Site icon Kannada Chetana

ದಾಳಿಂಬೆ ಕಾಳುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ 5 ಪರಿಣಾಮಕಾರಿ ಉಪಯೋಗಗಳು | 5 Effective Health Benefits of Consuming Pomegranate Seeds

pomegranates

pomegranates

ದಾಳಿಂಬೆಯು ಉತ್ತಮ ರುಚಿಕರವಾದ ಹಣ್ಣು. ಕೆಂಪು ಕಾಳುಗಳಿಂದ ಕೂಡಿದ ಈ ಹಣ್ಣು ನೋಡೋಕೆ ಎಷ್ಟು ಚೆಂದವೋ, ಇದರಲ್ಲಿರುವ ಪೋಷಕಾಂಶಗಳು ಅಷ್ಟೇ ಹೇರಳವಾಗಿವೆ. ಈ  ಹಣ್ಣು ಆಂಟಿ-ಆಕ್ಸಿಡೆಂಟ್, ಅಂಟಿ-ವೈರಲ್ ಮತ್ತು ಆಂಟಿ-ಟ್ಯೂಮರ್ ಗುಣಗಳನ್ನು ಹೂಂದಿದೆ. ವಿಟಮಿನ್‌ ಎ, ವಿಟಮಿನ್‌ ಸಿ, ವಿಟಮಿನ್‌ ಇ, ಜೊತೆಗೆ ಫೋಲಿಕ್ ಆಮ್ಲ ಕೂಡ ಇದೆ. ಹೆಚ್ಚಿನ ನಾರಿನಂಶದಿಂದ ಕೂಡಿರುವ ಈ ಹಣ್ಣು ನಮ್ಮ ಆರೋಗ್ಯ ಕಾಪಾಡುವುದರಲ್ಲಿ ಸಹಾಯವಾಗಿವದೆ.

ಹಾಗಾದರೆ ದಾಳಿಂಬೆ ಹಣ್ಣಿನ ಸೇವನೆಯಿಂದ ಆಗುವ ಉಪಯೋಗಗಳ ಮಾಹಿತಿ ಇಲ್ಲಿದೆ.

ದಾಳಿಂಬೆ

ಜೀರ್ಣಕ್ರಿಯೆಯನ್ನು ಹೆಚ್ಚಿಸುವಲ್ಲಿ ಸಹಾಯಕಾರಿ.

ದಾಳಿಂಬೆ ಹಣ್ಣಿನಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಯ ಶಕ್ತಿ ಹೆಚ್ಚಿಸುವದು. ಇದು ಸಾಕಷ್ಟು ಫೈಬರ್ ಅಂಶವನ್ನು ಹೊಂದಿರುವದರಿಂದ ಮಲಬದ್ಧತೆ ತಡೆಯಲು ಸಹಕಾರಿ. ನಾವು ದಾಳಿಂಬೆ ಬೀಜಗಳನ್ನು ತಿನ್ನುವುದರಿಂದ ಮಾತ್ರ ಫೈಬರ್ ಅನ್ನು ಪಡೆಯುತ್ತೆವೆ ಹೊರತು ಜ್ಯೂಸ್‌ಗಳಿಂದಲ್ಲ. 

ರಕ್ತವನ್ನು ತೆಳುವಾಗಿ ಮಾಡುವದು.

ದಾಳಿಂಬೆಯ ಆಂಟಿ-ಆಕ್ಸಿಡೆಂಟ್ಗಳು ನಮ್ಮ ರಕ್ತವನ್ನು ತೆಳುವಾಗಿ ಮಾಡುವದು. ಮತ್ತು ರಕ್ತದ ಪ್ಲೇಟ್‌ಲೆಟ್‌ಗಳ ಹೆಪ್ಪುಗಟ್ಟುವ ಕಾರ್ಯವನ್ನು ತಡೆಯುತ್ತದೆ. ದಾಳಿಂಬೆಯ ಸೇವನೆಯಿಂದ ಗಾಯವನ್ನು ಬೇಗ ಗುಣ ಪಡಿಸಬಹುದು. 

ಚರ್ಮದ ಬಣ್ಣವನ್ನು ಕಾಂತಿಯುತವಾಗಿ ಮಾಡುವದು.

ದಾಳಿಂಬೆ  ಬೀಜದ ಎಣ್ಣೆಯಿಂದ ಮಾಡಿದ ಫೇಸ ಪ್ಯಾಕ ಬಳಸುವುದರಿಂದ ಚರ್ಮದ ತೇವಾಂಶ ಕಾಪಾಡಿ ಚರ್ಮವನ್ನು ಮೃದು ಮತ್ತು ಕಾಂತಿಯುತವಾಗಿ ಮಾಡಬಹುದು.

ಅಧಿಕವಾದ ದೇಹದ ತೂಕ ಕಳೆದುಕೊಳ್ಳಲು. 

ದಾಳಿಂಬೆಯಲ್ಲಿರುವ ಪಾಲಿಫಿನಾಲ್‌ಗಳು ಮತ್ತು ಸಂಯೋಜಿತ ಲಿನೋಲೆನಿಕ್ ಆಮ್ಲವು ಕೊಬ್ಬನ್ನು ಕರಗಿಸಿ  ಚಯಾಪಚಯ(Metabolism) ಕಾರ್ಯ ಹೆಚ್ಚಿಸುತ್ತದೆ.

ದಾಳಿಂಬೆ ಉರಿಯೂತದ ಗುಣಲಕ್ಷಣಗಳು, ಉತ್ಕರ್ಷಣ ನಿರೋಧಕಗಳನ್ನು ಮತ್ತು ಫೈಬರ್‌ನ್ನು ಹೊಂದಿರುತ್ತವೆ. ಈ ಪೋಷಕಾಂಶಗಳ ಸಂಯೋಜನೆಯು ದೇಹದಿಂದ ಹೆಚ್ಚುವರಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅನ್ನು ತೆಗೆದು ಹಾಕುವದರಲ್ಲಿ ಸಹಾಯ ಮಾಡುತ್ತದೆ.

ಕೂದಲಿನ ಆರೋಗ್ಯಕ್ಕೂ ಸಹಕಾರಿ.

ದಾಳಿಂಬೆಯ ಆಂಟಿ ಆಕ್ಸಿಡೆಂಟ್ಗಳು ಕೂದಲಿನ ಬೇರುಗಳ ಬಲಪಡಿಸುವಿಕೆ ಮತ್ತು ರಕ್ತ ಸಂಚಾರ ಸುಧಾರಿಸಲು ಅನುಕೂಲಕಾರಿ.

ಇತರೆ ಪ್ರಯೋಜನಗಳು : ದಾಳಿಂಬೆಯ ಸೇವನೆಯಿಂದ ಇನ್ನು ಅನೇಕ ಪ್ರಯೋಜನಗಳು ಇವೆ. ಸಂಧಿವಾತ ನಿವಾರಣೆ, ಮೋಡವೆಗಳ ನಿವಾರಣೆ, ರೋಗ ನಿರೋಧಕ ಶಕ್ತಿ, ಮೂಳೆಗಳ ಬಲಪಡಿಸುವಿಕೆ.  ಮಧುಮೇಹ ನಿಯಂತ್ರಣ. ಬಾಣಂತಿಯರಿಗೆ ಮತ್ತು ಮಕ್ಕಳಿಗೂ ಈ ಹಣ್ಣಿನ ಸೇವನೆಯಿಂದ ಅನುಕೂಲ. 

Exit mobile version