ಪ್ರೀತಿಯ ಕವನ

ಪ್ರೀತಿಯ ಕವನ

ಕಣ್ಣಂಚಲಿ ನೀ ತೋರಿದೆ ಪ್ರೀತಿ ನನ್ನಲಿ … 

ತುಸು ಕೋಪ ಇದ್ದರು ಚೆಂದ ಆ ನಿನ್ನ ಮೊಗದಲಿ.. 

ಹೀಗೆ ಇದ್ದು ಬಿಡು ನಮ್ಮಮ್ಮನ ಸೊಸೆಯಾಗಿ .. 

ನೂರು ವರ್ಷ ನನ್ನ ಜೊತೆಯಾಗಿ ..


ಪ್ರೇಮ

ಮಾತಿನಿಂದೇನು?ಮಂತ್ರದಿಂದೇನು?

ಮಾತು ಮಂತ್ರಗಳೆಲ್ಲ ಬರಿನೆವಗಳೆಮಗೆ.

ನನ್ನ ನಿನ್ನಯ ಮಧುರ ಮಿಲನ

ಮಾತುಗಳಿರಿಯದ, ಮಂತ್ರಗಳಳೆಯದ

ಹಿರಿಯಾಳದಲ್ಲಿ ಶಾಶ್ವತ.

ನನಗೂ ನಿನಗೂ ಭೇದವಿಲ್ಲ

ಪ್ರೇಮ ಅದ್ವೈತಿ !

– ಶ್ರೀ ಕುವೆಂಪು


ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ

ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ

ಕಾಮನಾ ಬಿಲ್ಲೇರುವಾ, ಜಾರುತ ನಾವಾಡುವ

ಹಗಲು ಇರುಳು ಒಂದಾಗಿ ಬಾಳುವ 


ನೀನಿಲ್ದೆ ನಾನ್ ಇರಬಲ್ಲೆ .. 

ಆದ್ರೆ ಈ ಹುಚ್ಚು ಹೃದಯಕ್ಕೆ ನೀನೇ ಬೇಕಂತೆ.. 

ಸಿಗ್ತಿಯಾ ತಾನೇ ?..


ನಾ ತುಸು ಏಕಾಂತ ಬೇಕಂತ ಕಾಡು ನೋಡ ಹೋದೆ

ಆ ಪ್ರತಿ ಹೆಜ್ಜೆಲು ಎಲ್ಲೆಲ್ಲು ನೀ ಕಾಡಿದೆ

ಅಲೆಮಾರಿ ಜೀವ ಸಿಲುಕಿ ನಿನ್ನ ಮೋಹಕ್ಕೆ

ರಹದಾರಿ ಸಿಕ್ಕ ಹಾಗೆ ಸೀದ ಸ್ವರ್ಗಕ್ಕೆ


ಈ ಕೊರಳಿಗೆ ನಿನ್ನ

ಉಸಿರಿನ ಬಯಕೆಯು

ಮುಂಗುರುಳಿಗೆ ನಿನ್ನ

ಬೆರಳಿನ ಹುಡುಕಾಟವು

ನಡೆವೆನು ಹಿಂಬಾಲಿಸಿ

ನೆರಳನು ನಾ ಸೋಲಿಸಿ

ಅತಿಯಾದ ಪ್ರೀತಿ ಬೇಡುವೆ

ಬೆಂಬಿಡದೆ ನಿನ್ನ ಕಾಡುವೆ

ಹುಚ್ಚು ಹುಡುಗಿ ತುಂಬಾ ನಾನು, ಸಹಿಸು ನೀನು


ಸರಿಯಾಗಿ ನೆನಪಿದೆ ನನಗೆ

ಇದಕೆಲ್ಲ ಕಾರಣ ಕಿರುನಗೆ

ಮನದ ಪ್ರತಿ ಗಲ್ಲಿಯೊಳಗು

ನಿನ್ನದೆ ಮೆರವಣಿಗೆ

ಕನಸಿನ ಕುಲುಮೆಗೆ ಉಸಿರನು ಊದುತ

ಕಿಡಿ ಹಾರುವುದು ಇನ್ನು ಖಚಿತ


ಬಿಸಿಲಾಗಲಿ ಮಳೆಯಾಗಲಿ

ನೆರಳಾಗಿ ನಾನು ಬರುವೆನು ಜೊತೆಗೆ

ಸವಿ ಮಾತಲಿ ಸುಖ ನೀಡುವೆ

ಎಂದೆಂದಿಗೂ ಹೀಗೆ

ಹೂವಾಗಲಿ ಈ ಮೊಗವರಳಿ

ಸಂತೋಷದ ಪರಿಮಳ ಚೆಲ್ಲಿ

ಹಾಯಾಗಿರು 


ಆಸರೆ
ನೀ ನನಗಾದರೆ ನಾನು ನಿನಗೆ,
ನಮ್ಮಿಬ್ಬರ ನಂಟು ಕೊನೆಯವರೆಗೆ,
ಮಣ್ಣಿಂದ ಜೀವವು ಹಸಿರ ತೆನೆಗೆ,
ನಾವಿಬ್ಬರು ಬೇಕು ಈ ಭುವಿಗೆ.
ನನ್ನಿಂದ ನೀನು ನಿನ್ನಿಂದ ನಾನು,
ನಾವು ಒಂದಾದರೆ ಭೂಮಿ ಭಾನು,
ಏನೇ ಆದರೂ ನಾ ನಿನ್ನ ಕೈ ಬಿಡೆನು,
ಎಷ್ಟೇ ಕಷ್ಟದ್ದಲ್ಲೂ ಜೊತೆಯಾಗಿರುವೆನು.
ನಾವಿಬ್ಬರು ಸೇರಿ ದುಡಿಯೋಣ,
ನಿಷ್ಠೆಯಿಂದ ಕಾಯಕವ ಮಾಡೋಣ,
ನಾವಿದ್ದರೆ ನೀವು ಎನ್ನುವುದು ತಿಳಿಸೋಣ,
ಮಾನವ ಕುಲಕೆ ಆಸರೆಯಾಗಿರೋಣ…
ಡಾ. ಬಿ. ವೆಂಕಟೇಶ್


ಪ್ರೀತಿ ಅರಮನೆ ನನ್ನ ಸೆರೆಮನೆ ನಾ ಬಂಧಿ ಆಗಿರುವೆನೆ

ಬಿಡುಗಡೆಯನೆ ಎಂದು ಬಯಸದ ನಾ ಪ್ರೇಮ ಖೈದಿ ಕಣೆ

ಬರೆದೆ ಉಸಿರಲೇ ನಿನ್ನ ಹೆಸರನೆ 


ಅನುರಾಗ ಅರಳೊ ಸಮಯ

ಮನಸುಗಳು ಮಾತಾಡೊ ಸಮಯ

ಯಾರು ಯಾರ ದಾರಿಯನ್ನು ಕಾಯೊ ಸಮಯ

ಮೊಗ್ಗು ಮೆಲ್ಲ ಹಿಗ್ಗಿ ಹೂವಾಗೊ ಸಮಯ

ಕದ್ದುಕೊಂಡರು ಯಾದೊ ನನ್ನ ಹೃದಯ

ಹಿಂದೆ ಎಂದು ಕಂಡೆ ಇಲ್ಲ ಇಂಥ ಖುಷಿಯ

ಪ್ರೀತಿನಾ ಇದು ಪ್ರೀತಿನಾ ಇದು,

ನನ್ನಲ್ಲೆ ನಾನೆ ಇಲ್ಲ ಈಗ ಯಾಕೊ ಯಾಕೊ ಯಾಕೋ


ಹೊಸ ರಾಗ
ಮುಂಜಾನೆ ಮಂಜಲಿ ಆ ಉದಯರಾಗ,
ಬಾನಿನ ಅಂಚಲಿ ಮೂಡಿದ ಹೊಸರಾಗ,
ನಗು ನಗುತ ನೀನು ಬಂದಾಗ,
ನಾ ಹಾಡಿದೆ ನಿನಗಾಗಿ ಪ್ರೇಮರಾಗ.
ನಿನ್ನ ಗಾಯನಕೆ ಕೋಗಿಲೆಯು ನಾಚಿದೆ,
ನಿನ್ನ ಸೌಂದರ್ಯಕೆ ಮಂಜು ಕರಗಿದೆ,
ನಿನ್ನ ನರ್ತನಕೆ ನವಿಲು ಮೌನವಾಗಿದೆ,
ಗೆಳತಿ ನಿನ್ನೊಲವ ಮನವು ಬೇಡಿದೆ..
– ಡಾ. ಬಿ. ವೆಂಕಟೇಶ್


ಅರಿವಿಲ್ಲದೆ… ಆದ ಪರಿಚಯ ನಮ್ಮದು ಅಂದು,
ನಿನ್ನ ಪರಿಚಯ ಆದ ದಿನದಿಂದ ಅಗಿರುವೆ ನಾನು
ಪುಟ್ಟ ಮಗುವಿನಂತೆ ಇಂದು,
ನೀ ತೋರುವ ಸ್ನೇಹದ ಮಮತೆಯಲ್ಲಿ
ಅಮ್ಮನ ಪ್ರೀತಿಯ ಸವಿಯುತಿರುವೆ,
ನಿನ್ನ ಈ ಮುದ್ದಾದ ಕೋಪದಿ
ಅಪ್ಪನನ್ನು ನೆನಪಿಸುತೀರುವೆ,
ಏನೆಂದು ಹೆಸರಿಡಲಿ ಈ ಸುಂದರವಾದ ಸಂಬಂಧಕ್ಕೆ….
– ಹೆಚ್ ಸಂಗಯ್ಯ


ಮೊದಲಾಸಲ ಸೀರೆಯಲ್ಲಿ ನಿನ್ನನ್ನು ನಾ ಕಂಡಾಗ ಕಣ್ಣಂಚಿನಲ್ಲಿ ನೀರು ಜಾರ ತೊಡಗಿತು, ಕಾರಣ ಎಷ್ಟು ಮುದ್ದಾಗಿ ಕಾಣುತ್ತಿದ್ದಾಳೆ…..
ನನ್ನ ಬಂಗಾರ ಎಂಬ ಖುಷಿಗೆ, ಹಾಗೆಯೇ…..
ಇಂತಹ ಮುದ್ದಾದ ನನ್ನ ಬಂಗಾರನ ಹೇಗೆ ಬಿಟ್ಟು ಕೊಡೋದು ಎಂಬ ನೋವಿಗೆ ಮನಸ್ಸು ಕೊರಗತೊಡಗಿತು.
–  ಹೆಚ್ ಸಂಗಯ್ಯ


ಮಳೆಯಲ್ಲಿ ನೆನೆದ ಮನಸ್ಸು….
ಹಾಗೆ ಮನದಲ್ಲಿ ನೊಂದ ಮನಸ್ಸು….
ಎರಡಕ್ಕೂ ಒಂದೇ ಕಾರಣ ಅದುವೇ ಈ ಪ್ರೀತಿ,
ಮಳೆಯಲ್ಲಿ ನೆನೆದಾಗ ಅವಳ ನೆನಪಲ್ಲಿ ಕಣ್ಣೀರನ್ನು ಮರೆ ಮಾಚುವೆ,,
ಮನದಲ್ಲಿ ನೋಂದಾಗ ಯಾರಿಗೂ ಗೊತ್ತಾಗದ ಹಾಗೆ ನಗು ಮುಖದಿ ಇರುವೆ…… ಇವೆರಡನ್ನು ಕಲಿಸಿ ಕೊಟ್ಟವಳು ನೀನೇ….ಅಲ್ಲವೇ.
–  ಹೆಚ್ ಸಂಗಯ್ಯ


ಪ್ರೇಮಿಸುವುದೆಂದರೆ ಉಮ್ಮಳಿಸಿ ಬರುವ ನಿನ್ನ ನೆನಪು
ಯಾವುದನ್ನು ಪ್ರೇಮದ ನೋವೆಂದು ಕೇಳುತಿದ್ದಿರ!
ಒಮ್ಮೆ ಯಾರನ್ನಾದರೂ ಪ್ರೇಮಿಸಿ ನೋಡಿ.

– ನುಸ್ರತ್ ಫತೇ ಅಲಿ ಖಾನ್
ಅನು ~ಸಾಕಿ

One thought on “ಪ್ರೀತಿಯ ಕವನ

  1. ನನ್ನ ಪ್ರೀತಿಯ ಹುಡುಗಿ, ನಿನ್ನ ಹೆಸರನ್ನು ನನ್ನ ಹೃದಯದ ಗುಡಿಯ ಮೇಲೆ ಬರೆದಿದ್ದೇನೆ. ನೀನು ತಿರುಗಿ ನೋಡದೆ ಹೋದೆಯಾ? ನಿನ್ನನ್ನು ಕಾಯುತ್ತಿರುವೆ. ನೀನು ಬರುವ ದಾರಿಯಲ್ಲಿ, ನೀನು ನೋಡಿದರೂ ನೋಡದಂತೆ ಮರೆಯಾಗಿ ಹೋಗುತ್ತೀಯಾ?
    (ಮೂಲ ಕವನ: ಸಿದ್ದರಾಜು ಎಸ್

Leave a Reply

Your email address will not be published. Required fields are marked *