Site icon Kannada Chetana

ರುದ್ರಾಕ್ಷಿಯ 21 ಪ್ರಕಾರಗಳು ಮತ್ತು ಅವುಗಳ ಮಹತ್ವ

Rudraksha in kannada

Rudraksha

ರುದ್ರನ- ಅಕ್ಷಿಯೇ, ರುದ್ರಾಕ್ಷಿ. ಹಿಂದೂಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಹಿಮಾಲಯ ಪ್ರದೇಶದಲ್ಲಿ ಹೆಚ್ಚಾಗಿ ರುದ್ರಾಕ್ಷಿ ಮರಗಳು ಕಂಡು‌ಬರುತ್ತವೆ. ನೈಸರ್ಗಿಕವಾಗಿ ಬೆಳೆದ ರುದ್ರಾಕ್ಷವು “ಹಿಮಾಲಯ ಬೀಜ” ಎಂಬ ವಿಭಿನ್ನ ಹೆಸರನ್ನು ಹೊಂದಿದೆ. ರುದ್ರಾಕ್ಷಿಗೆ ಪೂಜೆ-ಪುರಸ್ಕಾರಗಳಲ್ಲಿ ವಿಶೇಷವಾದ ಸ್ಥಾನವಿದೆ ಮತ್ತು ಇದು ಔಷಧೀಯ ಗುಣಗಳನ್ನು ಕೂಡ ಹೊಂದಿದೆ. ಪುರಾಣದ ಪ್ರಕಾರ ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ, ಪರಶಿವನ ಕಣ್ಣಿನಿಂದ ಬಂದ ಆನಂದದ ಕಣ್ಣೀರಿನ ಹನಿಗಳು ರುದ್ರಾಕ್ಷಿ ಮಣಿಗಳಾದವು ಎಂಬ ನಂಬಿಕೆ ಇದೆ. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ ಮಣಿಗಳು ಶಿವಭಕ್ತರ ಕೊರಳ ಮಣಿ-ಮಾಲೆಯಾಗಿಯೂ, ಹಾಗೂ ಜಪಮಾಲೆಯಾಗಿಯೂ ಕಂಡುಬರುತ್ತವೆ.

ಈ ವೃಕ್ಷಗಳು ಶೀಘ್ರಗತಿಯಲ್ಲಿ ಫಲನೀಡುವ ಜಾತಿಗೆ ಸೇರಿದ ಮರಗಳು. 3-4 ವರ್ಷಗಳಲ್ಲೇ ರುದ್ರಾಕ್ಷಿ ಮರ ಬೀಜಗಳನ್ನು ಬಿಡತೊಡಗುತ್ತವೆ. ಇಂಥಹ ರುದ್ರಾಕ್ಷಿಗಳಲ್ಲಿ ಏಕಮುಖದಿಂದ ಹಿಡಿದು ಇಪ್ಪತ್ತೊಂದು ಮುಖದ ರುದ್ರಾಕ್ಷಿವರೆಗೂ ಒಳಜಾತಿಗಳಿವೆ. ಪ್ರತಿಯೊಂದಕ್ಕೂ ಅದರದೇ ಆದ ವಿಶೇಷ ಸ್ಥಾನಮಾನವಿದೆ. ಭಕ್ತಾದಿಗಳು ರುದ್ರಾಕ್ಷಿಮಾಲೆಯನ್ನು  ಧರಿಸುವುದರಿಂದ ಶಿವನ ವಿಶೇಷವಾದ ಅನುಗ್ರಹಕ್ಕೆ ಪಾತ್ರರಾಗಬಹುದು.

1 ಮುಖಿ ರುದ್ರಾಕ್ಷಿ

ಏಕ ಮುಖ ರುದ್ರಾಕ್ಷಿಯನ್ನು ಸಾಕ್ಷಾತ್ ”ಶಿವನ” ಸ್ವರೂಪವೆಂದು ಹೇಳುತ್ತಾರೆ. ಒಂದು ರುದ್ರಾಕ್ಷಿ ಮರದಲ್ಲಿ ಏಕಮುಖ ರುದ್ರಾಕ್ಷಿಯು ಒಂದೇ ಒಂದು ಬಿಡುತ್ತದೆ . ಇದು ಬಹಳ ಭಾಗ್ಯಶಾಲಿಯೂ ಮತ್ತು ಶಿವನಿಗೆ ಪ್ರೀತಿ ಪಾತ್ರನೂ ಆದವನಿಗೆ ಮಾತ್ರ ದೊರೆಯುತ್ತದೆ ಎಂಬ ನಂಬಿಕೆ ಇದೆ. ಇದಕ್ಕೆ ಬೆಲೆ ಬಹಳ ಜಾಸ್ತಿ. ಈ ಬಗೆಯ ರುದ್ರಾಕ್ಷಿ ಧರಿಸಿದರೆ ಇಹದ ಎಲ್ಲ ಸಕಲ ಸೌಭಾಗ್ಯಗಳು ಈಶ್ವರನ ಕೃಪೆಯಿಂದ  ದೊರೆಯುತ್ತದೆ ಎಂಬ ಬಲವಾದ ನಂಬಿಕೆಯ ಇದೆ.

2 ಮುಖಿ ರುದ್ರಾಕ್ಷಿ

ಇದು “ಶಿವ ಪಾರ್ವತಿ” ಸ್ವರೂಪ ಎಂದು ಹೇಳುತ್ತಾರೆ. ಈ ರುದ್ರಾಕ್ಷಿಯು ಸಿಗುವುದು ತುಂಬಾ ವಿರಳ. ಇದನ್ನು ಧರಿಸುವುದರಿಂದ ಗೋಹತ್ಯೆಯ ಮತ್ತು ಇತರೆ ದೋಷಗಳು ನಾಶವಾಗುತ್ತದವೆ. ಈ ರುದ್ರಾಕ್ಷಿಯು ಉತ್ತಮ ಗೃಹಸ್ಥ ಜೀವನದ ಸುಖ ಶಾಂತಿ, ಸೌಭಾಗ್ಯವನ್ನು ಕೊಡುವುದು. ಇದರ ಬೆಲೆಯೂ ತುಂಬಾ ಹೆಚ್ಚು. 

3 ಮುಖಿ ರುದ್ರಾಕ್ಷಿ

ಮೂರುಮುಖದ ರುದ್ರಾಕ್ಷಿ “ಅಗ್ನಿ ದೇವನ” ಸ್ವರೂಪ. ಇದು ಬಹಳ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ. ಇದನ್ನು ಧರಿಸುವುದರಿಂದ ಸಕಲ ಪಾಪಗಳೂ ನಿವಾರಣೆ ಆಗುವುದು. ಇದರ ಬೆಲೆಯೂ ಸ್ವಲ್ಪ ಹೆಚ್ಚು.

4 ಮುಖಿ ರುದ್ರಾಕ್ಷಿ

ಇದು “ಬ್ರಹ್ಮನ ಸ್ವರೂಪ”. ಇದು ಸಾಕಷ್ಟು ಪ್ರಮಾಣದಲ್ಲಿ ದೊರೆಯುವುದು. ಇದು ಭ್ರೂಣ ಹತ್ಯಾದೋಷವನ್ನು ನಿವಾರಣೆ ಮಾಡುವುದು. ಸ್ಮರಣ ಶಕ್ತಿ, ಬುದ್ದಿಶಕ್ತಿ ,ಶಿಕ್ಷಣ ಸಫಲತೆ ದೊರಕುವುದೆಂದು ಹೇಳುವರು. ಇದರ ಬೆಲೆ ಸಾಧಾರಣ ಮಟ್ಟದ್ದು.

5 ಮುಖಿ ರುದ್ರಾಕ್ಷಿ

ಪಂಚ ಮುಖಿ ರುದ್ರಾಕ್ಷಿಯನ್ನು ಸ್ವಯಂ ಭಗವಾನ್ “ಶಂಕರನ” ಸ್ವರೂಪ.
ಹೆಚ್ಚಿನ ರುದ್ರಾಕ್ಷಿಗಳು ಪಂಚಮುಖಿ ಆಗಿರುತ್ತವೆ. ಈ ರುದ್ರಾಕ್ಷಿ ಹೆಚ್ಚು ಸಿಗುವುದರಿಂದ ಬೆಲೆಯೂ ಕಡಿಮೆ. ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಶಿವನ ಕೃಪೆ ದೊರಕಿ ಮನಸ್ಸಿಗೆ ಶಾಂತಿದೊರಕುವುದು ಎಂಬ ನಂಬಿಕೆ ಇದೆ.

6 ಮುಖಿ ರುದ್ರಾಕ್ಷಿ

ಈ ರುದ್ರಾಕ್ಷಿ ಶಿವ ಪುತ್ರ ಕುಮಾರ ಕಾರ್ತಿಕೇಯ’ನ ರೂಪ. ಈ ರುದ್ರಾಕ್ಷಿಯೂ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವುದು. ಈ ರುದ್ರಾಕ್ಷಿ ಧರಿಸುವುದರಿಂದ ಅಧರ್ಮಾಚರಣೆ ಮಾಡಿದ್ದಲ್ಲಿ ಮತ್ತು ಅದರಿಂದ ಉಂಟಾದ ಪಾಪಗಳು ನಿವಾರಣೆ ಆಗುವುದು ಹಾಗೂ ಸ್ಮರಣ ಶಕ್ತಿ ಹೆಚ್ಚುವುದು ಎಂಬ ನಂಬಿಕೆ ಇದೆ.

7 ಮುಖಿ ರುದ್ರಾಕ್ಷಿ

ಏಳು ಮುಖದ ರುದ್ರಾಕ್ಷಿ ಅನಂತ “ನಾಗನ” (ಅಥವಾ ಆದಿಶೇಷನ ) ಸ್ವರೂಪ. ಇದೂ ಸಹ ವಿರಳವಾಗಿ ದೊರೆಯುವುದು. ಆದ್ದರಿಂದ ಬೆಲೆ ಹೆಚ್ಚು. ಈ ರುದ್ರಾಕ್ಷಿ ಧರಿಸುವುದರಿಂದ ಹಾವಿನ ಭಯ ಇರುವುದಿಲ್ಲ. ಶರೀರ ಧೃಢವಾಗಿ ಬುದ್ಧಿ ಚುರುಕಾಗುವುದು.

8 ಮುಖಿ ರುದ್ರಾಕ್ಷಿ

ಈ ರುದ್ರಾಕ್ಷಿಯು “ಗಣಪತಿಯ” ರೂಪವಾಗಿದೆ. ಈ ರುದ್ರಾಕ್ಷಿ ಬಹಳ ಕಡಿಮೆ ಪ್ರಮಾಣದಲ್ಲಿ ದೊರಕುತ್ತದೆ, ಬೇಡಿಕೆ ಜಾಸ್ತಿ, ಆದ್ದರಿಂದ ಬೆಲೆ ಜಾಸ್ತಿ. ಈ ರುದಾಕ್ಷಿಯನ್ನು ಧರಿಸುವುದಿಂದ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ. 

10 ಮುಖಿ ರುದ್ರಾಕ್ಷಿ

ಈ ರುದ್ರಾಕ್ಷಿ ಭಗವಾನ್ “ನಾರಾಯಣನ” ಸ್ವರೂಪ. ಈ ರುದ್ರಾಕ್ಷಿ ಧಾರಣೆಯಿಂದ ಇಹದ ಎಲ್ಲ ಸೌಲಭ್ಯಗಳೂ ಲಭಿಸುತ್ತದೆ ಮತ್ತು ಸದಾ ಸುಖ ಶಾಂತಿ ಸಿಗುವುದು.

11 ಮುಖಿ ರುದ್ರಾಕ್ಷಿ

ಭಗವಾನ್ ಶಿವನ 11 ನೇ ಅವತಾರವನ್ನು ವಿವರಿಸುತ್ತದೆ, ಇದು ಅಪಾರ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಬೆಳೆಸುತ್ತದೆ.

12 ಮುಖಿ ರುದ್ರಾಕ್ಷಿ

ಭಗವಾನ್ ಸೂರ್ಯನೊಂದಿಗೆ ಸಂಬಂಧ ಹೊಂದಿದ್ದು, ಇದು ನಾಯಕತ್ವದ ಗುಣಗಳನ್ನು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

13 ಮುಖಿ ರುದ್ರಾಕ್ಷಿ

“ಇಂದ್ರ ದೇವನ” ಸ್ವರೂಪ ಎಂದು ಭಾವಿಸುತ್ತಾರೆ. ಈ ರುದ್ರಾಕ್ಷಿಯ ಧಾರಣೆಯಿಂದ ಆತ್ಮ ಶಾಂತಿ ಹಾಗೂ ಶಾರೀರಿಕ ಶಾಂತಿ ದೊರೆಯುವುದು.

14 ಮುಖಿ ರುದ್ರಾಕ್ಷಿ

ಭಗವಾನ್ ಹನುಮಂತ’ನಿಗೆ ಸಂಬಂಧಿಸಿದೆ, ಇದು ಧೈರ್ಯವನ್ನು ತುಂಬುತ್ತದೆ. ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಮತ್ತು ಅಡೆತಡೆಗಳನ್ನು ಜಯಿಸಲು ಸಹಾಯ ಮಾಡುತ್ತದೆ.

15 ಮುಖಿ ರುದ್ರಾಕ್ಷಿ

ಇದು ಅಪರೂಪದ ರುದ್ರಾಕ್ಷ ಆದರೆ ಪ್ರಬಲವಾಗಿದೆ. ಇದು ದೀರ್ಘಕಾಲದ ಕಾಯಿಲೆಗಳ ವಿರುದ್ಧ ರಕ್ಷಣೆ ಮತ್ತು ಕಾವಲು ನೀಡುತ್ತದೆ.

16 ಮುಖಿ ರುದ್ರಾಕ್ಷಿ

ಈ ರುದ್ರಾಕ್ಷಿಯೂ ಸಾವು ಮತ್ತು ಭಯದ ಮೇಲೆ ವಿಜಯವನ್ನು ಸಂಕೇತಿಸುತ್ತದೆ, ದೀರ್ಘಕಾಲದ ಕಾಯಿಲೆಗಳು ಮತ್ತು ನಕಾರಾತ್ಮಕತೆಯನ್ನು ಹೊರಹಾಕುತ್ತದೆ.

17 ಮುಖಿ ರುದ್ರಾಕ್ಷಿ

ಸೃಜನಶೀಲತೆ, ಕೌಶಲ್ಯ, ಸ್ಮರಣೆ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ.

18 ಮುಖಿ ರುದ್ರಾಕ್ಷಿ

ವೃತ್ತಿ ಬೆಳವಣಿಗೆ ಮತ್ತು ವೃತ್ತಿಪರ ಪ್ರಗತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

19 ಮುಖಿ ರುದ್ರಾಕ್ಷಿ

ಎಲ್ಲಾ ಏಳು ಚಕ್ರಗಳನ್ನು ತೆರೆಯುತ್ತದೆ ಎಂದು ನಂಬಲಾಗಿದೆ. ಈ ಶಕ್ತಿಯುತ ಮಣಿ ಅಪರೂಪ ಮತ್ತು ಹೆಚ್ಚು ಶಕ್ತಿಯುತವಾಗಿದೆ.

20 ಮುಖಿ ರುದ್ರಾಕ್ಷಿ

ಭಗವಂತ ಬ್ರಹ್ಮನೊಂದಿಗೆ ಸಂಬಂಧ ಹೊಂದಿದ್ದು, ಇದು ಶಾಂತತೆಯನ್ನು ತರುತ್ತದೆ ಮತ್ತು ಜೀವನದಲ್ಲಿ ಆಳವಾದ ಬದಲಾವಣೆಗಳನ್ನು ತರುತ್ತದೆ.

21 ಮುಖಿ ರುದ್ರಾಕ್ಷಿ

ಅತ್ಯಂತ ಅಪರೂಪದ ರುದ್ರಾಕ್ಷ, ಇದು  ಕುಬೇರನೊಂದಿಗೆ ಸಂಬಂಧ ಹೊಂದಿದೆ. ಸಂಪತ್ತು, ಹಣ ಮತ್ತು ಸಮೃದ್ಧಿಯನ್ನು ನೀಡುವ ಶಕ್ತಿಯನ್ನು ಹೂಂದಿದೆ.

Exit mobile version