ಹೋಳಿಯು ಸಾಂಪ್ರದಾಯಿಕವಾಗಿ ಅನೇಕ ಸಮುದಾಯಗಳ ನಡುವಿನ ಅಂತರವನ್ನು ನಿವಾರಿಸಲು ಮತ್ತು ಎಲ್ಲರನ್ನು ಒಟ್ಟಿಗೆ ಸೇರಿಸಲು ತಿಳಿದಿರುವ ಹಬ್ಬವಾಗಿದೆ. ಬಣ್ಣಗಳು, ವಾಟರ್ ಗನ್ಗಳು, ಹಾಡುಗಾರಿಕೆ, ನೃತ್ಯ ಮತ್ತು ಅಂತ್ಯವಿಲ್ಲದ ವಟಗುಟ್ಟುವಿಕೆಗಳೊಂದಿಗೆ ಆಟವಾಡುವುದು ಹೋಳಿಯನ್ನು ನಮ್ಮ ಅತ್ಯಂತ ಮೆಚ್ಚಿನ ಹಬ್ಬಗಳಲ್ಲಿ ಒಂದನ್ನಾಗಿ ಮಾಡುತ್ತದೆ ಮತ್ತು ಯಾವುದೇ ಭಾರತೀಯ ಹಬ್ಬದಂತೆ ಹೋಳಿಯು ಅದರ ಸಹಿ ಭಕ್ಷ್ಯಗಳೊಂದಿಗೆ ತುಂಬಿರುತ್ತದೆ. ಅಂತಹ ಕೆಲವು ಸಾಂಪ್ರದಾಯಕ ತಿಂಡಿಗಳು ಇಲ್ಲಿವೆ.
ಹೋಳಿ ಆಚರಣೆ 2024: ದಿನಾಂಕ, ಮಹತ್ವ ಮತ್ತು ಇತಿಹಾಸ
Table of Contents
ಗುಜಿಯಾ
ಖೋಯಾ, ಬೆಲ್ಲ, ಬೀಜಗಳು ಮತ್ತು ಒಣದ್ರಾಕ್ಷಿಗಳಿಂದ ತುಂಬಿದ ಎಣ್ಣೆಯಲ್ಲಿ ಕರೆದ ಕಡಬುಗಳು. ಇದನ್ನು ಸಕ್ಕರೆ ಪಾಕದಲ್ಲಿ ನೆನೆಯಿಸಿ ಇಡಲಾಗುತ್ತದೆ. ಇದು ಸಾಂಪ್ರದಾಯಿಕ ಹೋಳಿ ಹಬ್ಬದಲ್ಲಿ ಭಾರೀ ಸಿಹಿತಿಂಡಿಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ, ಗುಜಿಯಾಗಳ ಹಲವಾರು ವಿಧಗಳು ಮಾರುಕಟ್ಟೆಗೆ ಬಂದಿವೆ; ಉದಾಹರಣೆಗೆ, ಚಾಕೊಲೇಟ್ ಗುಜಿಯಾಗಳು, ಕಡಿಮೆ ಸಕ್ಕರೆ ಗುಜಿಯಾಗಳು ಇತ್ಯಾದಿ. ನಿಮ್ಮ ಆಯ್ಕೆಗೆ ಅನುಗುಣವಾಗಿ ನೀವು ಇದನ್ನು ತಯಾರಿಸಬಹುದು.
ದಹಿ ವಡಾ / ದಹಿ ಭಲ್ಲೆ
ಉದ್ದಿನ ಬೆಳೆ ಮತ್ತು ಹೆಸರು ಬೆಳೆಯನ್ನು ರಾತ್ರಿ ನೆನೆಸಿ ಇಟ್ಟು, ಬೆಳಿಗ್ಗೆ ಎಣ್ಣೆಯಲ್ಲಿ ಕರೆದು ನೀರಿನಲ್ಲಿ ಒಂದು ಗಂಟೆಯ ಕಾಲ ನೆನೆಯಿಸಬೇಕು. ನಂತರ ವಡೆಯನ್ನು ಹಿಸುಕಿ ನೀರನ್ನು ತಗೆದು, ಮೊಸರನ್ನು ವಡಾಗಳ ಮೇಲೆ ಹಾಕಿ ಕರಿ ಉಪ್ಪು, ಜೀರಿಗೆ ಪುಡಿ ಮತ್ತಿ ಕೆಂಪು ಮೆಣಸಿನ ಪುಡಿ ಉದುರಿಸಿರಿ ಸವಿದರೆ ಆಹ್ಹಾ ಬೇರೆ ಲೋಕಕ್ಕೆ ಹೋದಂತೆ ಇರುವುದು.
ಮಲ್ಪುವಾ
ಇತಿಹಾಸಕಾರರ ಪ್ರಕಾರ, ಮಲ್ಪುವಾ ಅತ್ಯಂತ ಹಳೆಯ ಸಿಹಿತಿಂಡಿ ಎಂದು ಹೇಳಲಾಗುತ್ತದೆ. ಪ್ಯಾನ್ಕೇಕ್ ಗೆ ಹೋಲುವ ಮಲ್ಪುವಾ ವನ್ನು ಶುದ್ಧ ತುಪ್ಪದಲ್ಲಿ ಕರೆಯಲಾಗುತ್ತದೆ ಮತ್ತು ಸಕ್ಕರೆಯ ಪಾಕದಲ್ಲಿ ನೆನೆಯಿಸಿ ಇಡಲಾಗುತ್ತದೆ. ಇದನ್ನು ರಬ್ದಿಯೊಂದಿಗೆ ಕೂಡ ಸವಿಯಬಹುದು.
ನಮಕ್ ಪಾರೆ
ನಮಕ್ ಪಾರೆ ಉಪ್ಪು, ಅಜವೈನ್ ಅಥವಾ ಮಸಾಲೆಗಳೊಂದಿಗೆ ಸುವಾಸನೆಯ ಕರೆದ ತಿಂಡಿಯಾಗಿದೆ. ಸಂತೋಷಕರ ಅನುಭವಕ್ಕಾಗಿ ಬಿಸಿ ಬಿಸಿ ಚಹಾದೊಂದಿಗೆ ಇದನ್ನು ಸೇವಿಸಬಹುದು.
ಥಂಡೈ
ಇದು ಒಂದು ಮಿಲ್ಕ್ ಶೆಕ್ ಎನ್ನಬಹುದು. ವಿವಿಧ ಒಣ ಹಣ್ಣುಗಳಾದ ಗೋಡಂಬಿ, ಬಾದಾಮಿ, ಪಿಸ್ತಾ,ಕಲ್ಲಂಗಡಿ ಬೀಜಗಳು,ಹಸಿರು ಏಳಕ್ಕೆ ಚಕ್ಕೆ , ಮೆಣಸು ಹಾಲಿನಲ್ಲಿ ನೆನೆಸಿಟ್ಟು ನುಣ್ಣಗೆ ಪೇಸ್ಟ್ ಮಾಡಿಕೊಂಡು ತಣ್ಣಗಿನ ಹಾಲಿನ ಜೊತೆಗೆ ಮಿಕ್ಸ್ ಅಂಡ್ ಶೇಕ್ ಮಾಡಿ ತಯಾರಿಸಲಾಗುತ್ತದೆ. ಥಂಡೈ ವಿವಿಧ ರೀತಿಗಲ್ಲಿ ಮಾಡಲಾಗುತ್ತದೆ. ಉದಾಹರಣೆಗೆ ಮಾವಿನ ಹಣ್ಣು ಸೇರಿಸಿ, ಸೀಬೆ ಹಣ್ಣು ಸೇರಿಸಿ ಬೇರೆ ಬೇರೆ ಫ್ಲೇವರ್ ಜೊತೆಗೆ ಮಾಡಬಹುದು. ಈ ಸಾಲದ ಹೋಳಿ ಹಬ್ಬಕ್ಕೆ ತಪ್ಪದೆ ಥಂಡೈ ಮಾಡಿ ಸವಿಯಿರಿ.
Also Read : ಹೋಳಿ ಆಚರಣೆ 2024: ದಿನಾಂಕ, ಮಹತ್ವ ಮತ್ತು ಇತಿಹಾಸ