Site icon Kannada Chetana

ನಿಮ್ಮ ಮಕ್ಕಳಲ್ಲಿ ಉತ್ತಮ ಓದುವ ಹವ್ಯಾಸವನ್ನು ಬೆಳೆಸಲು 8 ಅದ್ಭುತವಾದ ಸಲಹೆಗಳು | 8 magical tips to develop good reading habits in your children

Kid reading a book

cz

ಮಕ್ಕಳು ಓದಲು ಕಲಿಯುವ ಮೊದಲು ಮನೆಯಲ್ಲಿಯೇ ಉತ್ತಮ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬಹುದು. ಇದಕ್ಕೆ ಸಹಾಯ ಮಾಡುವ ಎಂಟು ಅದ್ಭುತವಾದ ಮತ್ತು ಸರಳ ಸಲಹೆಗಳು ಇಲ್ಲಿವೆ.

ಓದುವುದನ್ನು ದೈನಂದಿನ ಅಭ್ಯಾಸವನ್ನಾಗಿ ಮಾಡಿಕೊಳ್ಳಿ.

ನಿಮ್ಮ ಮಗು ಜನಿಸಿದ ದಿನದಿಂದಲೇ ಓದುವ ರೂಢಿಯನ್ನು ಬೆಳೆಸಲು ನೀವು ಪ್ರಾರಂಭಿಸಬಹುದು. ಮಲಗುವ ಮುನ್ನ ನಿಮ್ಮ ಮಗುವಿಗೆ ಕೇಳುವ ಹಾಗೆ ಪುಸ್ತಕವನ್ನು ಗಟ್ಟಿಯಾಗಿ ಹಿತವಾದ ಧ್ವನಿಯಲ್ಲಿ ಓದಿದಾಗ ಶಿಶುಗಳು ಓದಿನ ಲಯಕ್ಕೆ ಪ್ರತಿಕ್ರಿಯಿಸುತ್ತವೆ.

ನಿಮ್ಮ ಮಗುವಿನ ಮುಂದೆ ಓದಿ.

ನಿಮಗೆ ಇಷ್ಟವಾಗಿರುವ ಕಥೆಯ ಪುಸ್ತಕವಾಗಿರಲಿ, ಮ್ಯಾಗಜಿನ್ ಆಗಿರಲಿ ಅಥವಾ ಗ್ರಾಫಿಕ್ ಕಾದಂಬರಿ ಆಗಿರಲಿ ನಿಮ್ಮ ಮಗುವಿನ ಮುಂದೆ ಓದಿರಿ. ಮಕ್ಕಳು ತಮ್ಮ ಕಂಗಳ ಮುಂದೆ ಏನು ಕಾಣುತ್ತಾರೋ ಅದನ್ನೇ ಅನುಸರಿಸುತ್ತಾರೆ. ಆದ್ದರಿಂದ ಸಹಜವಾಗಿ ಓದುವ ಗುಣವನ್ನು ಅವರೂ ಕೂಡ ಬೆಳೆಯಿಸಿಕೊಳ್ಳುತ್ತಾರೆ.

ಓದುವ ಜಾಗವನ್ನು ಸಜ್ಜುಗೊಳಿಸಿ.

ನಿಮ್ಮ ಓದಲು ಕುರುವ ಸ್ಥಳವು ದೊಡ್ಡದಾಗಿರಬೇಕಾಗಿಲ್ಲ ಅಥವಾ ಬಹಳಷ್ಟು ಪುಸ್ತಕದ ಕಪಾಟುಗಳನ್ನು ಹೊಂದಿರಬೇಕಾಗಿಲ್ಲ. ನಿಮ್ಮ ಸೋಫಾದ ಮೂಲೆ ಅಥವಾ ನಿಮ್ಮ ಮಗು ಮಲಗುವ ಕೋಣೆಯಲ್ಲಿನ ಕುರ್ಚಿಯನ್ನೂ ಆರಿಸಿಕೊಳ್ಳಬಹುದು ಆದರೆ ಒಂದು ಅಥವಾ ಎರಡು ಪುಸಕಗಳನ್ನು ಇರಿಸಿಕೊಳ್ಳಲು ಜಾಗ ಮತ್ತು ಸಾಕಷ್ಟು ಬೆಳಕು ಹೊಂದಿರುವ ಆರಾಮದಾಯಕ ಸ್ಥಳವಾಗಿರಬೇಕು. ಹೀಗೆ ಮಾಡುವುದರಿಂದ ನಿಮ್ಮ ಮಗು ಸಹಜ ಸ್ಥಿತಿಯಲ್ಲಿಯೂ ಹೇಗೆ ಓದಬಹುದೆಂದು ಕಲಿಯುತ್ತದೆ. ಇದರ ಜೊತೆಗೆ ನೀವು ಕುಳಿತುಕೊಂಡಾಗ ನಿಮ್ಮ ಬೆನ್ನು ನೇರವಾಗಿದೆ ಎಂಬುದರ ಬಗ್ಗೆ ಗಮನವಹಿಸಬೇಕು.

ಗ್ರಂಥಾಲಯಕ್ಕೆ ಮಗುವನ್ನು ಕರೆದುಕೊಂಡು ಹೋಗಿರಿ.

ನಿಮಗೆ ಬಿಡುವಿದ್ದಾಗ ನಿಮ್ಮ ಮಗುವನ್ನು ಗ್ರಂಥಾಲಕ್ಕೆ ಕರೆದುಕೊಂಡು ಹೋಗುವ ರೂಢಿ ಬೆಳೆಯಿಸಿಕೊಳ್ಳಿರಿ. ಏಕೆಂದರೆ, ಇದು ನಿಮ್ಮ ಮಗುವಿಗೆ ಅನೇಕ ಪುಸ್ತಕಗಳನ್ನು ಮತ್ತು ಲೇಖಕರನ್ನು ಪರಿಚಯ ಮಾಡಿಕೊಡಲು ಸಹಾಯಕವಾಗುತ್ತದೆ. ಬಹಳಷ್ಟು ಗ್ರಂಥಾಲಗಳು ಕಲಿಕೆಗೆ ಸಂಭಂದಿಸಿದ ಕಾರ್ಯಕ್ರಮಗಳನ್ನು ಆಯೋಜನೇ ಮಾಡುತ್ತವೆ. ಅಂತಹ ಕಾರ್ಯಕ್ರಮಗಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಓದಿನ ಬಗ್ಗೆ ವಿಶೇಷ ಆಸಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಬೇರೆ ಮಕ್ಕಳ ಜೊತೆ ಬೆರೆಯುವಂತೆ ಮಾಡುತ್ತದೆ.

ನಿಮ್ಮ ಮಗುವಿಗೆ ಪುಸ್ತಕದ ಆಯ್ಕೆ ಸ್ವತಂತ್ರ ಕೊಡಿ.

ನೀವು ಗ್ರಂಥಾಲಯಕ್ಕೆ ಹೋದಾಗ ನಿಮ್ಮ ಮಗುವಿಗೆ ಎಲ್ಲ ಪುಸ್ತಕಗಳ ಕಪಾಟುಗಳನ್ನು ನೋಡಲು ಸಮಯ ಕೊಟ್ಟು, ಅವರಿಗೆ ಇಷ್ಟವಾಗುವಂತಹ ಪುಸ್ತಕವನ್ನು ಆರಿಸಿಕೊಳ್ಳಲು ಅವಕಾಶ ಕೊಡಿ. ಅದು ಕಷ್ಟವೆನಿಸಿದರೆ, ಒಂದು ಪ್ರತ್ಯೇಕ ವಿಭಾಗ ಅಥವಾ ಶೆಲ್ಫ್ ತೋರಿಸಿಕೊಟ್ಟು, ಅದರಿಂದ ಪುಸ್ತವನ್ನು ಆರಿಸಿಕೊಳ್ಳುವಂತೆ ಹೇಳಿರಿ.

ದೈನಂದಿನ ಜೀವನದಲ್ಲಿ ಓದುವ ಅವಕಾಶಗಳನ್ನು ಹುಡುಕಿ.

ಓದುವುದೆಂದರೆ ಕೇವಲ ಒಳ್ಳೆಯ ಪುಸ್ತಕಗಳನ್ನು ಓದುತ್ತಾ ಕುಳಿತುಕೊಳ್ಳುವುದಲ್ಲ. ಇದು ನಮ್ಮ ದೈನಂದಿನ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು. ಉದಾಹರಣೆಗೆ, ದಿನದಲ್ಲಿ ನೀವು ತಿರುಗಾಡುವಾಗ ರಸ್ತೆ ಬದಿಯಲ್ಲಿರುವ ಚಿಹ್ನೆಗಳನ್ನು ಓದುವುದು, ದಿನಸಿ ಪಟ್ಟಿ ಅಥವ ಅಡುಗೆ ರೆಸಿಪಿಗಳ ವಿಧಾನವನ್ನು ಓದುವುದು ಆಗಿರಬಹುದು.

ಮೆಚ್ಚಿನ ಪುಸ್ತಕಗಳನ್ನು ಮತ್ತೆ ಓದಿ.

ಅದೇ ಕಥೆಯನ್ನು ಮತ್ತೆ ಮತ್ತೆ ಓದುವುದರಿಂದ ನೀವು ಬೇಸರಗೊಳ್ಳಬಹುದು, ಆದರೆ ನಿಮ್ಮ ಮಗು ಅದನ್ನು ಇಷ್ಟಪಡಬಹುದು. ಏಕೆಂದರೆ, ಮೊದಲ ಬಾರಿಗೆ ತಿಳಿಯದ ವಿಷಯಗಳು ಮರು-ಓದುವಿಕೆಯಿಂದ ತಿಳಿದುಕೊಂದಾಗ, ಅವರಿಗೆ ಕಥೆಯಲ್ಲಿ ಆಸಕ್ತಿ ಉಂಟಾಗುತ್ತದೆ. ಕಥೆಯಲ್ಲಿ ಉಪಯೋಗಿಸಿರುವ ಪದಗಳನ್ನು ಮನದಟ್ಟು ಮಾಡಿಕೊಳ್ಳುತ್ತಾರೆ ಮತ್ತು ಕೆಲ ದಿನಗಳ ನಂತರ ಅವರೇ ಕಥೆಯನ್ನು ಓದಲು ಆರಂಭ ಮಾಡುವುದನ್ನು ನೀವು ನೋಡಬಹುದು.

ಮಕ್ಕಳು ಹೇಗೆ ಓದುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ನೀವು ನಿಮ್ಮ ಮಗುವಿನ ಮೊದಲ ಶಿಕ್ಷಕರಾಗಿರುತ್ತಿರಿ. ಆದ್ದರಿಂದ, ಮಕ್ಕಳ ವಯಸ್ಸಿಗೆ ಅನುಗುಣವಾಗಿ ಅವರು ಏನನ್ನು ಓದಬೇಕು ಯಾವ ಕೌಶಲ್ಯಗಳನ್ನು ಹೊಂದಿರಬೇಕು ಎಂಬುದರ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಿರಿ. ಇದು ನಿಮ್ಮ ಮಗುವಿನ ಓದುವಿಕೆಯನ್ನು ಬೆಂಬಲಿಸಲು ಸಹಯ ಮಾಡುತ್ತದೆ.

Exit mobile version