ಮಕ್ಕಳ ವಿಕಾಸದಲ್ಲಿ ಶಿಕ್ಷಕರ ಮಾರ್ಗದರ್ಶನದ ಮಹತ್ವ | The Power of a Teacher’s Guidance in Shaping a Child’s Future

ಮಕ್ಕಳ ವಿಕಾಸದಲ್ಲಿ ಶಿಕ್ಷಕರ ಮಾರ್ಗದರ್ಶನದ ಮಹತ್ವ

“ಮಕ್ಕಳ ವಿಕಾಸದಲ್ಲಿ ಶಿಕ್ಷಕರ ಮಾರ್ಗದರ್ಶನದ ಮಹತ್ವ” – ಮಕ್ಕಳ ವಿಕಾಸದಲ್ಲಿ ಶಿಕ್ಷಕರ ಮಾರ್ಗದರ್ಶನ ಎಷ್ಟು ಮುಖ್ಯ ಎನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ. ಸಮಾಜದಲ್ಲಿ ಬದುಕಿ ಏನಾದರೂ ಸಾಧಿಸಬೇಕೆಂದರೆ ಅದಕ್ಕಾಗಿ ನಮಗೆ ಉತ್ತಮ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಈ ಮಾರ್ಗದರ್ಶನವು ಸರಿಯಾದ ದಾರಿ ತೋರಿಸಲು, ಗುಣಮಟ್ಟದ ಜೀವನವನ್ನು ಕಟ್ಟಲು ಸಹಾಯ ಮಾಡುತ್ತದೆ. ಹೀಗಾಗಿ, ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಮತ್ತು ಗುರುಗಳ ಪಾತ್ರವನ್ನು ಅತೀ ಮುಖ್ಯವಾಗಿದೆ. 

ಗುರುವಿನ ಮಹತ್ವ

ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ, ಶಿಕ್ಷಕರ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ. ಗುರುಗಳು ವಿದ್ಯಾರ್ಥಿಗಳಲ್ಲಿ ಗುರುತಿಸಬಹುದಾದ ಸೂಪ್ತ ಪ್ರತಿಭೆಗಳ ಅನಾವರಣಕ್ಕೆ ಕಾರಣವಾಗುತ್ತಾರೆ. ಗುರುಗಳ ಮಾರ್ಗದರ್ಶನದಿಂದ, ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಕಂಡುಕೊಂಡು ಅದಕ್ಕೆ ರೆಕ್ಕೆ ಕೊಡಬಹುದು. ಮಗುವಿನ ಆಸಕ್ತಿ ಅಭಿರುಚಿಗೆ ತಕ್ಕಂತೆ ಮಕ್ಕಳನ್ನು ತಯಾರಿಸಿ ಮಗುವಿನಲ್ಲಿ ಹುದುಗಿರುವ ಸೂಪ್ತ ಅದಮ್ಯ ಪ್ರತಿಭೆಯನ್ನು ಹೊರತೆಗೆದು ಮಾರ್ಗದರ್ಶನದ ಮೂಲಕ ಉನ್ನತ ಮಟ್ಟಕ್ಕೆ ಏರಿಸುವುದು ಶಿಕ್ಷಕರ ವೃತ್ತಿ ಧರ್ಮವಾಗಿದೆ.

ವಿದ್ಯಾರ್ಥಿಗಳ ಅಭಿರುಚಿಯ ಪ್ರಕಾರ ಮಾರ್ಗದರ್ಶನ

ಪ್ರತಿ ಮಕ್ಕಳಿಗೂ ವಿಭಿನ್ನ ಆಸಕ್ತಿಗಳು, ಅಭಿರುಚಿಗಳು ಇರುತ್ತವೆ. ವಿದ್ಯಾರ್ಥಿಗಳನ್ನು ಅವರ ಹೃದಯ ಬದ್ಧತೆ ಹಾಗೂ ಆಸಕ್ತಿಯ ಪ್ರಕಾರ ಮಾರ್ಗದರ್ಶನ ನೀಡುವುದು ಅತ್ಯಂತ ಮುಖ್ಯ. ಆದ್ದರಿಂದ, ತಕ್ಕ ಶಿಕ್ಷಕ ಅಥವಾ ಮಾರ್ಗದರ್ಶನ ಅವಶ್ಯಕವಾಗಿದೆ. ಯಾವುದೇ ಮಕ್ಕಳಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಎತ್ತರಕ್ಕೆ  ಬೆಳೆಸಲು ಸಾಧ್ಯವಾಗುತ್ತದೆ.

ಶಿಕ್ಷಕರ ಹೊಣೆಗಾರಿಕೆ ಮತ್ತು ಪ್ರೇರಣೆ

ಮಗುವಿನ ಸರ್ವಾಂಗೀಣ ವಿಕಾಸದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಅವರು ಮಕ್ಕಳಿಗೆ ಸ್ಪೂರ್ತಿದಾಯಕ ಕಥೆಗಳನ್ನು, ಸಾಧಕರ ಜೀವನ ಚರಿತ್ರೆಯನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವಂತೆ ಮನವರಿಕೆ ಮಾಡಬೇಕು.ಮಕ್ಕಳಿಗೆ ಪ್ರೇರಣೆಯ ಕಥೆಗಳು ಹಾಗೂ ಸಾಧಕರ ಜೀವನವನ್ನು ಹಂಚುವ ಮೂಲಕ, ಅವರು ಜೀವನದ ಕಠಿಣತೆಗಳನ್ನು ಸರಾಗವಾಗಿ ಮೆಟ್ಟಲು ಸಹಾಯ ಮಾಡಬಹುದು.ವಿ ದ್ಯಾರ್ಥಿಗಳಿಗೆ ಪ್ರೇರಣೆಯಾದ ವ್ಯಕ್ತಿಗಳ ಜೀವನವನ್ನು ಬೋಧಿಸುವುದರಿಂದ, ಅವರು ತಮ್ಮ ಕೌಶಲ್ಯಗಳನ್ನು ಯಶಸ್ಸಿನ ಮಾರ್ಗಕ್ಕೆ ಕೊಂಡೊಯ್ಯಬಹುದು. 

ತಂತ್ರಜ್ಞಾನ ಮತ್ತು ಮಕ್ಕಳ ಮಾರ್ಗದರ್ಶನ

ಈಗಿನ ಸಮಯದಲ್ಲಿ ಮಕ್ಕಳ ಸಮಾಲೋಚನೆ ಹಾಗೂ ಕಲಿಕೆಗೆ ತಂತ್ರಜ್ಞಾನಗಳಾದ ಇಂಟರ್ನೆಟ್, ಆಪ್‌ಗಳು, ಆನ್ಲೈನ್ ಪಾಠಗಳು ಸೇರಿದಂತೆ ಹಲವು  ಹೊಸ ಆಯ್ಕೆಗಳನ್ನು ಶಿಕ್ಷಕರು ಮತ್ತು ಮನೆಯಲ್ಲಿ ತಂದೆ ತಾಯಿಯು    ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಲು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ತಂತ್ರಜ್ಞಾನಗಳ ಸದುಪಯೋಗ ಪಡೆದುಕೊಂಡಲ್ಲಿ ಮಕ್ಕಳು ಉತ್ತಮವಾಗಿ ವಿಷಯಗಳನ್ನು ಕಲಿಯಬಹುದು. 

ವೃತ್ತಿ ಮಾರ್ಗದರ್ಶನ ಮತ್ತು ನೈತಿಕತೆಯ ಪ್ರಮುಖತೆ

ಇಂದಿನ ಯುವಜನತೆ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ.  ಆದರೂ, ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುವುದರಿಂದ, ಅವರು ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಸಕಾರಾತ್ಮಕ ತತ್ವಗಳನ್ನು ಅಳವಡಿಸಿಕೊಳ್ಳಬಹುದು. ದುಡ್ಡು ಅಥವಾ ಕೀರ್ತಿಗಾಗಿ ಕೆಲಸ ಮಾಡುವುದರ ಬದಲು, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮನೋಭಾವವನ್ನು ಗುರುಗಳು ಮಕ್ಕಳಿಗೆ ಹೇಳಬೇಕಾಗುತ್ತದೆ.

ವೃತ್ತಿ ಯೋಜನೆ ಮತ್ತು ಪ್ರಜ್ಞಾವಂತ ನಾಯಕತ್ವ

ಈಗಿನ ಮಕ್ಕಳೇ ನಾಳಿನ ಪ್ರಜೆಗಳು. ಹಾಗಾಗಿ ಮಕ್ಕಳಿಗೆ ಅವರ ವೃತ್ತಿ ಜೀವನವನ್ನು ಸರಿಯಾದ ರೀತಿಯಲ್ಲಿ ಯೋಜನೆ ಮಾಡಿಕೊಳ್ಳಲು ಸಹಾಯ ಸಿಗಬೇಕು. ಮಕ್ಕಳಿಗೆ ನೈತಿಕತೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಹೇಳಿ ಕೊಡುವುದರಿಂದ ಅವರು ಇಂತಹ ಹುದ್ದೆಯಲ್ಲಿ ಇದ್ದರೂ ಅದನ್ನು ಶಿಸ್ತಿನಿಂದ ನಿಭಾಯಿಸುತ್ತಾರೆ. 


ಹೀಗಾಗಿ, ವಿದ್ಯಾರ್ಥಿಗಳ  ಕಲಿಕಾ ಗುಣಮಟ್ಟ ಮತ್ತು ಸೃಜನಶೀಲತೆ ಹೆಚ್ಚಿಸಿ ತಾವು ಬಯಸುವ ಮಾರ್ಗವನ್ನು ಹುಡುಕಲು, ತಮ್ಮ ಸ್ವಂತ ಹೋರಾಟಗಳಲ್ಲಿ ನಂಬಿಕೆ ಮತ್ತು ಪ್ರೇರಣೆಯನ್ನು ಪಡೆಯಲು ಮಾರ್ಗದರ್ಶನ ಅತ್ಯಂತ ಅಗತ್ಯವಾಗಿದೆ.

ಲೇಖಕಿ: ವಿಜಯಲಕ್ಷ್ಮಿ ಹಿರೇಮಠ


The Power of a Teacher’s Guidance in Shaping a

Child’s Future

We all know how important the guidance of teachers is in the development of children. To live in society and achieve something, we need good guidance. This guidance helps to show the right path and build a quality life. Thus, the role of mothers and teachers is very important in the development of children.

Importance of a Teacher

The role of a teacher is very important in the all-round development of a child. Teachers are responsible for revealing the hidden talents that can be identified in students. With the guidance of teachers, children can find the talent hidden in them and give it wings. The teacher’s profession is to prepare children according to the interests and tastes of the child and bring out the hidden talent embedded in the child and raise it to a higher level through guidance.

Guidance according to the interests of students

Every child has different interests and tastes. It is very important to guide students according to their heart’s commitment and interest. Therefore, a suitable teacher or guidance is necessary. It is possible to identify the talents in any child and develop them to a higher level.

Teacher’s Responsibility and Motivation

Teachers play a vital role in the all-round development of a child. They should convince children to adopt inspirational stories and biographies of achievers. By sharing inspirational stories and lives of achievers with children, they can help them to overcome the hardships of life smoothly. By teaching students the lives of inspiring people, they can take their skills to the path of success.

Technology and Child Guidance

In this day and age, there are many new options for child counseling and learning, including technologies such as the internet, apps, online lessons, teachers and parents at home should guide children to use them in the right way. Children can learn better if they make good use of technologies.

Importance of Career Guidance and Ethics

Today’s youth have the ability to shape their own future. However, by giving children the right guidance, they can adopt positive principles in their personal and professional lives. Teachers need to instill in children the attitude of contributing to society instead of working for money or fame.

Career Planning and Conscious Leadership

Today’s children are the citizens of tomorrow. Therefore, children should be helped to plan their careers in the right way. By teaching children about morality and honesty, they will handle such positions with discipline.

Thus, guidance is very necessary to increase the quality of learning and creativity of students and to find the path they want, to gain faith and motivation in their own struggles.

Leave a Reply

Your email address will not be published. Required fields are marked *