ಅಮ್ಮನ ಬಗ್ಗೆ 10+ ಭಾವನಾತ್ಮಕ ಕವನಗಳು | ತಾಯಿಯ ಬಗ್ಗೆ ಕವನಗಳು in kannada

ಅಮ್ಮನ ಕವನ/ತಾಯಿ ಕವನ

ಹೆತ್ತಮ್ಮ ಎಂದರೆ ಪ್ರಪಂಚದ ಅತ್ಯಂತ ಅಮೂಲ್ಯವಾದ ಆಶೀರ್ವಾದ. ಅವಳ ಪ್ರೀತಿ, ತ್ಯಾಗ ಮತ್ತು ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನಮ್ಮ ಹೃದಯವನ್ನು ಸರಳವಾಗಿ ಸ್ಪರ್ಶಿಸುತ್ತದೆ. ಒಂದೇ ಹೆಸರಿನಲ್ಲಿ ಅನೇಕ ಭಾವನೆಗಳು ತುಂಬಿದ ಪ್ರಪಂಚವಿದೆ

ನಿಮಗಾಗಿ ಒಂದಿಷ್ಟು’ ಮಗು ಮತ್ತು ಅಮ್ಮ/ತಾಯಿ ‘ ಸಂಬಂಧದ ಆಧಾರಿತ ಕವನಗಳು.

ನಿಮ್ಮ ತಾಯಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಬರೆಯಿರಿ | ತಾಯಿಯ ಮಹತ್ವ ಪ್ರಬಂಧ


ಅಮ್ಮನ ಮಮತೆ, ಸಾಗರದಂತೆ 

ಅಮ್ಮನ ಮಡಿಲು, ತೊಟ್ಟಿಲಂತೆ

ಅಮ್ಮನ ಕೈತುತ್ತು, ಅಮೃತದಂತೆ 

ಇವಲ್ಲ ಸಿಕ್ಕವರೇ….  ಅದೃಷ್ಟವಂತರಂತೆ 


ನೋವಿನಲ್ಲಿ ನಗು, 

ಕಷ್ಟದಲ್ಲಿ ಧೈರ್ಯ,

ಸ್ವಾರ್ಥ ಬಯಸದ ಪ್ರೀತಿ,

ಸಿಗುವುದು ತಾಯಿಯಲ್ಲಿ ಮಾತ್ರ 


ಬಣ್ಣದ ಪ್ರಪಂಚಕ್ಕೆ ಮುರುಳಾದ ನನ್ನ ಮನ 

ಮರೆತಿತ್ತು ತಾಯಿಯನ್ನೇ .. 

ಮೂರ್ಖನಾದ ನನಗೆ ತಾಯಿಯ ನೆನೆಪು ಬರಲು 

ಅವಳೇ ಬಿಟ್ಟಿಹಳು ಈ ಭುವಿಯನ್ನೇ .. 

ಎಷ್ಟೇ ಹುಡಿಕಿದರು ಸಿಗಲಿಲ್ಲ .. 

ಯಾರಲ್ಲಿ ಹುಡುಕಿದರೂ ಸಿಗಲಿಲ್ಲ .. 


ನೋವಿನಲ್ಲಿ ನಗುವುದ ಕಲಿತೆ .. 

ಕಷ್ಟದಲ್ಲಿ ಧೈರ್ಯವ ಕಲಿತೆ .. 

ತ್ಯಾಗದಲ್ಲಿ ಸುಖವ ಕಲಿತೆ .. 

ಸುಖವ ಬದಿಗೊತ್ತುವುದ ಕಲಿತೆ .. 

ಆದರೂ … 

ಅವಳಿಂದ ಕಲಿಯುವುದು ತುಂಬಾ ಇದೆ 


amma kavana in kannada

ತವರು ಮನೆ ಬಿಟ್ಟು ಹೊಸ ತವರು ಮನೆ ಕಟ್ಟಿದವಳು 

ಪ್ರತಿ ಕೆಲಸಕ್ಕೆ ಸ್ಪೂರ್ತಿಯಾದವಳು 

ಧೈರ್ಯ ಸಾಹಸಕ್ಕೆ ಕನ್ನಡಿ ಯಾದವಳು

ನನ್ನನ್ನು ಅಂಗೈಯಲ್ಲಿ ಹಿಡಿದು ಆಸರೆಯಾದವಳು

ಎಷ್ಟು ಬಣ್ಣಿಸಿದರು ಪದಕ್ಕೆ ಸಿಗದವಳು 

ಅವಳೇ ನನ್ನ ತಾಯಿ


ತಾಯಿ ಪ್ರೀತಿ ಕವನ.

ಇಂಪಾದ ಈ ಲಾಲಿ ಹಾಡು 

ಕೇಳುತ್ತಿರಲು ತಂಪಾದ ಹೊತ್ತಲ್ಲಿ

ಗುಮ್ಮ ಬಂದನೆಂದು ಹೆದರಲು

ನೀ ಕೊಟ್ಟ ಅಪ್ಪುಗೆಯ ನೆನೆದು

ಮನವಿಟ್ಟಿದೆ ಕಣ್ಣೀರು


ಅಮ್ಮನ ಬಗ್ಗೆ ಕವನ

ನಿನ್ನ ಮಡಿಲಲಿ ಮಲಗಿದಾಗ ಸಿಕ್ಕ ನೆಮ್ಮದಿ ಇನ್ನೆಲ್ಲೂ ಸಿಗದು

ನಿನ್ನ ಕೈ ತುತ್ತಿನ ರುಚಿಯು ಎಲ್ಲೂ ಸಿಗದು

ನೀ ಇಲ್ಲ ಎನ್ನುವ ಕಲ್ಪನೆ ಮಾಡಲು ಎಂದೂ ಆಗದು


ತಾಯಿ ಕವನಗಳು

ನೀ ಎದುರಿರಲು ಬಂಧುಗಳು ತೋರಿದ ಕಾಳಜಿ ಕಂಡು ಅನಿಸಿತು ಇಲ್ಲಿ ಎಲ್ಲರೂ ನನ್ನವರೇ

ನೀ ಕಣ್ಮರೆಯಾದಾಗಲೇ ಗೊತ್ತಾಗಿದ್ದು ಎಲ್ಲರೂ ಅವರವರೇ 

ಅದಕ್ಕೆ ಅನಿಸುತ್ತೆ ದೊಡ್ಡವರು ಹೇಳಿದ್ದು  ‘ತಾಯಿ ಗಿಂತ ಬಂದುವಿಲ್ಲ’


ತಾಯಿಯ ಕವನ

ತನ್ನ ಕನಸನು ಕೆಡವಿ ಕಟ್ಟಿದಳು ನನ್ನ ಜೀವನ

ಅವಳದು ಎಂದಿಗೂ ಬಾಡದ ಹೂ ಮನ

ಅವಳ ಒಡಲಲಿ ಸಿಕ್ಕಿದೆ ನನಗೆ ಜನನ


ತಾಯಿ ಪ್ರೀತಿ ಕವನ

ಅಮ್ಮ ಎಂದರೆ ಆಸೆ 

ಅಮ್ಮ ಎಂದರೆ ಹಸಿವು

ಅಮ್ಮ ಎಂದರೆ ಔಷಧಿ 

ಅಮ್ಮ ಎಂದರೆ ನೆಮ್ಮದಿ


ನನ್ನಮ್ಮ

ಪ್ರೀತಿ ದಿನಾನೂ ಹುಟ್ಟೋಕಾಗಲ್ಲ…
ಎಷ್ಟೇ ದುಡ್ಡ್ ಇದ್ರೂ ಏನ್ ಅಂತೇ
ಅವಳ ಪ್ರೀತಿಗೆ ಬೆಲೆ ಕಟ್ಟೋಕಾಗಲ್ಲ…
ತಪ್ಪ ಮಾಡಿದ್ರು ಒಳ್ಳೇದೇ ಬಯಸ್ತಾಳೆ..
ಯಾವ ದೇವರನೂ ಅವಳನ್ನು ಮಿರ್ಸೋಕಾಗಲ್ಲ..
ಇನ್ ಎಷ್ಟ ಹೇಳಿ ನನ್ನ ಅಮ್ಮ ಬಗ್ಗೆ !!
ಈ ಜನ್ಮದಲ್ಲಿ ಅವಳ ಋಣ ತೀರಿಸೋಕ್ಕ್ ಆಗಲ್ಲ… 
ಲವ್ ಯು ಮಾ ❤❤


🙏ಒಂಬತ್ತು ತಿಂಗಳು ಗರ್ಭದಲ್ಲಿ ಇರಿಸಿ,
ಹಲವಾರು ಸಂಕಟಗಳನ್ನು ಅನುಭವಿಸಿ,
ಹಾರೈಕೆ ಮಾಡಿ, ಜನ್ಮ ಕೊಟ್ಟಳು ಏನಗೆ ನನ್ನಮ್ಮ.❤❤
ಅವಳ ಮಡಿಲೆ ಸ್ವರ್ಗವು ನನಗೆ ಇನ್ನೇನು ಬೇಡಮ್ಮ.
ಅತ್ತಾಗ ಲಾಲಿಸಿ ಪಾಲಿಸಿ ಮುದ್ದಾಡಿದಳು ನನ್ನನ್ನ,
ನಾನು ನಕ್ಕಾಗ ತನ್ನೆಲ್ಲಾ ನೋವನ್ನು ಮರೆತು
ಮಗುವಲ್ಲಿ ಮಗುವಾಗುವಳು ನನ್ನಮ್ಮ.
ಅಕ್ಕರೆಯ ತುತ್ತ ನಿಟ್ಟು, ಜೋಪಾನವಾಗಿ ನೋಡಿಕೊಂಡು…
ನನ್ನಯ ಮೊದಲ ಗುರು ಆಗಿಹಳು ನನ್ನಮ್ಮ.❤❤
ಸಾವಿರ ಜನ್ಮ ಹುಟ್ಟಿ ಬಂದರು ತೀರಿಸಲಾಗದು ಅವಳ ಋಣವನ್ನ.
ನನ್ನಯ ಜೀವನದಲ್ಲಿ ಕಾಣುವ ದೇವರು
ಒಬ್ಬರೇ ಆಗಿಹರು ಅದುವೇ ನನ್ನಮ್ಮ. 🙏


🙏 ಅಮ್ಮನ ಮಡಿಲು 🙏
🙏 ಹುಟ್ಟಿದೆ ಅಮ್ಮನ ಗರ್ಭದಿಂದ,
ಬೆಳೆಯುತ್ತಾ ಬಂದೆ ಅಮ್ಮನ ಮಡಿಲಿನಿಂದ,
ತುತ್ತಿಟ್ಟು ಉಣಿಸುತ್ತಾ ಬೆಳೆಸಿದಳು ಪ್ರೀತಿಯಿಂದ,
ನಾ ನಕ್ಕಾಗ ನಕ್ಕಳು, ನಾ ಅತ್ತಾಗ ಅತ್ತಳು,
ಪ್ರತಿ ಕ್ಷಣಾನು ನನಗಾಗಿ ಜೀವಿಸುತ್ತಾ ಬಂದಳು ನನ್ನವ್ವ,
ತೀರಿಸಲಾಗದು ಅವಳ ಋಣವ,
ಏಳೇಳು ಜನ್ಮಕ್ಕೂ ಇವಳ ಮಡಿಲೆ ನನಗೆ ಸಿಗಲವ್ವ.🙏


☔ ಮಳೆಯಲ್ಲಿ ಕೊಡೆಯಾಗಿ
😶‍🌫ಚಳಿಯಲ್ಲಿ ಹೊದಿಕೆಗಾಗಿ
🌞ಬಿಸಿಲಲ್ಲಿ ನೆರಳಾಗಿ
👁ಕಾಪಾಡಿದೆ ಕಣ್ಣ ರೆಪ್ಪೆಯಾಗಿ
ನೀ ಕೊಟ್ಟ ಜೀವವಿದು 👼
❤ಇಡುವೆ ನಿನ್ನ ಮುಡಿಪಾಗಿ❤


💐ಚಿಂತೆ💐
ಅವ್ವ ಮನೆಗಾಗಿ ಯಾಕ ಮಾಡತಿ ಚಿಂತೆ
ಜಗದಾಗ ಎಲ್ಲರಿಗೂ ಒಂದಲ್ಲ ಒಂದು ಕಂತೆ
ಮನೆ ಗಂಡ ಮಕ್ಕಳಿಗಾಗಿ ನೀ ಮಾಡತಿ ಭಾಳ ಚಿಂತಿ
ದೇವರು ಅವರ ಹಣೆಲಿ ಹೀಗೆ ಬರೆದಿರುವನು ಸಂತಿ llಹಲವಾರು ದೇವರಿಗೆ ಹರಕೆಯನಿತ್ತೆ ನಿನ್ನ ಚಿಂತೆ
ದೇವರು ನೋಡುತ್ತಿಲ್ಲ ಸಮಯಕ್ಕಾಗಿ ಕಾಯುವಂತೆ
ಕಷ್ಟಗಳು ನೀಡುವನು ನೀ ಹೇಗೆ ಸಹಿಸಿಕೊಳ್ಳುತಿಯಂತೆ
ನಿನ್ನ ಸಹನೆಗೆ ತೋರುವನು ಒಮ್ಮೆ ಅಭಯ ಹಸ್ತವಂತೆ llನಿನ್ನ ನಂಬಿಕೆ ಹುಸಿಗೊಳಿಸದೆ ನಿವಾರಿಸುವ ದಿನ ಬಂತೆ
ಆಗ ನೀ ಮರೆಯದಿರು ಆ ದೇವರ ಪಾದ ಕಮಲವಂತೆ
ಮನುಜರನ್ನು ನಂಬಿ ಕೆಟ್ಟವರು ಈ ಜಗದಲ್ಲಿರುವಂತೆ
ದೇವರನ್ನು ನಂಬಿ ಕೆಟ್ಟವರಿಲ್ಲ ಈ ಬಾಳ ಸಂತೆಯಲ್ಲಂತೆ ll

 

ನಿಮ್ಮ ತಾಯಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಬರೆಯಿರಿ | ತಾಯಿಯ ಮಹತ್ವ ಪ್ರಬಂಧ

One thought on “ಅಮ್ಮನ ಬಗ್ಗೆ 10+ ಭಾವನಾತ್ಮಕ ಕವನಗಳು | ತಾಯಿಯ ಬಗ್ಗೆ ಕವನಗಳು in kannada

Leave a Reply

Your email address will not be published. Required fields are marked *