By Kannada Chetana
March, 14 2024
ಜೀರ್ಣಕ್ರಿಯೆಯನ್ನು ಹೆಚ್ಚಿಸುವಲ್ಲಿ ಸಹಾಯಕಾರಿ.
ದಾಳಿಂಬೆಯಲ್ಲಿನ ನಾರಿನಂಶ/ಫೈಬರ್ ಜೀರ್ಣಕ್ರಿಯೆಯ ಶಕ್ತಿ ಹೆಚ್ಚಿಸುವದು ಮತ್ತು ಮಲಬದ್ಧತೆ ತಡೆಯಲು ಸಹಕಾರಿ.
ರಕ್ತವನ್ನು ತೆಳುವಾಗಿ ಮಾಡುವದು.
ದಾಳಿಂಬೆಯ ಆಂಟಿ-ಆಕ್ಸಿಡೆಂಟ್ಗಳು ನಮ್ಮ ರಕ್ತವನ್ನು ತೆಳುವಾಗಿ ಮಾಡುವದು ಮತ್ತು ರಕ್ತದ ಪ್ಲೇಟ್‌ಲೆಟ್‌ಗಳ ಹೆಪ್ಪುಗಟ್ಟುವ ಕಾರ್ಯವನ್ನು ತಡೆಯುತ್ತದೆ. ದಾಳಿಂಬೆಯ ಸೇವನೆಯಿಂದ ಗಾಯವನ್ನು ಬೇಗ ಗುಣ ಪಡಿಸಬಹುದು.
ಚರ್ಮದ ಬಣ್ಣವನ್ನು ಕಾಂತಿಯುತವಾಗಿ ಮಾಡುವದು.
ದಾಳಿಂಬೆ ಬೀಜದ ಎಣ್ಣೆಯಿಂದ ಮಾಡಿದ ಫೇಸ ಪ್ಯಾಕ ಬಳಸುವುದರಿಂದ ಚರ್ಮದ ತೇವಾಂಶ ಕಾಪಾಡಿ ಚರ್ಮವನ್ನು ಮೃದು ಮತ್ತು ಕಾಂತಿಯುತವಾಗಿ ಮಾಡಬಹುದು.
ಅಧಿಕವಾದ ದೇಹದ ತೂಕ ಕಳೆದುಕೊಳ್ಳಲು.
ದಾಳಿಂಬೆಯಲ್ಲಿರುವ ಪಾಲಿಫಿನಾಲ್‌ಗಳು ಮತ್ತು ಸಂಯೋಜಿತ ಲಿನೋಲೆನಿಕ್ ಆಮ್ಲವು ಕೊಬ್ಬನ್ನು ಕರಗಿಸಿ ಚಯಾಪಚಯ(Metabolism) ಕಾರ್ಯ ಹೆಚ್ಚಿಸಿ ದೇಹದ ಅಧಿಕ ತೂಕವನ್ನು ಕರಗಿಸಲು ಸಹಾಯ ಮಾಡುತ್ತದೆ.
ಕೂದಲಿನ ಆರೋಗ್ಯಕ್ಕೂ ಸಹಕಾರಿ.
ದಾಳಿಂಬೆಯ ಆಂಟಿ ಆಕ್ಸಿಡೆಂಟ್ಗಳು ಕೂದಲಿನ ಬೇರುಗಳ ಬಲಪಡಿಸುವಿಕೆ ಮತ್ತು ರಕ್ತ ಸಂಚಾರ ಸುಧಾರಿಸಲು ಅನುಕೂಲಕಾರಿ.
ಇತರೆ ಪ್ರಯೋಜನಗಳು
ಸಂಧಿವಾತ ನಿವಾರಣೆ
ಮೋಡವೆಗಳ ನಿವಾರಣೆ
ಮೂಳೆಗಳ ಬಲಪಡಿಸುವಿಕೆ
ಮಧುಮೇಹ ನಿಯಂತ್ರಣ
ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು