಕಣ್ಣಿನಿಂದ ಬಂದ ಆನಂದದ ಕಣ್ಣೀರಿನ ಹನಿಗಳು ರುದ್ರಾಕ್ಷಿ ಮಣಿಗಳಾದವು ಎಂಬ ನಂಬಿಕೆ ಇದೆ. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ…